ಕರ್ನಾಟಕ

karnataka

ETV Bharat / state

ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರನ್ನಾಗಿ ಮಾಡಲು ಇರುವ ತೊಡಕುಗಳೇನು? - ಕರ್ನಾಟಕದಲ್ಲಿ ಕೆಎಸ್​​ಆರ್​ಟಿಸಿ ನೌಕರರ ಪ್ರತಿಭಟನೆ

ತಮ್ಮನ್ನು ಸರ್ಕಾರಿ‌ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಹೋರಾಟ ತೀವ್ರಗೊಳಿಸಿದ್ದಾರೆ. ನೌಕರರ ಪತ್ನಿಯರು ಮತ್ತು ಮಕ್ಕಳು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

Vidhansoudha
ವಿಧಾನಸೌಧ

By

Published : Dec 12, 2020, 9:59 PM IST

Updated : Dec 12, 2020, 10:19 PM IST

ಬೆಂಗಳೂರು: ತಮ್ಮನ್ನು ಸರ್ಕಾರಿ‌ ನೌಕರರನ್ನಾಗಿ ಪರಿಗಣಿಸುವಂತೆ 10 ವರ್ಷಗಳಿಂದ ಪಟ್ಟು ಹಿಡಿದಿರುವ ಸಾರಿಗೆ ಸಿಬ್ಬಂದಿ ಕಳೆದ ಮೂರು ದಿನಗಳಿಂದಲೂ ಹೋರಾಟ ತೀವ್ರಗೊಳಿಸಿದ್ದಾರೆ. ಹಾಗಾದರೆ ಇವರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸರ್ಕಾರಕ್ಕೆ ಇರುವ ತೊಡಕುಗಳೇನು? ಬೇಡಿಕೆ ಈಡೇರಿದರೆ ನೌಕರರಿಗೆ ಸಿಗುವ ಲಾಭಗಳೇನು? ಸಾರಿಗೆ ಸಿಬ್ಬಂದಿಗೆ ಈಗಿರುವ ಸವಲತ್ತುಗಳೇನು? ಈ ಕುರಿತ ವರದಿ ಇಲ್ಲಿದೆ.

  • ಸರ್ಕಾರಿ ನೌಕರರನ್ನಾಗಿ ಮಾಡಿದರೆ ನಿಗಮದ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 50 ಸದಸ್ಯರು ಯಾರೂ ಇರುವುದಿಲ್ಲ. ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿರುವ ಐಎಎಸ್, ಐಪಿಎಸ್ ಅಧಿಕಾರಿಗಳು ಇರುವುದಿಲ್ಲ. ಎಲ್ಲವೂ ಸರ್ಕಾರದ ಅಧೀನಕ್ಕೆ ಒಳಪಡಲಿದ್ದು, ಕೇವಲ ಮುಖ್ಯಸ್ಥರೊಬ್ಬರು ಇರುತ್ತಾರೆ.
  • ಸರ್ಕಾರಿ ಮತ್ತು ಸಾರಿಗೆ ನೌಕರರ ನಡುವೆ ಶೇ. 40ರಷ್ಟು ವ್ಯತ್ಯಾಸವಿದೆ. ಕೆಎಸ್​​ಆರ್​​ಟಿಸಿ, ಬಿಎಂಟಿಸಿ, ವಾಯುವ್ಯ ರಸ್ತೆ ಸಾರಿಗೆ, ಈಶಾನ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಒಟ್ಟು 1.3 ಲಕ್ಷ ನೌಕರರು ಸೇವೆ ಸಲ್ಲಿಸುತ್ತಿದ್ದು, ಅಷ್ಟೂ ಮಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೆ ಸರ್ಕಾರಕ್ಕೆ ಇದು ಹೊರೆಯಾಗಲಿದೆ.
  • ಸರ್ಕಾರಿ ನೌಕರರಾದರೆ ಎಲ್ಲಾ ಆಸ್ಪತ್ರೆಗಳಲ್ಲೂ ಉಚಿತ ಸೇವೆ ಸಿಗಲಿದೆ.‌ ಆದರೆ ನಿಗಮದ ಸಾರಿಗೆ ನೌಕರಿಗೆ ಈ ಸೌಲಭ್ಯ ಇಲ್ಲ ಎಂಬ ಆರೋಪವಿದೆ. ನಿಗಮ ಖಾಸಗಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಸಮಯಕ್ಕೆ ಸರಿಯಾಗಿ ಹಣ ಪಾವತಿಸದ ಕಾರಣಕ್ಕೆ ಹಲವೆಡೆ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ಆರೋಪವಿದೆ.
  • ವರ್ಷಕ್ಕೆ ನಿಗಮದಿಂದ 10 ರಜೆಗಳಷ್ಟೇ ಇರಲಿದೆ. ಆದರೆ ನೌಕರರು ಸರ್ಕಾರದ ಅಧೀನಕ್ಕೆ ಬಂದರೆ 28 ರಜೆಗಳು ಸಿಗಲಿವೆ. ಇಎಸ್​ಐ ಸೌಲಭ್ಯವಿಲ್ಲ. ಪಿಎಫ್ ಶೇ. 12ರಷ್ಟು ನಿಗಮ ನೀಡಲಿದೆ.
  • ಸರ್ಕಾರವೇ 60 ವರ್ಷ ಮೇಲ್ಪಟ್ಟವರಿಗೆ ₹1,000 ಪಿಂಚಣಿ ನೀಡುತ್ತಿದೆ‌‌. 40 ವರ್ಷ ನಿಗಮಕ್ಕಾಗಿ ದುಡಿದು ಜೀವನದ ಕೊನೆಯ ದಿನಗಳಲ್ಲಿ ಪಿಂಚಣಿ ₹1,000-1,500 ಕೊಟ್ಟರೆ ಹೇಗೆ ಎಂಬುದು ಸಾರಿಗೆ ನೌಕರರ ಪ್ರಶ್ನೆಯಾಗಿದೆ.‌ ನಿವೃತ್ತಿಯಾದರೆ ನೀಡಬೇಕಾದ ಸೌಲಭ್ಯಗಳನ್ನು 6 ತಿಂಗಳು, ವರ್ಷವಾದರೂ ನಿಗಮಗಳು ಸರಿಯಾಗಿ ನೀಡುವುದಿಲ್ಲ. ಆದರೆ ಸರ್ಕಾರಿ ನೌಕರರಾದರೆ ಇದೆಲ್ಲವೂ ಸಿಗಲಿವೆ.
Last Updated : Dec 12, 2020, 10:19 PM IST

ABOUT THE AUTHOR

...view details