ಕರ್ನಾಟಕ

karnataka

ETV Bharat / state

ಮೈಗ್ರೇನ್‌ ಎಂದುಕೊಂಡಿದ್ದ ವ್ಯಕ್ತಿಯಲ್ಲಿ ಅಪರೂಪದ ನರಮಂಡಲದ ವಿಪ್ಪಲ್‌ ಕಾಯಿಲೆ ಪತ್ತೆ: ನಗರದ ವೈದ್ಯರಿಂದ ಯಶಸ್ವಿ ಚಿಕಿತ್ಸೆ.. - ಈಟಿವಿ ಭಾರತ್​ ಕನ್ನಡ ನ್ಯೂಸ್​

ಫೋರ್ಟಿಸ್‌ ಆಸ್ಪತ್ರೆಯ ನರವಿಜ್ಞಾನಿ ಡಾ. ಚಂದ್ರನ್ ಜ್ಞಾನಮುತ್ತು ಅವರ ತಂಡ ಈ ರೋಗದ ಮೂಲವನ್ನು ಕಂಡು ಹಿಡಿದಿದ್ದಾರೆ.

ನರವಿಜ್ಞಾನಿ ಡಾ. ಚಂದ್ರನ್ ಜ್ಞಾನಮುತ್ತು ಅವರ ತಂಡ
ನರವಿಜ್ಞಾನಿ ಡಾ. ಚಂದ್ರನ್ ಜ್ಞಾನಮುತ್ತು ಅವರ ತಂಡ

By

Published : May 19, 2023, 8:09 PM IST

ಬೆಂಗಳೂರು :ವಿಶ್ವದಲ್ಲೇಒಂದು ಮಿಲಿಯನ್‌ ಜನರ ಪೈಕಿ ಒಬ್ಬರಲ್ಲಿ ಮಾತ್ರ ಕಂಡು ಬರುವ ಸೆಂಟ್ರಲ್ ನರ್ವಸ್ ಸಿಸ್ಟಮ್ (ಸಿಎನ್‌ಎಸ್‌) ವಿಪ್ಪಲ್‌ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ಕೋಲ್ಕತ್ತಾ ಮೂಲದ 66 ವರ್ಷದ ವ್ಯಕ್ತಿಯು ಸುಮಾರು ವರ್ಷಗಳಿಂದ ಈ ಕಾಯಿಲೆಯಿಂದ ತಲೆನೋವಿಗೆ ಒಳಗಾಗಿ ಬಳಲುತ್ತಿದ್ದರು. ಮೈಗ್ರೇನ್‌ಗೆ ಬೇಕಾದ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ.

ಇದೀಗಾ ಫೊರ್ಟಿಸ್‌ ಆಸ್ಪತ್ರೆಯಲ್ಲಿ ನರವಿಜ್ಞಾನಿ ಡಾ. ಚಂದ್ರನ್ ಜ್ಞಾನಮುತ್ತು ಅವರ ತಂಡ ಈ ರೋಗದ ಮೂಲವನ್ನು ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಮಾತನಾಡಿರುವ ಡಾ. ಚಂದ್ರನ್‌ ಅವರು, ಮೆದುಳಿನ ಕೇಂದ್ರ ನರಮಂಡದಲ್ಲಿ ವಿಪ್ಪಲ್‌ ಎನ್ನುವ ಒಂದು ವೈರಸ್‌ ಈ ನರಮಂಡಲದ ಮೇಲೆ ದಾಳಿ ಮಾಡಿ ವಿಪ್ಪಲ್‌ ಕಾಯಿಲೆ ಉಂಟು ಮಾಡಲಿದೆ.

ಇದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು, ಒಂದು ಮಿಲಿಯನ್‌ ಜನರಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಕಂಡು ಬರಲಿದೆ. ಈ ಕಾಯಿಲೆ ಕುರಿತು ಸಾಕಷ್ಟು ಆಸ್ಪತ್ರೆ ಹಾಗೂ ವೈದ್ಯರಿಗೆ ಮಾಹಿತಿ ಇಲ್ಲ. ಹೀಗಾಗಿ ಈ ಕಾಯಿಲೆಯನ್ನು ಪತ್ತೆ ಹಚ್ಚುವುದು ಸಹ ಸವಾಲಿನ ಕೆಲಸ ಎಂದು ಹೇಳಿದರು.

66 ವರ್ಷದ ವ್ಯಕ್ತಿಯೊಬ್ಬರು, ತಮ್ಮ ಮೆದುಳಿನಲ್ಲಾಗುತ್ತಿರುವ ಬದಲಾವಣೆ ಹಾಗೂ ನೋವಿನಿಂದ ಆಸ್ಪತ್ರೆ ಸೇರಿದ್ದರು. ಆ ಸಂದರ್ಭದಲ್ಲಿ ಇದು ವಿಪ್ಪಲ್‌ ಕಾಯಿಲೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ತಲೆ ನೋವು ಹೆಚ್ಚಾಗುತ್ತಿದ್ದರಿಂದ ಇದು ಮೈಗ್ರೇನ್‌ ಎಂದು ತಪ್ಪಾಗಿ ಅರ್ಥೈಸಲಾಗಿತ್ತು. ಆದರೆ, ಈ ಕಾಯಿಲೆ ಕಾಲಕ್ರಮೇಣ ಹೆಚ್ಚಾಗುತ್ತಾ ಮೆದುಳನ್ನು ಆವರಿಸಿಕೊಳ್ಳಲು ಆರಂಭಿಸಿತ್ತು ಎಂದು ಚಿಕಿತ್ಸೆಯ ಕುರಿತು ಮಾಹಿತಿ ಡಾ. ಚಂದ್ರನ್‌ ನೀಡಿದರು.

ಇದನ್ನೂ ಓದಿ :ಆರೋಗ್ಯಕರ ಆಹಾರ ಯುಗ: ಪರಿಣಾಮಕಾರಿ ಊಟ ಯೋಜನೆ ರೂಪಿಸುವುದು ಹೇಗೆ?

ಚಿಕಿತ್ಸೆ ಆರಂಭವಾಗುಷ್ಟೆಲ್ಲೇ ಆ ವ್ಯಕ್ತಿ ವಿಪರೀತ ತಲೆ ನೋವು ಹಾಗೂ ದೈಹಿಕ ದೌರ್ಬಲ್ಯದಿಂದ ಕುಗ್ಗುತ್ತಾ ಹೋಗಿದ್ದರು. ಸುಮಾರು 8 ವರ್ಷಗಳ ನರಳಾಟದ ಬಳಿಕ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಈ ವೇಳೆ, ನಾವುಗಳು ಸೂಕ್ತ ಪರೀಕ್ಷೆ ನಡೆಸಿದ ಬಳಿಕ ಈ ವಿಲಕ್ಷಣ ಕಾಯಿಲೆ ಕಂಡು ಬಂದಿತು ಎಂದು ಡಾ. ಚಂದ್ರನ್‌ ಹೇಳಿದರು.

ನಂತರ ಕೂಡಲೇ ಅವರಿಗೆ ಇಂಟ್ರಾವೆನಸ್‌ ಸೇಫ್ಟ್ರಿಯಾಕ್ಸೋನ್‌ ವೈರಲ್‌ ಇಂಕ್ಷನ್‌ನನ್ನು ಪ್ರತಿ 12 ಗಂಟೆಗೊಮ್ಮೆ ನೀಡುತ್ತಾ ಬರಲಾಯಿತು. ಈ ಇಂಜಕ್ಷನ್‌ನನ್ನು ಭಯಾನಕ ವೈರಸ್‌ಗಳ ಕೊಲ್ಲುವಿಕೆಗೆ ನೀಡಲಾಯಿತು. ಹೀಗೆ ನಾಲ್ಕು ದಿನಗಳ ಕಾಲ ಸತತವಾಗಿ ನೀಡಲಾಯಿತು. 8 ವರ್ಷಗಳಿಂದ ಈ ಸೋಂಕಿನಿಂದ ಬಳಲುತ್ತಿದ್ದ ಇವರು ಇದೀಗಾ ಗುಣಮುಖರಾಗುತ್ತಿದ್ದಾರೆ. ಈ ಸೋಂಕನ್ನೂ ಪತ್ತೆ ಹಚ್ಚದೇ ಹಾಗೇ ಬಿಟ್ಟಿದ್ದರೆ ಜೀವಕ್ಕೆ ಮಾರಕವಾಗುತ್ತಿತ್ತು ಎಂದು ಡಾ. ಚಂದ್ರನ್‌ ವಿವರಿಸಿದರು.

ಇದನ್ನೂ ಓದಿ :ಪರಿಸರ ಕಾಳಜಿಗೆ ಶ್ರಮಿಸುತ್ತಿರುವ 7ರ ಪೋರ: ಮೂರ್ತಿ ಚಿಕ್ಕದಾದ್ರೂ ಈತನ ಸಾಧನೆ ದೊಡ್ಡದು

ABOUT THE AUTHOR

...view details