ಕರ್ನಾಟಕ

karnataka

ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ದವು: ಡಿಸಿಎಂ ಡಿಕೆಶಿ

By ETV Bharat Karnataka Team

Published : Sep 4, 2023, 2:34 PM IST

''ನಾನೂ ಕೂಡಾ ದೆಹಲಿಗೆ ಹೋಗಿ ವಕೀಲರ ಜೊತೆ ಮಾತಾಡಿದ್ದೇನೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಬಂದು ವಸ್ತುಸ್ಥಿತಿಯ ಅಧ್ಯಯನ ನಡೆಸುವಂತೆ ಕೇಳಿದ್ದೇವೆ. ಸುಪ್ರೀಂ ಕೋರ್ಟ್​ನಲ್ಲೂ ಮೇಲ್ಮನವಿ ಸಲ್ಲಿಸಿ, ನೀರು ಬಿಡಲು ಆಗಲ್ಲ ಅಂತ ಮನವಿ ಮಾಡುತ್ತೇವೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

DCM D K Shivakumar
ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.

ಬೆಂಗಳೂರು:''ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ದವು'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಸಂಘಟನೆಗಳು ತಮಿಳುನಾಡಿಗೆ ನೀರು ಬಿಡದಂತೆ ಹೋರಾಟ ನಡೆಸ್ತಿವೆ ಧನ್ಯವಾದಗಳು. ಆದರೆ, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ವು? ಆಗ ಯಾಕೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕು ಅಂತ ಕೇಂದ್ರಕ್ಕೆ ಕೇಳಲಿಲ್ಲ? ಬಿಜೆಪಿ, ಜೆಡಿಎಸ್ ಪಕ್ಷದವರೂ ಕೇಂದ್ರಕ್ಕೆ ಮೇಕೆದಾಟು ಯೋಜನೆಯ ಅನುಮತಿಗೆ ಯಾಕೆ ಕೇಳ್ತಿಲ್ಲ? ಹೋರಾಟಗಾರರು ಕೇಂದ್ರಕ್ಕೆ ಅನುಮತಿ ಕೊಡಿ ಅಂತ ಕೇಳಲಿ. ನಾವು ನಮ್ಮ ರೈತರ ಹಿತ ಕಾಪಾಡಲು ಬದ್ಧವಾಗಿದ್ದೀವೆ'' ಎಂದರು.

ತಮಿಳುನಾಡು ಸರ್ಕಾರ 24 ಸಾವಿರ ಕ್ಯೂಸೆಕ್ಸ್ ನೀರಿಗೆ ಆಗ್ರಹಿಸಿತ್ತು. 3 ಸಾವಿರ ಕ್ಯೂಸೆಕ್ ಮಾತ್ರ ಬಿಡಲು ಸಾಧ್ಯ ಎಂದು ನಮ್ಮ ಅಧಿಕಾರಿಗಳು ಸಮರ್ಥವಾಗಿ ವಾದ ಮಾಡಿದರ ಪರಿಣಾಮ, ಈಗ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ನೀರು ಬಿಡಲು ಅದೇಶಿಸಿದೆ. ಸುಪ್ರೀಂ ಕೋರ್ಟ್​ನಲ್ಲಿ ನಮ್ಮ ವಕೀಲರು ಉತ್ತಮ ವಾದ ಮಾಡ್ತಿದ್ದಾರೆ. ನಾನೂ ಕೂಡಾ ದೆಹಲಿಗೆ ಹೋಗಿ ವಕೀಲರ ಜೊತೆ ಮಾತಾಡಿದ್ದೇನೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಬಂದು ವಸ್ತುಸ್ಥಿತಿಯ ಅಧ್ಯಯನ ನಡೆಸುವಂತೆ ಕೇಳಿದ್ದೇವೆ. ಸುಪ್ರೀಂ ಕೋರ್ಟ್​ನಲ್ಲೂ ಮೇಲ್ಮನವಿ ಸಲ್ಲಿಸಿ, ನೀರು ಬಿಡಲು ಆಗಲ್ಲ ಅಂತ ಮನವಿ ಮಾಡುತ್ತೇವೆ'' ಎಂದು ತಿಳಿಸಿದರು.

ಕಾಂಗ್ರೆಸ್‌ನಿಂದ ಬ್ಲಾಕ್‌ಮೇಲ್ ಎಂಬ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಓ.. ಬ್ಲಾಕ್‌ಮೇಲ್ ಅಂತ ಅಂದಿದ್ದಾರಾ? ಇದು ನವರಂಗಿ‌ ನಾರಾಯಣನ ಮಾತು. ನವರಂಗಿ ನಾರಾಯಣನಿಗೆ ನಮ್ಮ ಎಂ.ಬಿ. ಪಾಟೀಲ್ ತಕ್ಕ ಉತ್ತರ ಕೊಟ್ಟಿದ್ದಾರೆ'' ಎಂದು ತಿರುಗೇಟು ನೀಡಿದರು. ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದರ ಬಗ್ಗೆ ತಮಿಳು ಸರ್ಕಾರವೇ ಸ್ಪಷ್ಟನೆ ಕೊಡುತ್ತೆ ಎಂದರು.

ಕಾವೇರಿ ತೀರ್ಪು ಕರ್ನಾಟಕದ ಪರ ಬರಲಿ: ಮಂಡ್ಯದಲ್ಲಿ ಕಾವೇರಿ ಮಾತೆಗೆ ಜಲಾಭಿಷೇಕ:ಮಂಡ್ಯ,ತಮಿಳುನಾಡಿಗೆ ನಿರಂತರ ನೀರು ಹರಿಸಿ ಕಾವೇರಿ ಕೊಳ್ಳದ ಜಲಾಶಯ ಖಾಲಿ ಮಾಡಿರುವ ರಾಜ್ಯ ಸರ್ಕಾರದ ಮೇಲಿನ ನಂಬಿಕೆ ಹುಸಿಯಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಆರೋಪಿಸಿದರು. ಸುಪ್ರೀಂ ಕೋರ್ಟ್​ ತೀರ್ಪು ಕರ್ನಾಟಕದ ಪರ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿನ ಕಾವೇರಿ ಮಾತೆಗೆ ನದಿಯಿಂದ ತಂದಿದ್ದ ನೀರಿನಿಂದ ಜಲಾಭಿಷೇಕ ಮಾಡಿದರು. ಅರಿಶಿನ, ಕುಂಕುಮ, ಹಾಲು, ತುಪ್ಪ, ಜೇನುತುಪ್ಪ ಹಾಗೂ ಎಳನೀರು ಅಭಿಷೇಕ ಮಾಡಿ ವಿಶೇಷ ಪೂಜೆ ನೆರವೇರಿಸಿದರು.

ಇದನ್ನೂ ಓದಿ:ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್​ ಹೇಳಿಕೆ: ಹೈಕೋರ್ಟ್‌ನಲ್ಲಿ ದಾವೆ ಹೂಡುತ್ತೇವೆ ಎಂದ ಮುತಾಲಿಕ್

Sanatana Dharma: ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಹೇಳಿಕೆಗೆ ಪೇಜಾವರ ಶ್ರೀ ಖಂಡನೆ

ABOUT THE AUTHOR

...view details