ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರಕ್ಕೆ ಪಂಚ ಗ್ಯಾರಂಟಿಗಳ ಹೊರೆ: 2023-24ನೇ ಸಾಲಿನ ಸಾಲದ ಸ್ಥಿತಿಗತಿ ಹೀಗಿದೆ.. - current debt status for 2023 24 in karnataka

ಜುಲೈ 7ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯದ ಸಾಲದ ಸ್ಥಿತಿಗತಿ ಹಾಗೂ ಮುಂದೆ ಸಾಲದ ಎತ್ತುವಳಿ ಹೇಗಿರಲಿದೆ ಎಂಬ ಚಿತ್ರಣ ಇಲ್ಲಿದೆ.

Vidhana Soudha
ವಿಧಾನಸೌಧ

By

Published : Jul 5, 2023, 6:37 AM IST

ಬೆಂಗಳೂರು: ಪಂಚ ಗ್ಯಾರಂಟಿಗಳ ಬೃಹತ್ ಹೊರೆಯ ಮಧ್ಯೆ ಸಿಎಂ ಸಿದ್ದರಾಮಯ್ಯ ಬಜೆಟ್​ಗೆ (2023-24) ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ನೇತೃತ್ವದ ನೂತನ ಸರ್ಕಾರದ ಹೊಸ ಬಜೆಟ್ ಮಂಡನೆಯ ತಯಾರಿಯಲ್ಲಿ ಅವರಿದ್ದಾರೆ.‌ ಇದು ಮುಂದಿನ 9 ತಿಂಗಳ ಅವಧಿಗೆ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ.‌ ನಿರ್ಗಮಿತ ಬಿಜೆಪಿ ಸರ್ಕಾರ 2023-24ನೇ ಸಾಲಿನ‌ ಬಜೆಟ್ ಮಂಡಿಸಿತ್ತು.

ಬೊಮ್ಮಾಯಿ ಮಂಡಿಸಿದ್ದ ಬಜೆಟ್​ನಲ್ಲಿ 2023- 24ರಲ್ಲಿ ಅಂದಾಜು 77,750 ಕೋಟಿ ರೂ ಸಾಲ ಮಾಡುವುದಾಗಿ ತಿಳಿಸಿದ್ದರು.‌ ಇದೀಗ ಹೊಸ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಪಂಚ ಗ್ಯಾರಂಟಿಯೇ ದೊಡ್ಡ ಹೊರೆಯಾಗಿದೆ. ಹೊಸ ಬಜೆಟ್‌ನಲ್ಲಿ ಇವುಗಳಿಗೆ ಹಣ ಹೊಂದಿಸುವುದು ದೊಡ್ಡ ಸವಾಲು.‌ ಈ ಬಾರಿಯ ಬಜೆಟ್​ನಲ್ಲಿ ಸಿದ್ದರಾಮಯ್ಯ ಸರ್ಕಾರವು ಬೊಮ್ಮಾಯಿ ಸರ್ಕಾರ ಅಂದಾಜಿಸಿದ ಸಾಲದ ಮಿತಿಯಲ್ಲೇ ಇರಲಿದ್ದಾರೆ ಎನ್ನಲಾಗಿದೆ. ಆರ್ಥಿಕ ವರ್ಷದ ಒಂಬತ್ತು ತಿಂಗಳ ಹೊಸ ಬಜೆಟ್​ನಲ್ಲಿ ಸಿದ್ದರಾಮಯ್ಯ ಹೆಚ್ಚಿನ ಸಾಲದ ಮೊರೆ ಹೋಗುವುದು ಅನುಮಾನ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.‌

ಸಾಲದ ಸ್ಥಿತಿಗತಿ: ಆರ್ಥಿಕ ವರ್ಷದ ಏಪ್ರಿಲ್- ಜೂನ್ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಸಾಲ ಮಾಡಿಲ್ಲ. ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಮೊದಲ ತ್ರೈಮಾಸಿಕದಲ್ಲಿ ಯಾವುದೇ ಸಾಲ ಎತ್ತುವಳಿ ಮಾಡಿಲ್ಲ.

ಇದನ್ನೂ ಓದಿ :Congress Guarantee scheme: ಪೂರ್ಣ ಪ್ರಮಾಣದ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಎಲ್ಲಿಯೂ ಸಿಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಸಾಲದ ಮೂಲಕ ಸುಮಾರು 643 ಕೋಟಿ ರೂ.‌ ಸಾಲವನ್ನು ಮೊದಲ ತ್ರೈಮಾಸಿಕದಲ್ಲಿ ಮಾಡಿದೆ. ಆರ್ಥಿಕ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಏಪ್ರಿಲ್ ತಿಂಗಳಲ್ಲಿ 262.40 ಕೋಟಿ ರೂ ಸಾರ್ವಜನಿಕ ಸಾಲ ಮಾಡಿದೆ. ಮೇ ತಿಂಗಳಲ್ಲಿ 180 ಕೋಟಿ ರೂ ಸಾರ್ವಜನಿಕ ಸಾಲ ಮಾಡಿದೆ. ಅದೇ ರೀತಿ ಜೂನ್ ತಿಂಗಳಲ್ಲಿ ಸುಮಾರು 200 ಕೋಟಿ ರೂ‌.‌ ಸಾಲ ಮಾಡಲಾಗಿದೆ.

ಎರಡನೇ ತ್ರೈಮಾಸಿಕದಲ್ಲಿ 20,000 ಕೋಟಿ ಸಾಲ?: ಇದೀಗ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ 20,000 ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರ್​ಬಿಐಗೆ ಪೂರ್ವ ಮಾಹಿತಿ ನೀಡಿದೆ. ಆರ್​ಬಿಐಗೆ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಜುಲೈಯಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ಅಂದಾಜು 20,000 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಉದ್ದೇಶಿಸಿದೆ.

ರಾಜ್ಯ ಸರ್ಕಾರ ಜುಲೈ ತಿಂಗಳಲ್ಲಿ ತಲಾ 1,000 ಕೋಟಿಯಂತೆ ಒಟ್ಟು 3,000 ಕೋಟಿ ರೂ.‌ ಸಾಲ ಎತ್ತುವಳಿ ಮಾಡಲಿದೆ.‌ ಜುಲೈ 11ರಿಂದ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ತನ್ನ ಮೊದಲ ಸಾಲದ ಕಂತನ್ನು ಎತ್ತುವಳಿ ಮಾಡಲು ನಿರ್ಧರಿಸಿದೆ. ಆಗಸ್ಟ್ ತಿಂಗಳಲ್ಲಿ ರಾಜ್ಯ ಸರ್ಕಾರ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ. ಜು. 8 ರಿಂದ ನಾಲ್ಕು ವಾರ ತಲಾ 2,000 ಕೋಟಿ ರೂ. ನಂತೆ ಒಟ್ಟು 8,000 ಕೋಟಿ ರೂ‌. ಸಾಲ ಎತ್ತುವಳಿ ಮಾಡಲಿದೆ.‌ ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ.

ಇದನ್ನೂ ಓದಿ :ಬಜೆಟ್ ಅಧಿವೇಶನವನ್ನು ಜು. 21ರವರೆಗೆ ವಿಸ್ತರಿಸಲು ತೀರ್ಮಾನ

ABOUT THE AUTHOR

...view details