ಕರ್ನಾಟಕ

karnataka

ETV Bharat / state

ಉದ್ಯಾನ ನಗರಿಯಲ್ಲಿ ವಿಶೇಷ ಚೇತನರಿಂದ ವ್ಹೀಲ್ ಚೇರ್ ರ್ಯಾಲಿ - ಬೆಂಗಳೂರಿನ ಕಬ್ಬನ್ ಪಾರ್ಕ್​ನಲ್ಲಿ ವ್ಹೀಲ್ ಚೇರ್ ರ್ಯಾಲಿ

ವಿಶ್ವ ವ್ಹೀಲ್ ಚೇರ್ ದಿನದ ಅಂಗವಾಗಿ ವಿಶೇಷ ಶಿಕ್ಷಕರು ಮತ್ತು ಪುನರ್ವಸತಿ ವೃತ್ತಿಪರರ ಸಂಘದಿಂದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಗರದ ಕಬ್ಬನ್ ಪಾರ್ಕ್​ನಲ್ಲಿ ವ್ಹೀಲ್ ಚೇರ್ ರ್ಯಾಲಿ ನಡೆಯಿತು.

ಉದ್ಯಾನ ನಗರಿಯಲ್ಲಿ ವಿಶೇಷ ಚೇತನರಿಂದ ವ್ಹೀಲ್ ಚೇರ್ ರ್ಯಾಲಿ
ಉದ್ಯಾನ ನಗರಿಯಲ್ಲಿ ವಿಶೇಷ ಚೇತನರಿಂದ ವ್ಹೀಲ್ ಚೇರ್ ರ್ಯಾಲಿ

By

Published : Mar 1, 2020, 9:19 PM IST

ಬೆಂಗಳೂರು: ವಿಶ್ವ ವ್ಹೀಲ್ ಚೇರ್ ದಿನದ ಅಂಗವಾಗಿ ಕಬ್ಬನ್ ಪಾರ್ಕ್​ನಲ್ಲಿ ವ್ಹೀಲ್ ಚೇರ್ ರ್ಯಾಲಿ ನಡೆಯಿತು.

ವಿಶೇಷ ಶಿಕ್ಷಕರು ಮತ್ತು ಪುನರ್ವಸತಿ ವೃತ್ತಿಪರರ ಸಂಘದಿಂದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಪದ್ಮಶ್ರೀ ಪುರಸ್ಕೃತೆ ಮಾಲತಿ ಕೆ. ಹೊಳ್ಳ ರ್ಯಾಲಿಗೆ ಚಾಲನೆ ನೀಡಿದರು. ನಂತರ ಮಾತಾನಾಡಿದ ಅವರು, ವ್ಹೀಲ್ ಚೇರ್​ನಲ್ಲಿ ಓಡಾಡುವವರಿಗೆ ಯಾವ ಸರ್ಕಾರವೂ ಪ್ರತ್ಯೇಕ ವ್ಯವಸ್ಥೆ ಮಾಡಿಕೊಟ್ಟಿಲ್ಲ. ವಿದೇಶದಲ್ಲಿ ವಿಶೇಷ ಚೇತನರಿಗಾಗಿಯೇ ಅದರಲ್ಲೂ ವ್ಹೀಲ್ ಚೇರ್​ನಲ್ಲಿ ಓಡಾಡುವವರಿಗೆ ರಸ್ತೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ‌ಆದರೆ ನಮ್ಮಲ್ಲಿ ಅಂತಹ ವ್ಯವಸ್ಥೆ ಸಾಧ್ಯವಾಗದೇ ಇದ್ದರೂ, ಸ್ವಲ್ಪ ಕಾಳಜಿ ವಹಿಸಿದರೆ ಉತ್ತಮ. ಎಲ್ಲರಲ್ಲಿ ನಾವೂ ಒಬ್ಬರಾಗಲು ಅವಕಾಶ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.

ಉದ್ಯಾನ ನಗರಿಯಲ್ಲಿ ವಿಶೇಷ ಚೇತನರಿಂದ ವ್ಹೀಲ್ ಚೇರ್ ರ್ಯಾಲಿ

ವಿಶೇಷ ಶಿಕ್ಷಕರ ಮತ್ತು ಪುನರ್ವಸತಿ ವೃತ್ತಿಪರರ ಸಂಘದ ಸದಸ್ಯೆ ದೀಪಾ ಮಾತನಾಡಿ, ಉತ್ತಮ-ಗುಣಮಟ್ಟದ ವ್ಹೀಲ್ ಚೇರ್ ಖರೀದಿಸುವುದು ಬಹಳ ಕಷ್ಟ. ವ್ಹೀಲ್ ಚೇರ್ ದುಬಾರಿಯಾದ ಕಾರಣ, ಸೆಕೆಂಡ್ ಹ್ಯಾಂಡ್ ಚೇರ್ ಬಳಸುವ ಸ್ಥಿತಿ ಉಂಟಾಗಿದೆ. ಸಾಕಷ್ಟು ಖಾಸಗಿ ಕಂಪನಿಗಳು ಸಹಾಯ ಹಸ್ತ ಚಾಚಿದರೂ, ಸರ್ಕಾರ ಹೆಚ್ಚಿನ ಗಮನಕೊಡದೇ ಇರೋದು ವಿಪರ್ಯಾಸ.‌ ಇಂದಿನ‌ ವ್ಹೀಲ್ ಚೇರ್ ರ್ಯಾಲಿಗೂ ಸಾಕಷ್ಟು ಜನರು ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಯಾರ ಬಳಿಯೂ ವ್ಹೀಲ್ ಚೇರ್ ಇಲ್ಲದೇ ಇರುವುದು ಎಂದು ಬೇಸರ ವ್ಯಕ್ತಪಡಿಸಿದರು. ಜನರಿಗೆ ಮತ್ತು ಸರ್ಕಾರಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ರ್ಯಾಲಿ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು‌.

For All Latest Updates

ABOUT THE AUTHOR

...view details