ಬೆಂಗಳೂರು :ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಜೈಲು ಹಕ್ಕಿಗಳಾಗಿರೋ ಬೆನ್ನಲ್ಲೇ, ಕೆಲ ನಟ, ನಟಿಯರಿಗೆ ಈ ಡ್ರಗ್ಸ್ ನಂಟು ಅಂಟಿಕೊಳ್ಳುತ್ತೆ ಎಂಬ ಭಯದಲ್ಲೇ ಇದ್ದಾರೆ. ಈಗ ಅಭಿಷೇಕ್ ಅಂಬರೀಶ್ ಕೂಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಅಭಿಮಾನಿಗಳ ಜೊತೆ 28ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಅಭಿಷೇಕ್ ಅಂಬರೀಶ್, ಈ ಡ್ರಗ್ಸ್ ಪ್ರಕರಣದಿಂದ ಕೆಲ ಅಮಾಯಕರು ಬಲಿಪಶು ಆಗ್ತಿದ್ದಾರೆ. ಡ್ರಗ್ಸ್ ವಿಚಾರಣೆ ಎದುರಿಸಿದವರನ್ನ ಅಪರಾಧಿಗಳಂತೆ ನೋಡಬಾರದು ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.