ಕರ್ನಾಟಕ

karnataka

By

Published : Jul 16, 2019, 5:42 PM IST

ETV Bharat / state

ಸುಪ್ರೀಂನಲ್ಲಿ ವಾದ, ತೀರ್ಪು ಏನೇ ಇರಲಿ, ಸರ್ಕಾರ ಬೀಳೋದು ನಿಶ್ಚಿತ: ಬಿಜೆಪಿ ಶಾಸಕರ ವಿಶ್ವಾಸ

16 ಜನ ಶಾಸಕರು ಸ್ಪೀಕರ್​​ಗೆ ಸಲ್ಲಿಸಿರುವ ರಾಜೀನಾಮೆ ಅಂಗಿಕಾರದ ಬಗ್ಗೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ವಾದ ಪ್ರತಿವಾದ ನಡೆದು ನಾಳೆಗೆ ತೀರ್ಪು ಕಾಯ್ದಿರಿಸಲಾಗಿದೆ. ಈ ಬಗ್ಗೆ ಬಿಜೆಪಿ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಶಾಸಕರು


ಬೆಂಗಳೂರು: 16 ಜನ ಶಾಸಕರು ಸ್ಪೀಕರ್​​ಗೆ ಸಲ್ಲಿಸಿರುವ ರಾಜೀನಾಮೆ ಅಂಗಿಕಾರದ ಬಗ್ಗೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ವಾದ ಪ್ರತಿವಾದ ನಡೆದು ನಾಳೆಗೆ ತೀರ್ಪು ಕಾಯ್ದಿರಿಸಲಾಗಿದೆ. ಈ ಬಗ್ಗೆ ರಮಡ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಸಿ.ಟಿ.ರವಿ ಮಾತನಾಡಿ, ಸುಪ್ರೀಂ ಕೋರ್ಟ್​ನಲ್ಲಿ ವಾದ, ತೀರ್ಪು ಏನೇ ಇರಲಿ. ಈ ಸರ್ಕಾರ ಬೀಳೋದು ನಿಶ್ಚಿತ. ವಾದ - ಪ್ರತಿವಾದಗಳು ಸರ್ಕಾರವನ್ನು ಕಾಪಾಡಲ್ಲ. ಜನರ ವಿಶ್ವಾಸ ಕಳೆದುಕೊಂಡಿರೋ ಈ ಸರ್ಕಾರ ಗುರುವಾರ ಸಂಜೆ ಇತಿಹಾಸ ಸೇರುತ್ತದೆ. ಕಾಂಗ್ರೆಸ್ ಈಗಾಗಲೇ ವಿಪಕ್ಷದಲ್ಲಿ ಕೂರಲು ಮಾನಸಿಕವಾಗಿ ಸಿದ್ಧತೆ ನಡೆಸಿದೆ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿಕೊಂಡ ಹಾಗೆ ಆಗಿದೆ ಎಂದರು.

ಬಿಜೆಪಿ ಶಾಸಕರು
ಕುಡಚಿ ಶಾಸಕ ಪಿ.ರಾಜೀವ್ ಮಾತನಾಡಿ, ಇಡೀ ಕರ್ನಾಟಕದ ಜನತೆ ಸುಪ್ರೀಂ ಕೋರ್ಟ್ ವಿಚಾರಣೆ ಆಲಿಸಿದ್ದಾರೆ. ಶಾಸಕರ ಮೂಲಭೂತ ಹಕ್ಕನ್ನು ಪ್ರತಿಬಂಧಿಸುವ ಹಕ್ಕು ಯಾರಿಗೂ ಇಲ್ಲ. ಶಾಸಕರ ರಾಜೀನಾಮೆ ಹಿಂದೆ ಸ್ವ ಇಚ್ಛೆ ಇದೆಯೋ ಇಲ್ಲವೋ ಅಥವಾ ನೈಜತೆ ಇದೆಯಾ ಅನ್ನೋದಷ್ಟನ್ನೇ ಸ್ಪೀಕರ್ ಪರಿಶೀಲಿಸುವ ಅಧಿಕಾರ ಹೊಂದಿದ್ದಾರೆ. ಬೇರೆ ಆಯಾಮದಲ್ಲಿ ಸ್ಪೀಕರ್ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ಕೋಟ್ಯಂತರ ಜನರ ಆಸೆಯಂತೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರುತ್ತದೆ. ನಾಳೆ ಸುಪ್ರೀಂ ಕೋರ್ಟ್​ನಿಂದ ಇಂತಹ ತೀರ್ಪು ಬರಲಿದೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, 16 ಜನ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರು ರಾಜೀನಾಮೆ ಸಲ್ಲಿಸಿದಾಗ ಸ್ಪೀಕರ್ ಹೇಗೆ ಅಂಗೀಕರಿಸಬೇಕು. ಹಾಗೂ ಅದನ್ನು ಹೇಗೆ ನಿರ್ಧರಿಸಬೇಕು ಎನ್ನುವುದರ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್​ನಲ್ಲಿ ಮೂರು ಗಂಟೆಗಳ ಕಾಲ ಮಂಡಿಸಿರುವ ವಾದವನ್ನ ನೋಡಿದ್ದೇವೆ. ಐತಿಹಾಸಿಕ ತೀರ್ಪು ಬರಬಹುದೆಂದು ನಿರೀಕ್ಷಿಸಲಾಗುತ್ತಿದೆ. ಇದು ದೇಶದ ಎಲ್ಲ ವಿಧಾನಸಭೆಗಳಿಗೂ ಮಾದರಿಯಾಗುತ್ತದೆ ಎಂದು ಹೇಳಿದರು.

For All Latest Updates

ABOUT THE AUTHOR

...view details