ಬೆಂಗಳೂರು:ಕಳ್ಳತನ ಮಾಡಿದ ವಸ್ತುಗಳನ್ನು ರೈಲುಗಳ ಮೂಲಕ ಹೊರ ರಾಜ್ಯಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದ ಕಳ್ಳರನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಮತ್ತು ಸೌರವ್ ಕುಮಾರ್ ಬಂಧಿತರು.
ಕದ್ದ ಮಾಲುಗಳನ್ನು ಹೊರ ರಾಜ್ಯಕ್ಕೆ ಸಾಗಿಸುತ್ತಿದ್ದ ಕಳ್ಳರ ಬಂಧನ - ಬೆಂಗಳೂರು ಕ್ರೈಮ್ ಲೇಟೆಸ್ಟ್ ನ್ಯೂಸ್
ವೈಟ್ಫೀಲ್ಡ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ನಗರದಲ್ಲಿ ಕಳ್ಳತನ ಮಾಡಿದ ವಸ್ತುಗಳನ್ನು ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ.
Whitefield Police arrested two thieves at Bangalore
ಈ ಆರೋಪಿಗಳು ಮಹದೇವಪುರ, ವೈಟ್ಫೀಲ್ಡ್ ಹಾಗೂ ಹೊಸಕೋಟೆ ಭಾಗದಲ್ಲಿ ಮೊಬೈಲ್ಫೋನ್, ಲ್ಯಾಪ್ಟಾಪ್ ಹಾಗು ಸ್ಪೀಕರ್‌ಗಳನ್ನು ಕಳ್ಳತನ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ವೈಟ್ಫೀಲ್ಡ್ ಪೊಲೀಸರು, ಹುಬ್ಬಳ್ಳಿಯಲ್ಲಿ ಸ್ಥಳೀಯ ರೈಲ್ವೆ ಪೊಲೀಸರ ಸಹಾಯದಿಂದ ಕಾರ್ಯಾಚರಣೆ ನಡೆಸಿ ಕದ್ದ ಮಾಲುಗಳ ಸಮೇತ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 5 ಲಕ್ಷ ಮೌಲ್ಯದ 39 ಹೊಸ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ ಹಾಗೂ 3 ಸ್ಪೀಕರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.