ಬೆಂಗಳೂರು: ಹೆಡಗೇವಾರ್ ಯಾವನು?. ಏನು ಮಾಡಿದ ಅವನು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅವನು 1921ಲ್ಲಿ ಭಾಷಣ ಮಾಡಿದ್ದವನು. ಏನು ಮಾಡಿದ ಅವನು? ಏನಾದರು ಜಾಗೃತಿ ಮಾಡಿದನಾ?, ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದಾನಾ?. ಬಿಜೆಪಿ ಸರ್ಕಾರ ಆರ್ ಎಸ್ ಎಸ್ ವಿಚಾರಗಳನ್ನು ಪಠ್ಯ ಪುಸ್ತಕದಲ್ಲಿ ತಂದು ಮಕ್ಕಳ ಮನಸ್ಸು ಕೆಡಿಸಲು ಮುಂದಾಗಿದೆ ಎಂದು ಏಕವಚನದಲ್ಲೇ ವಾಗ್ದ್ದಾಳಿ ನಡೆಸಿದ್ದಾರೆ.
ದೇಶ ಒಡೆಸುವ ವಿಚಾರಧಾರೆ ಇರುವವರನ್ನು ಪಠ್ಯ ಪುಸ್ತಕದಲ್ಲೂ ತರಲು ಯತ್ನಿಸುತ್ತಿದ್ದಾರೆ. ಅದರ ವಿರುದ್ಧ ನಾವು ಒಂದಾಗಿ ಹೋರಾಟ ನಡೆಸಬೇಕಾಗುತ್ತದೆ. ನೆಹರು ಕಾಂಗ್ರೆಸ್ ಪಕ್ಷದ ಒಬ್ಬ ದೊಡ್ಡ ವಿಚಾರವಾದಿ, ಬುನಾದಿ ಹಾಕಿದ ವ್ಯಕ್ತಿ.
ನೆಹರು ವಿಚಾರವಾದದ ಮೇಲೆ ಕಾಂಗ್ರೆಸ್ ಪಕ್ಷ ದೀರ್ಘ ಕಾಲ ನಡೆದುಕೊಂಡು ಬಂದಿದೆ. ಸ್ವಾತಂತ್ರ ಪೂರ್ವದಲ್ಲಿ ಸುಮಾರು ಎಂಟು ವರ್ಷ ಜೈಲಿನಲ್ಲಿ ಕಳೆದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಮಹಾತ್ಮ ಗಾಂಧಿಗೆ ಪ್ರಿಯವಾದ ವ್ಯಕ್ತಿಯಾಗಿದ್ದವರು. ಅವರ ತತ್ವ ನೀತಿ ಇನ್ನೂ ಜೀವಂತ ಇದೆ. ಅದು ದೇಶಕ್ಕೆ ಬೇಕಾದ ವಿಚಾರಧಾರೆ ಎಂದು ಹೇಳಿದರು.
ಇಂದಿನ ಪ್ರಧಾನಿಗೆ ಹೋಲಿಸುವ ವ್ಯಕ್ತಿತ್ವ ಅವರದ್ದಲ್ಲ. ಈ ದೇಶವನ್ನು ಕಟ್ಟಿ ಬೆಳೆಸಿ ಪ್ರಜಾಪ್ರಭುತ್ವ ಉಳಿಸಿ, ಅದರ ಬೇರನ್ನು ಆಳವಾಗಿ ದೇಶದಲ್ಲಿ ಊರಿದ್ದರೆ ಅದಕ್ಕೆ ನೆಹರು ಕಾರಣ. ನೆಹರು ತತ್ವಗಳನ್ನು ಅಳಿಸಬೇಕು ಎನ್ನುವ ಉದ್ದೇಶದಿಂದ ಸಂವಿಧಾನ ಧಮನಿಸಲು ಬಿಜೆಪಿ ಸರ್ಕಾರ, ಆರ್ ಎಸ್ ಎಸ್ ಹಾಗೂ ಮೋದಿ ಇದಕ್ಕೆ ಪ್ರೋತ್ಸಾಹ ಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹೆಡಗೇವಾರ್ ಯಾರು?, ಏನು ಮಾಡಿದ ಅವನು?: ಮಲ್ಲಿಕಾರ್ಜುನ ಖರ್ಗೆ ಕಿಡಿ ಶಿಕ್ಷಣದಲ್ಲಿ ನೆಹರು ಎಂದೂ ರಾಜಕೀಯ ಮಾಡಿಲ್ಲ. ಅಂಥ ವ್ಯಕ್ತಿಯ ಹೆಸರು ಅಳಿಸುವ ಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಕಾರ್ಯಕರ್ತರು ಹೋರಾಟ ಮಾಡಬೇಕು. ನೆಹರು ವಿಚಾರಧಾರೆ ಅಳಿಸಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದು ಅನುಮಾನವಾಗಿದೆ. ದೇಶ ನಿರಂಕುಶವಾದಿ ಕೈಗೆ ಹೋಗುತ್ತಿದೆ.
ತ.ನಾಡಿನಲ್ಲಿ ಮೋದಿ ಮೂಢನಂಬಿಕೆ ಇರಬಾರದು ಎಂದು ಹೇಳಿದ್ದಾರೆ. ಆದರೆ, ಪಕ್ಷ ಅವರ ಮೂಢನಂಬಿಕೆ ಮೇಲೆ ನಿಂತಿದೆ. ಕೆಸಿಆರ್ ಬಗ್ಗೆ ಮೂಢನಂಬಿಕೆ ಬಗ್ಗೆ ಹೇಳೋ ಪುಣ್ಯಾತ್ಮ ತಾನು ಅದೇ ರೀತಿ ನಡೆದುಕೊಳ್ಳಬೇಕಿತ್ತು. ವೈಜ್ಞಾನಿಕ ವಿಚಾರವನ್ನು ಬಿಟ್ಟು ಮೂಢನಂಬಿಕೆ ಧರ್ಮದ ವಿಚಾರ ತಂದು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಹರಿಹಾಯ್ದರು.
ಇದನ್ನೂ ಓದಿ : ಐಎನ್ಎಸ್ ಖಂಡೇರಿ ಸಬ್ ಮೆರಿನ್ ಮೂಲಕ ರಕ್ಷಣಾ ಸಚಿವರ ಸಮುದ್ರಯಾನ