ಕರ್ನಾಟಕ

karnataka

ETV Bharat / state

ಪಾಶ್ಚಾತ್ಯ ಮಾಧ್ಯಮಗಳು ಭಾರತೀಯರನ್ನು ದಾರಿ ತಪ್ಪಿಸುತ್ತಿವೆ: ಡಾ ಸೂರ್ಯ ಪ್ರಕಾಶ್

ಕಮ್ಯುನಿಸ್ಟರು, ಕೆಲ ಪತ್ರಕರ್ತರು ದೇಶದ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ: ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಡಾ ಸೂರ್ಯ ಪ್ರಕಾಶ್ ಆರೋಪ

Dr A Surya Prakash spoke at the program
ಸಂವಾದ ಕಾರ್ಯಕ್ರಮದಲ್ಲಿ ಪ್ರಸಾರ ಭಾರತೀಯ ಮಾಜಿ ಅಧ್ಯಕ್ಷ ಡಾ ಎ ಸೂರ್ಯ ಪ್ರಕಾಶ್ ಮಾತನಾಡಿದರು

By

Published : Jul 2, 2023, 4:42 PM IST

Updated : Jul 2, 2023, 7:23 PM IST

ಬೆಂಗಳೂರು: ಸದ್ಯ 36 ಜನ ಆರ್ಚ್ ಬಿಷಪ್​ಗಳು ಬ್ರಿಟಿಷ್ ಪಾರ್ಲಿಮೆಂಟ್ ಸದ್ಯಸರಾಗಿದ್ದಾರೆ. ಅವರುಗಳ ಸಂವಿಧಾನ ಉತ್ಕೃಷ್ಟ, ಜಾತ್ಯತೀತ ಎಂದು ಭಾರತದಲ್ಲಿ ಬಹಳ ವರ್ಷದಿಂದ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಅವರ ಪಾರ್ಲಿಮೆಂಟ್ ನಡೆಯುವ ರೀತಿ ನೋಡಿದರೆ ಯಾವುದೇ ವ್ಯವಸ್ಥೆ ಇದ್ದಂತೆ ತೋರುವುದಿಲ್ಲ ಎಂದು ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಡಾ ಸೂರ್ಯ ಪ್ರಕಾಶ್​ ಹೇಳಿದ್ದಾರೆ.

ಆದರೆ ಹಲವು ಪಾಶ್ಚಾತ್ಯ ಮಾಧ್ಯಮಗಳು ನಮ್ಮದು ಜಾತ್ಯತೀತ ವ್ಯವಸ್ಥೆ ಅಲ್ಲ ಎಂದು ಬೊಬ್ಬೆ ಹೊಡೆಯುತ್ತವೆ. ಅಲ್ಲಿನ ನಗೆಪಾಟಲಿನ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತವೆ. ಇದನ್ನು ಭಾರತೀಯರಿಗೆ ನಂಬಿಸಲು ಯತ್ನಿಸುತ್ತಿರುವುದು ದುರಂತಗಳಿಗೆ ನಾಂದಿಯಾಗಿದೆ ಎಂದು ಡಾ ಸೂರ್ಯ ಪ್ರಕಾಶ್ ವಾಗ್ದಾಳಿ ನಡೆಸಿದರು.

ಭಾನುವಾರ ವಿಶ್ವ ಸಂವಾದ ಕೇಂದ್ರದಿಂದ ಶಂಕರಪುರದ ಉತ್ತುಂಗ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ನೆಹರು ಕಾಲದಿಂದ ದೇಶ ಒಡೆಯುವ ಪಟ್ಟಭದ್ರ ಹಿತಾಸಕ್ತಿಗಳು ಅಡಳಿತ ವ್ಯವಸ್ಥೆಯಲ್ಲಿ ಒಳಹೊಕ್ಕು ದೇಶವನ್ನು ಮತ್ತು ಜನರ ಮನಸ್ಸನ್ನು ಒಡೆದಿದ್ದಾರೆ. ಅಂಬೇಡ್ಕರ್ ಕೂಡ ಇತರ ಧರ್ಮದವರ ಮತ್ತು ದೇಶ ಒಡೆಯುವ ಕೆಲಸದ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅದರಿಂದಲೇ ಈಗಲೂ ಒಂದು ದೇಶ ಒಂದು ಕಾನೂನು ತರಲು ಅಡ್ಡಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪಾಶ್ಚಾತ್ಯ ಮಾಧ್ಯಮಗಳು ಭಾರತೀಯರನ್ನು ದಾರಿ ತಪ್ಪಿಸುತ್ತಿವೆ: ಡಾ ಸೂರ್ಯ ಪ್ರಕಾಶ್

ಭಾರತದಲ್ಲಿ ಹಿಂದೂಗಳು ಈಗ ಸತ್ಯವನ್ನು ಮನಗೊಂಡು ಸಾಕಷ್ಟು ಬದಲಾಗಿದ್ದಾರೆ. ಅವರ ಬದಲಾವಣೆ ಇತರ ಧರ್ಮದವರಿಗೆ ಸೋಜಿಗವಾಗಿ ಕಾಣಿಸುತ್ತಿದೆ. ಮುಖ್ಯವಾಗಿ ಮುಸ್ಲಿಂ ಧರ್ಮದವರಿಗೆ ಅವರನ್ನು ಎದುರಿಸಲು ಕಷ್ಟವಾಗುತ್ತಿದೆ. ಅವರಿಗೆ ಎದುರುತ್ತರ ನೀಡುವ ಧೈರ್ಯ ಹಿಂದೂಗಳು ತೋರುತ್ತಿದ್ದಾರೆ. ಹಿಂದುತ್ವದಿಂದ ನಮ್ಮ ಸಂವಿಧಾನ ಮತ್ತು ಸಂಸ್ಕೃತಿ ಈ ದೇಶದಲ್ಲಿ ಉಳಿದಿದೆ. ಸುಮಾರು 75 ವರ್ಷದಿಂದ ನಮಗೆ ಇದನ್ನು ತೋರ್ಪಡಿಸಲು ಆಗಿಲ್ಲ ಎನ್ನುವದು ಬೇಸರದ ಸಂಗತಿ. ಆದರೆ ಸತ್ಯಗಳನ್ನು ಜನರು ಅರ್ಥ ಮಾಡಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಕಾನೂನೂ ಸುವ್ಯವಸ್ಥೆ ರಾಜ್ಯ ಸರ್ಕಾರದ ಸುಪರ್ದಿನಲ್ಲಿ ಇರುತ್ತದೆ. ಸಾಕಷ್ಟು ರಾಜ್ಯ ಸರ್ಕಾರಗಳು ಹಿಂದುತ್ವಕ್ಕೆ ಭಾರತೀಯ ಜನತಾ ಪಾರ್ಟಿಗೆ ತದ್ವಿರುದ್ದವಾಗಿ ಕೆಲಸ ಮಾಡುತ್ತಿವೆ. ಆದರೆ ಪಾಶ್ಚಾತ್ಯ ದೇಶಗಳು ಅದರ ಮಾಧ್ಯಮಗಳು ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಗಲಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ತಲೆಗೆ ಕಟ್ಟಲು ಹುನ್ನಾರ ನಡೆಯುತ್ತಿದೆ. ಮುಸ್ಲಿಂವಾದಿಗಳು, ಕಮ್ಯುನಿಸ್ಟರು, ಕೆಲ ದೇಶ ವಿರೋಧಿ ಪತ್ರಕರ್ತರು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ, ದೇಶದ ಅಸ್ಮಿಕತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಸಾವರ್ಕರ್ ಮತ್ತು ಇತರ ರಾಷ್ಟ್ರೀಯವಾದಿಗಳು ಈ ದೇಶದಲ್ಲಿ ಹುಟ್ಟಿದವರು ಎಲ್ಲ ಹಿಂದೂಗಳು ಎಂದು ಪ್ರತಿಪಾದಿಸಿದ್ದರು. ನಮ್ಮ ಧರ್ಮ ರಿಲಿಜನ್ ಅಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರಿಲಿಜನ್ ಅನ್ನು ಸಂವಿಧಾನದಿಂದ ಬೇರ್ಪಡಿಸುವ ಕೆಲಸ ನಡೆಯಿತು. ಆದರೆ ಇಲ್ಲಿನ ಕಮ್ಯುನಿಸ್ಟರು ಇಲ್ಲಿ ಅದನ್ನು ತುರುಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಧರ್ಮ ಮತ್ತು ರಿಲಿಜನ್ ಮಧ್ಯ ಸಾಕಷ್ಟು ವುತ್ಯಾಸವಿದೆ ಎನ್ನುವುದು ಅರ್ಥವಾಗಿಲ್ಲ. ಅಲ್ಲಿನ ಭೌಗೋಳಿಕ ವಿಸ್ತಾರ ಮತ್ತು ಅಲ್ಲಿನ ಸಂಸ್ಕೃತಿ ಬೇರೆಯಾಗಿದೆ. ಆದರೆ ಅದನ್ನೇ ನಮ್ಮ ದೇಶಕ್ಕೆ ಅಳವಡಿಸುವ ಕೆಲಸ ನಡೆಯುತ್ತಿದೆ. ಇದನ್ನು ನಾವು ಮನಗಾಣಬೇಕು ಎಂದು ಸೂರ್ಯ ಪ್ರಕಾಶ್ ಕರೆ ನೀಡಿದರು.

ಪಾರ್ಲಿಮೆಂಟ್ ಭವನದಲ್ಲಿ ವೇದ ಮತ್ತು ಸಂಸ್ಕೃತಿಯ ಪ್ರತಿಫಲನವಾಗಿದೆ. ಜಗತ್ತಿನ ಯಾವ ದೇಶದಲ್ಲೂ ಇಂತಹ ಸ್ವಾತಂತ್ರ್ಯ, ಸಂಸ್ಕೃತಿ ಮತ್ತು ಉತ್ಕೃಷ್ಟ ವ್ಯವಸ್ಥೆ ಇಲ್ಲ. ಆದರೆ ನಮ್ಮ ಪಠ್ಯಪುಸ್ತಕಗಳಲ್ಲಿ ಇದನ್ನು ಈಗಲೂ ಹೇಳಿಕೊಡದಿರುವ ಮೂಲಕ ಯುವ ಜನಾಂಗಕ್ಕೆ ದ್ರೋಹ ಮಾಡಲಾಗುತ್ತಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರ ಇಲ್ಲಿ ಸ್ವಾತಂತ್ರ್ಯವಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದೆ. ಅದೇ ಸಮಯದಲ್ಲಿ ಸಾವರ್ಕರ್ ಹೆಡಗೇವಾರ್ ಸೇರಿದಂತೆ ಹಲವು ದೇಶಭಕ್ತರ ಬಗ್ಗೆ ಪಠ್ಯಪುಸ್ತಕಗಳಲ್ಲಿ ಒಂದೂ ಶಬ್ಧ ಇರುವುದಿಲ್ಲ ಎಂದು ಹೇಳಿ ದ್ವಿಮುಖ ನೀತಿ ಅನುಸರಿಸಲು ಮುಂದಾಗುತ್ತಿದೆ ಎಂದು ಆರೋಪಿಸಿದರು.

ಮೋದಿ ಅಧಿಕಾರಕ್ಕೆ ಬಂದ ನಂತರ ಸರ್ಕಾರಗಳ ಆಡಳಿತ ವ್ಯವಸ್ಥೆಯಲ್ಲಿ ಮತ್ತು ಮಾಧ್ಯಮಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದೆ. ಹಿಂದುತ್ವ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಚರ್ಚೆಗಳನ್ನು ನೋಡುತ್ತಿದ್ದೇವೆ. ಮೊದಲು ಆರ್. ಎಸ್. ಎಸ್, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರೆ ಅಂತಹ ಪತ್ರಕರ್ತರನ್ನು ಹೊರಗಿಡುವ, ಹೀಗಳೆಯುವ ಕೆಲಸ ನಡೆಯುತ್ತಿತ್ತು ಆದರೆ ಸಮಯ ಬದಲಾಗಿದೆ ಮತ್ತು ಈ ವಲಯಗಳಲ್ಲಿ ಕೂಡ ಸಂಸ್ಕೃತಿಯ ಪ್ರದಿಪಾದಕರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಸಭಿಕರ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಾ ಕಮ್ಯುನಿಸ್ಟರು ಮತ್ತು ನೆಹರೂವಾದಿಗಳು ಮಾಧ್ಯಮ ಸಂಸ್ಥೆಗಳನ್ನು ಕೊಂಡುಕೊಂಡಿದ್ದೇವೆ ಎಂದು ಭಾವಿಸಿದ್ದರು. ಆದರೆ ಇದೀಗ ಎಡಪಂಥಿಯ ಚಿಂತನೆಯುಳ್ಳ ಮಾಧ್ಯಮಗಳಲ್ಲೂ ಮೊತ್ತೊಂದು ವಿಚಾರಧಾರೆಯನ್ನು ಮುನ್ನಲೆಗೆ ತರಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ಜನರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಗಳಲ್ಲಿ ಒಂದಾಗಿದೆ ಎಂದು ಡಾ ಸೂರ್ಯ ಪ್ರಕಾಶ್ ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ವಿಶ್ವ ಸಂವಾದ ಕೇಂದ್ರದ ಡಾ. ಎಂ. ಕೆ‌. ಶ್ರೀಧರನ್, ರಾಧಾಕೃಷ್ಣ ಹೊಳ್ಳ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಆರೆಸ್ಸೆಸ್ ಪ್ರಾಂತ ಪ್ರಚಾರ ಪ್ರಮುಖ ರಾಜೇಶ್ ಪದ್ಮಾರ್ ಸೇರಿದಂತೆ ಹಲವು ಚಿಂತಕರು ಭಾಗವಹಿಸಿದ್ದರು.

ಇದನ್ನೂ ಓದಿ:Actor Kishore: 'ಮನ್ ಕೀ ಬಾತ್​ನಲ್ಲಿ ಕಳೆದುಹೋದ ಮಣಿಪುರದ ಬಾತ್': ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್​ ಕಿಡಿ

Last Updated : Jul 2, 2023, 7:23 PM IST

ABOUT THE AUTHOR

...view details