ಕರ್ನಾಟಕ

karnataka

ETV Bharat / state

ಮನೆಬಾಗಿಲು ತೆರೆದಿದೆ ಎಂದು ಕಳ್ಳತನಕ್ಕೆ ಮುಂದಾದ ಖದೀಮನಿಗೆ ಬಿತ್ತು ಗೂಸಾ - bangalore Crime 2019

ಮನೆಯ ಬಾಗಿಲು ತೆರೆದಿದೆ ಎಂದು ಕಳ್ಳತನಕ್ಕೆ ಮುಂದಾದ ಖದೀಮನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

bangalore
ಮನೆಬಾಗಿಲು ತೆರೆದಿದೆ ಎಂದು ಕಳ್ಳತನಕ್ಕೆ ಮುಂದಾದ ಖದೀಮನಿಗೆ ಬಿತ್ತು ಗೂಸಾ..!

By

Published : Dec 13, 2019, 6:00 PM IST

ಬೆಂಗಳೂರು:ಮನೆಯ ಬಾಗಿಲು ತೆರೆದಿದೆ ಎಂದು ಕಳ್ಳತನಕ್ಕೆ ಮುಂದಾದ ಖದೀಮನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೆಂಕಟಸ್ವಾಮಿ ಬಂಧಿತ ಖದೀಮ.

ಡಿಸೆಂಬರ್ 5ರಂದು ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಬಾಲಾಜಿ ಸರೋವರ ಅಪಾರ್ಟ್​ಮೆಂಟ್​ಗೆ ನುಗ್ಗಿದ್ದ ಕಳ್ಳ ಅಲ್ಲಿದ್ದ ಮನೆಯ ಬಾಗಿಲು ಲಾಕ್​ ಮಾಡದೇ ಇರುವುದನ್ನು ಗಮನಿಸಿದ್ದಾನೆ. ಬಳಿಕ ಮನೆಯೊಳಗೆ ಎಂಟ್ರಿಕೊಟ್ಟು ಕಬೋರ್ಡ್​ನಲ್ಲಿದ್ದ ವಸ್ತುಗಳನ್ನು ಕದಿಯಲು ಮುಂದಾಗಿದ್ದಾನೆ. ಈ ವೇಳೆ ಶಬ್ದ ಕೇಳಿಸಿತು ಎಂದು ಅಡುಗೆ ಕೋಣೆಯಲ್ಲಿದ್ದ ಮಹಿಳೆ ಬಂದಾಗ ಅಲ್ಲಿ ಕಳ್ಳತನ ನಡೆಯುತ್ತಿದ್ದ ವಿಚಾರ ಗೊತ್ತಾಗಿದೆ. ಆಗ ಜೋರಾಗಿ ಮಹಿಳೆ ಕಿರುಚಿಕೊಂಡಿದ್ದು, ದಿಕ್ಕುತೋಚದಾದ ಕಳ್ಳ ಅಲ್ಲಿಂದ ಕಾಲ್ಕಿತ್ತು ಮೊದಲ ಮಹಡಿಯಲ್ಲಿದ್ದ ಚಪ್ಪಲಿ ಸ್ಟ್ಯಾಂಡ್​ ಬಳಿ ಅವಿತು ಕುಳಿತಿದ್ದಾನೆ.

ಮನೆಬಾಗಿಲು ತೆರೆದಿದೆ ಎಂದು ಕಳ್ಳತನಕ್ಕೆ ಮುಂದಾದ ಖದೀಮನಿಗೆ ಬಿತ್ತು ಗೂಸಾ..!

ಅವಿತಿದ್ದ ಕಳ್ಳನನ್ನು ಹಿಡಿದ ಸ್ಥಳೀಯರು ಧರ್ಮದೇಟು ನೀಡಿ ವೈಟ್ ಫೀಲ್ಡ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ABOUT THE AUTHOR

...view details