ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಇವತ್ತು ಹಲವು ಮಹತ್ವದ ತೀರ್ಮಾನಗಳನ್ನ ತೆಗೆದುಕೊಂಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ,ವಿಧಾನಸಭಾಮಾಜಿ ಸಭಾಧ್ಯಕ್ಷ ಕೆ ಜಿ ಬೋಪಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ. ಶಾಸಕರಾದ ಅರಗ ಜ್ಞಾನೇಂದ್ರ, ಎ ಟಿ ರಾಮಸ್ವಾಮಿ, ರಾಜಶೇಖರ್ ಬಸವರಾಜ್ ಪಾಟೀಲ್, ರಾಜೀವ್ ಗೌಡ ಸಮಿತಿಯ ಸದಸ್ಯರಿರಲಿದ್ದಾರೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತರಿಗೆ ಹಂತ ಹಂತವಾಗಿ ಹಣ ಪಾವತಿಸುವ ಬದಲು ಒಂದೇ ಬಾರಿಗೆ 3,000 ರೂ. ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಒಟ್ಟು 41,628 ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧಾರಿಸಲಾಗಿದೆ. 12.48 ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ.
ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು:
-ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಯ ಎಸ್ಐಟಿ ಕಾರ್ಯಾವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.ಇವಿಎಂ, ವಿವಿಪ್ಯಾಟ್‌ಗಳ ಸಂಪೂರ್ಣ ರಕ್ಷಣೆ ಹಾಗೂ ಭದ್ರತೆಗಾಗಿ ರಾಜ್ಯದ ಎಲ್ಲ 33 ಜಿಲ್ಲಾ ಚುನಾವಣಾ ಕೇಂದ್ರಗಳಲ್ಲಿ ಉಗ್ರಾಣ ನಿರ್ಮಿಸಲು 123 ಕೋಟಿ ರೂ. ಮೀಸಲಿಡಲಾಗುವುದು.
-ಬೆಂಗಳೂರು ಕೇಂದ್ರ ಕರಾಗೃಹದಲ್ಲಿ ಹೈ ಸೆಕ್ಯೂರಿಟಿ ವಾರ್ಡ್ ನಿರ್ಮಾಣಕ್ಕೆ 100 ಕೋಟಿ ರೂ. ಹಾಗೂ ವಿಜಯಪುರ ಕಾರಾಗೃಹದಲ್ಲಿ ಹೊಸ ಬ್ಲಾಕ್ ಮಾಡಲು 99.98 ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಉಗ್ರಗಾಮಿಗಳನ್ನು ಬಂಧಿಸಿಡುವ ಉದ್ದೇಶದಿಂದ ಅವರಿಗಾಗಿ ಪ್ರತ್ಯೇಕ ಬ್ಲಾಕ್‌ಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.