ಕರ್ನಾಟಕ

karnataka

ETV Bharat / state

ಬೆಂಗಳೂರು: ಸ್ನೇಹಿತನಿಂದಲೇ ತಡರಾತ್ರಿ ವ್ಯಕ್ತಿಯ ಕೊಲೆ - West Bengal-based Suman Roy murder

ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳ ಮೂಲದ ಸುಮನ್ ರಾಯ್ ಎಂಬ ವ್ಯಕ್ತಿಯ ಕೊಲೆ ನಡೆದಿದ್ದು, ಆರೋಪಿಗಳಿಗಾಗಿ ಹೆಚ್​.ಎ.ಎಲ್ ಪೊಲೀಸರಿಂದ ತನಿಖೆ ಮುಂದುವರೆದಿದೆ.

Suman Roy
ಸುಮನ್ ರಾಯ್ ಕೊಲೆ

By

Published : Dec 4, 2020, 5:40 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ದಿನ ಕಳೆದಂತೆ ಹತ್ಯೆ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇವೆ. ಇದಕ್ಕೆ ಉದಾಹರಣೆಯಂತೆ ತಡರಾತ್ರಿ ವ್ಯಕ್ತಿಯೊಬ್ಬರ ಕೊಲೆ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಸುಮನ್ ರಾಯ್ ಎಂಬ ವ್ಯಕ್ತಿಯ ಕೊಲೆಯಾಗಿದ್ದಾನೆ. ಈತ ತನ್ನ ಸ್ನೇಹಿತ ರಾಜು ಸರ್ಕಾರ್ (22) ಜೊತೆ ನಿರ್ಮಾಣ ಹಂತದ ಕಟ್ಟಡ ಕೆಲಸಕ್ಕಾಗಿ ನಗರಕ್ಕೆ ಆಗಮಿಸಿದ್ದನಂತೆ. ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ. ಇದೇ ವೇಳೆ ರಾಜು ಸರ್ಕಾರ್ ರಾಡ್‌ನಿಂದ ಹಲ್ಲೆ ಮಾಡಿ ಸುಮನ್ ಹತ್ಯೆ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಹೆಚ್​.ಎ.ಎಲ್ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details