ಬೆಂಗಳೂರು:ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ನಾನ್ ಪ್ರಾಫಿಟ್ ಕಮ್ಯುನಿಟಿ ರಿಸೋರ್ಸ್ ಸೆಂಟರ್ ನಿಂದ , ಗಿವನ್ ಟು ಗೀವ್ಎಂಬ ಬರಹದೊಂದಿಗೆ ಹೊಸದೊಂದು ಕೇಂದ್ರ ಆರಂಭಿಸಿದ್ದು, ಇದರ ಮೂಲಕ ಒಮ್ಮೆ ಉಪಯೋಗಿಸಿದ ಹೆಲ್ತ್ ಕೇರ್ ಉಪಕರಣಗಳನ್ನ ಮೂಲೆ ಸೇರಿಸದೇ, ಅದು ಮತ್ತೊಬ್ಬರ ಬಳಕೆಗೆ ಸಹಾಯವಾಗುತ್ತೆ ಎಂಬುದನ್ನ ತಿಳಿಸಲು ಹೊರಟಿದೆ.
ವೀಲ್ ಚೇರ್ ಉಪಯೋಗ ನಿಮ್ಗೆ ಸಾಕಾಯ್ತಾ..? ಹಾಗಿದ್ರೆ ಬೇರೆಯವರಿಗೆ ನೀಡಿ ಅಂತಿದೆ ಈ ಆಸ್ಪತ್ರೆ -
ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ನಾನ್ ಪ್ರಾಫಿಟ್ ಕಮ್ಯುನಿಟಿ ರಿಸೋರ್ಸ್ ಸೆಂಟರ್ ನಿಂದ , ಗೀವನ್ ಟು ಗೀವ್ ಎಂಬ ಬರಹದೊಂದಿಗೆ ಹೊಸದೊಂದು ಕೇಂದ್ರವನ್ನ ಆರಂಭಿಸಿದೆ.
ಈ ಕೇಂದ್ರದ ಉದ್ಘಾಟನೆ ಮಾಡಿ ಮಾತಾನಾಡಿದ ಟಿಸಿಎಸ್ ರನ್ನರ್ ಶಾಲಿನಿ ಸರಸ್ವತಿ ,ಯಾವ ಸಮಯದಲ್ಲಿ ಯಾರಿಗೆ ಉಪಕರಣಗಳ ಅವಶ್ಯಕತೆ ಇರುವುದೆಂದು ಹೇಳುವುದಕ್ಕೆ ಆಗದು. ಹಾಗಂತ ಎಲ್ಲರಿಗೂ ದುಬಾರಿ ಉಪಕರಣಗಳನ್ನ ಖರೀದಿಸಿ ಉಪಯೋಗಿಸಲು ಆಗುವುದಿಲ್ಲ. ಅಂತಹವರಿಗೆ ಈ ಹೊಸ ಸೇವೆ ಸಹಾಯವಾಗುತ್ತೆ ಎಂದರು. ವೀಲ್ಚೇರ್, ಏರ್ ಬೆಡ್ಸ್, ವಾಟರ್ ಬೆಡ್ಸ್, ಸ್ಟ್ರಕ್ಚರ್ಸ್, ವಾಕಿಂಗ್ ಸ್ಟಿಕ್ಸ್ ಸೇರಿದಂತೆ ಇತರ ಹೆಲ್ತ್ ಕೇರ್ ಉಪಕರಣಗಳ ಬಳಕೆಯಾದ ನಂತರ ಅದರ ಅವಶ್ಯಕತೆ ಇಲ್ಲವೆಂದರೆ ಜನರು ಇವುಗಳನ್ನ ನೀಡಬಹುದಾಗಿದೆ. ಈ ಮೂಲಕ ಅವಶ್ಯಕತೆ ಇರುವ ವ್ಯಕ್ತಿ ಈ ಉಪಕರಣಗಳನ್ನ ಬಳಸಿಕೊಂಡು ಪುನಃ ಕೇಂದ್ರಕ್ಕೆ ನೀಡಬಹುದು. ಅಷ್ಟೇ ಅಲ್ಲದೇ, ಉಪಕರಣಗಳ ದಾನವನ್ನೂ ಮಾಡಬಹುದು ಅಂತಾರೆ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ನಿರ್ದೇಶಕರಾದ ನವೀನ್ ಥಾಮಸ್..
ಸಲಕರಣೆಗಳ ಅವಶ್ಯಕತೆ ಇರುವವರು 9481456618 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಇನ್ನು ಈ ಉಪಕರಣಗಳ ನಿರ್ವಹಣೆ ಸಲುವಾಗಿ ಮಾತ್ರ ಶುಲ್ಕವಿರಲಿದೆ. ಒಂದು ವೇಳೆ ಕೊಂಡುಕೊಳ್ಳಲು ಆಗದೇ ಇದ್ದರೂ ಉಚಿತವಾಗಿ ಪಡೆಯಬಹುದು, ಜೊತೆಗೆ ಠೇವಣಿ ಇಟ್ಟು ಉಪಕರಣ ಉಪಯೋಗಿಸುವ ಸೇವೆಯೂ ಇದೆಯಂತೆ.