ಬೆಂಗಳೂರು :ರಾಜಧಾನಿಯ ಪಶ್ಚಿಮ ವಿಭಾಗ ಪೊಲೀಸರು ಕೊರೊನಾ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಸಾರ್ವಜನಿಕರಿಂದ ಸುಮಾರು 4 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಸೇರಿ ಕೊರೊನಾ ನಿಯಮ ಉಲ್ಲಂಸಿದ ಆರೋಪದ ಮೇಲೆ ಈ ಮೊತ್ತ ಸಂಗ್ರಹವಾಗಿದೆ.
ಕೊರೊನಾ ನಿಯಮ ಉಲ್ಲಂಘನೆ : ಪಶ್ಚಿಮ ವಿಭಾಗ ಪೊಲೀಸರಿಂದ ₹4 ಕೋಟಿ ದಂಡ ಸಂಗ್ರಹ - ಪಶ್ಚಿಮ ವಿಭಾಗ ಪೊಲೀಸರಿಂದ 4 ಕೋಟಿ ರೂ ದಂಡ ಸಂಗ್ರಹ
ಕೊರೊನಾ 2ನೇ ಅಲೆಯ ಏಪ್ರಿಲ್ 1ರಿಂದ ಜುಲೈ 10ರವರೆಗೆ 27,654 ಪ್ರಕರಣ ದಾಖಲಿಸಿ 69,13,500 ರೂ. ದಂಡ ಸಂಗ್ರಹಿಸಲಾಗಿದೆ..
ಪಶ್ಚಿಮ ವಿಭಾಗ ಪೊಲೀಸರಿಂದ 4 ಕೋಟಿ ರೂ ದಂಡ ಸಂಗ್ರಹ
ಕೊರೊನಾ ಮೊದಲ ಅಲೆಯ 2020ರ ಜುಲೈ 4ರಿಂದ 2021ರ ಏಪ್ರಿಲ್ 1ರವರೆಗೆ 1,38,505 ಪ್ರಕರಣ ದಾಖಲಿಸಿ 3,46,26,250 ರೂ. ದಂಡ ಸಂಗ್ರಹಿಸಲಾಗಿದೆ. ಕೊರೊನಾ 2ನೇ ಅಲೆಯ ಏಪ್ರಿಲ್ 1ರಿಂದ ಜುಲೈ 10ರ ವರೆಗೆ 27,654 ಪ್ರಕರಣ ದಾಖಲಿಸಿ 69,13,500 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.