ಕರ್ನಾಟಕ

karnataka

ETV Bharat / state

ಸಿಡಿ ಹಿಂದೆ ಯಾರಿದ್ದಾರೆ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ: ಎಸ್.ಟಿ. ಸೋಮಶೇಖರ್ - Ramesh Zarakiholi lastest news

ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ಇದೆಯಾ ಎಂಬ ಪ್ರಶ್ನೆಗೆ ಬಿಜೆಪಿ ಕಚೇರಿಯಲ್ಲಿ ನೀಡಿದ ಹೇಳಿಕೆ ಬದಲಾಯಿಸಿ ಮತ್ತೊಂದು ಹೇಳಿಕೆ ನೀಡಿದರು. ನಮಗೆ ಯಾರ ಮೇಲೂ ಶಂಕೆ‌ ಇಲ್ಲ. ರಾಜಕಾರಣಿಗಳನ್ನೇ ಯಾಕೆ ಟಾರ್ಗೆಟ್ ಮಾಡ್ತಿದಾರೆ? ಎಂದರು.

S T Somashekhar
ಸಚಿವ ಎಸ್.ಟಿ. ಸೋಮಶೇಖರ್

By

Published : Mar 10, 2021, 4:22 PM IST

ಬೆಂಗಳೂರು: ಸಿಡಿ ಹಿಂದೆ ಯಾರಿದ್ದಾರೆ ಅಂತ ರಮೇಶ್ ಜಾರಕಿಹೊಳಿಯವರೇ ಹೇಳಿದ್ದಾರೆ. ಅವರು ಹೇಳಿರೋದನ್ನ ನಾನು ಮತ್ತೆ ಹೇಳಲು ಹೋಗಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಸಚಿವ ಎಸ್.ಟಿ. ಸೋಮಶೇಖರ್

ವಿಧಾನಸೌಧದಲ್ಲಿ ಗೃಹ ಸಚಿವ ಬೊಮ್ಮಾಯಿ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ ಇದೆಯಾ ಎಂಬ ಪ್ರಶ್ನೆಗೆ ಬಿಜೆಪಿ ಕಚೇರಿಯಲ್ಲಿ ನೀಡಿದ ಹೇಳಿಕೆ ಬದಲಾಯಿಸಿ ಮತ್ತೊಂದು ಹೇಳಿಕೆ ಕೊಟ್ಟರು.

ನಮಗೆ ಯಾರ ಮೇಲೂ ಶಂಕೆ‌ ಇಲ್ಲ. ರಾಜಕಾರಣಿಗಳನ್ನೇ ಯಾಕೆ ಟಾರ್ಗೆಟ್ ಮಾಡ್ತಿದಾರೆ? ಇದರ ಹಿಂದೆ ಯಾರೇ ಇದ್ರೂ ಸಿಬಿಐ ತನಿಖೆ ಮಾಡಿ ಅನ್ನೋದು ನಮ್ಮ ಒತ್ತಾಯ ಎಂದರು.

ಓದಿ:ಸಿಡಿ ಕುರಿತು ತನಿಖೆಯ ಬಗ್ಗೆ ಸಂಜೆಯೊಳಗೆ ಸ್ಪಷ್ಟ ನಿರ್ಧಾರ : ಸಿಎಂ ಬಿಎಸ್​ವೈ

ಅನೈತಿಕತೆಯಿಂದಲೇ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಉಂಟಾಗಿದೆ. ನಾನು 20 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಹೀಗಾಗಿ ನಮಗೆ ನೈತಿಕತೆ ಬಗ್ಗೆ ಹೇಳಿಕೊಡುವ ಅವಶ್ಯಕತೆ ಇಲ್ಲ. ಇಡೀ ರಾಜ್ಯಕ್ಕೆ ಗೊತ್ತಿದೆ, ಯಾರದ್ದು ಅನೈತಿಕತೆ ಅನ್ನೋದು. ಈ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯ ಮಾಡಿದ್ದೇವೆ. ತಡೆಯಾಜ್ಞೆ ತಂದಿದ್ದೇ ತಪ್ಪಾ?. ಬೆಂಗಳೂರಿನಿಂದ ದೆಹಲಿಯವರೆಗೆ ಬೇಲ್‌ ಮೇಲೆ‌ ಯಾರು ಇದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನು ಕೋರ್ಟ್‌ಗೆ ಹೋಗಿದ್ದರಲ್ಲಿ ತಪ್ಪಿಲ್ಲ. ರಾಜಕಾರಣಿಗಳೇ ಇಲ್ಲಿ ಟಾರ್ಗೆಟ್ ಆಗುತ್ತಿದ್ದಾರೆ. ಕೇವಲ ಐದು ನಿಮಿಷದಲ್ಲಿ ತೇಜೋವಧೆ ಮಾಡುವ ಯತ್ನ ನಡೆದಿದೆ ಎಂದು ಎಂದರು.

ABOUT THE AUTHOR

...view details