ಕರ್ನಾಟಕ

karnataka

ETV Bharat / state

ಬೆಂಗಳೂರು: ಬಾವಿಗೆ ಗ್ರಿಲ್ ಅಳವಡಿಸುವಾಗ ಆಯುತಪ್ಪಿ ಬಿದ್ದು ವ್ಯಕ್ತಿ ಸಾವು - dj halli incident

ಬೆಂಗಳೂರಿನ ಡಿ ಜೆ ಹಳ್ಳಿಯಲ್ಲಿ ಬಾವಿ ಗ್ರಿಲ್​ ಅಳವಡಿಸುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ.

well-grill-installation-accident-man-dies
ಬಾವಿಗೆ ಗ್ರಿಲ್ ಅಳವಡಿಸುವ ಅವಘಡ: ವ್ಯಕ್ತಿ ಸಾವು

By

Published : Dec 17, 2022, 8:13 PM IST

ಬೆಂಗಳೂರು:ಬಾವಿಗೆ ಗ್ರಿಲ್ ಅಳವಡಿಸುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಡಿ.ಜೆ.ಹಳ್ಳಿಯ ಮುತ್ತುಮಾರಿಯಮ್ಮ ದೇವಾಲಯದ ಬಳಿ ನಡೆದಿದೆ. ಶಿವಕುಮಾರ್ (28) ಮೃತ ವ್ಯಕ್ತಿ. ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದ ಶಿವಕುಮಾರ್ ಸುರಕ್ಷತಾ ಕ್ರಮಗಳನ್ನ ಅನುಸರಿಸದೆ ಕೆಲಸ ನಿರ್ವಹಿಸಿದ್ದೇ ಅವಘಡಕ್ಕೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಶಿವಕುಮಾರ್​ಗೆ​ 15 ದಿನಗಳ ಹಸುಗೂಸಿದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಿಯ ಶಾಸಕರ ಸೂಚನೆಯಂತೆ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು ಎಂದು ಮೃತನ ಕಡೆಯವರು ಆರೋಪಿಸಿದ್ದಾರೆ. ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೀದರ್: ನಿದ್ರೆಯಲ್ಲಿದ್ದ ಬಾಲಕನನ್ನು ಚಿರನಿದ್ರೆಗೆ ಕರೆದೊಯ್ದ ಹಾವು..!

ABOUT THE AUTHOR

...view details