ಬೆಂಗಳೂರು :ಸದ್ಯ ಶೇ.50ರಷ್ಟು ಬೆಂಕಿ ನಂದಿಸಿದ್ದೇವೆ. ಕೆಮಿಕಲ್ ಆಗಿರುವುದರಿಂದ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಷ್ಟವಾಗಿವೆ. ಇನ್ನು ಒಂದು ಗಂಟೆಯಲ್ಲಿ ನಿಯಂತ್ರಣಕ್ಕೆ ತರಲಿದ್ದೇವೆ ಎಂದು ಡಿಐಜಿ ಬಾಲಕೃಷ್ಣ ತಿಳಿಸಿದ್ದಾರೆ.
ಇನ್ನೊಂದು ಗಂಟೆಯಲ್ಲಿ ಬೆಂಕಿ ನಿಯಂತ್ರಣಕ್ಕೆ ತರುತ್ತೇವೆ : ಡಿಐಜಿ ಬಾಲಕೃಷ್ಣ - ಕೆಮಿಕಲ್ ಕಾರ್ಖಾನೆ ಅಗ್ನಿ ದುರಂತ
ಥಿನ್ನರ್, ಸ್ಯಾನಿಟೈಸರ್ ತಯಾರಿಸುವ ಕೆಮಿಕಲ್ ಗೋಡೌನ್ ಇದಾಗಿದೆ. ಕೆಮಿಕಲ್ ಪ್ರಾಡಕ್ಟ್ ಇರೋದರಿಂದ ಬೆಂಕಿ ತೀವ್ರಗತಿಯಲ್ಲಿ ವ್ಯಾಪಿಸಿದೆ. ಅಕ್ಕಪಕ್ಕದ ಮನೆಗೆ ಹಾನಿ ಆಗದಂತೆ ಎಚ್ಚರ ವಹಿಸಿಕೊಳ್ಳಲಾಗಿದೆ. 24 ಅಗ್ನಿ ಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ..
ಮೈಸೂರು ರಸ್ತೆಯ ಬಾಪೂಜಿ ನಗರದಲ್ಲಿರುವ ಕೆಮಿಕಲ್ ಕಾರ್ಖಾನೆ ಅಗ್ನಿ ದುರಂತ ಸಂಬಂಧ ಅಗ್ನಿಶಾಮಕ ಇಲಾಖೆಯ ಕಾರ್ಯಾಚರಣೆ ಕುರಿತು ಮಾತನಾಡಿದ ಡಿಐಜಿ ಬಾಲಕೃಷ್ಣ, ನಮಗೆ 11 ಗಂಟೆಗೆ ಕಂಟ್ರೋಲ್ ರೂಮ್‌ಗೆ ಮಾಹಿತಿ ಬಂದಿದೆ. ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣ ಅಲರ್ಟ್ ಆಗಿದ್ದಾರೆ ಎಂದರು.
ನಂತರ ಮಾತನಾಡಿದ ಅವರು, ಥಿನ್ನರ್, ಸ್ಯಾನಿಟೈಸರ್ ತಯಾರಿಸುವ ಕೆಮಿಕಲ್ ಗೋಡೌನ್ ಇದಾಗಿದೆ. ಕೆಮಿಕಲ್ ಪ್ರಾಡಕ್ಟ್ ಇರೋದರಿಂದ ಬೆಂಕಿ ತೀವ್ರಗತಿಯಲ್ಲಿ ವ್ಯಾಪಿಸಿದೆ. ಅಕ್ಕಪಕ್ಕದ ಮನೆಗೆ ಹಾನಿ ಆಗದಂತೆ ಎಚ್ಚರ ವಹಿಸಿಕೊಳ್ಳಲಾಗಿದೆ. 24 ಅಗ್ನಿ ಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. 100ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.