ಕರ್ನಾಟಕ

karnataka

ETV Bharat / state

ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ... ಏನಿರುತ್ತೆ, ಏನಿರಲ್ಲ ನೋಡಿ - ಕರ್ನಾಟಕ ವೀಕೆಂಡ್ ಕರ್ಫ್ಯೂ

ಇಂದಿನಿಂದ ಸೋಮವಾರ ಬೆಳಗ್ಗೆವರೆಗೂ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿರಲಿದ್ದು, ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರ ಹೊರತುಪಡಿಸಿ ಬೇರೆಲ್ಲದಕ್ಕೂ ನಿರ್ಬಂಧ ಹೇರಲಾಗಿದೆ.

Weekend curfew latest news
ಇಂದು ರಾತ್ರಿಯಿಂದ ಎರಡು ದಿನ ವೀಕೆಂಡ್ ಕರ್ಫ್ಯೂ

By

Published : Jun 18, 2021, 11:30 AM IST

ಬೆಂಗಳೂರು:ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಇರಲಿದೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದೆ.

ಅಗತ್ಯ ವಸ್ತುಗಳ ಪೂರೈಕೆ ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಮಧ್ಯಾಹ್ಮ ಎರಡು ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ.

ಕೊರೊನಾ ನಿಯಮ ಉಲ್ಲಂಘಿಸಿ ರಸ್ತೆಗಳಿದರೆ ವಾಹನಗಳನ್ನು ಸೀಜ್​​ ಮಾಡಲಾಗುವುದು. ಬೆಂಗಳೂರು ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಇರಲಿದೆ.

ಏನಿರುತ್ತೆ, ಏನಿರಲ್ಲ?:

  • ಎಲ್ಲಾ ಕೇಂದ್ರ-ರಾಜ್ಯ ಸರ್ಕಾರದ ಕಚೇರಿಗಳು
  • ಕೋವಿಡ್ ಸಂಬಂಧಿತ ಕೆಲಸ ಮಾಡುವ ಕಂಪನಿಗಳು
  • ಅಗತ್ಯ ವಸ್ತುಗಳ ಉತ್ಪಾದನೆಯ ಎಲ್ಲಾ ಕೈಗಾರಿಗಳು, ಸಂಸ್ಥೆಗಳು
  • ಟೆಲಿಕಾಂ ಹಾಗೂ ಇಂಟರ್​ನೆಟ್​​ ಸರ್ವೀಸ್ ಪೂರೈಕೆದಾರರ ಓಡಾಟಕ್ಕೆ ಅವಕಾಶ
  • ಐಟಿ-ಬಿಟಿ ಸಿಬ್ಬಂದಿ ನೌಕರರು ವರ್ಕ್ ಫ್ರಂ ಹೋಂ ಕೆಲಸ ಮಾಡಬೇಕು
  • ರೋಗಿಗಳು, ಅವರ ಕುಟುಂಬಸ್ಥರು ಹಾಗೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರಿಗೆ ಸಂಬಂಧಪಟ್ಟ ಪ್ರೂಫ್ ತೋರಿಸಿ ಓಡಾಟಕ್ಕೆ ಅವಕಾಶ
  • ಅಗತ್ಯ ವಸ್ತುಗಳು, ತರಕಾರಿ-ಮಾಂಸ ಮಾರಾಟಕ್ಕೆ 2 ಗಂಟೆಯವರೆಗೆ ಅವಕಾಶ
  • ಬೀದಿಬದಿ ವ್ಯಾಪಾರಿಗಳಿಗೂ 2 ಗಂಟೆಯವರೆಗೆ ಅವಕಾಶ
  • ಮದ್ಯದಂಗಡಿಗಳು ಕೂಡ ಎರಡು ಗಂಟೆಯವರೆಗೆ ತೆರೆದಿರಲಿವೆ
  • ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶ
  • ರೈಲು-ವಿಮಾನ ಸಂಚಾರ ಇರಲಿದೆ
  • ರಸ್ತೆ ಮಾರ್ಗದ ಮೂಲಕ ಅಂತರ್ ರಾಜ್ಯ, ಅಂತರ್ ಜಿಲ್ಲೆಗಳ ಅಗತ್ಯ ಓಡಾಟಕ್ಕೆ ಅವಕಾಶ
  • ಮೊದಲೇ ಅನುಮತಿ ಪಡೆದ ಮದುವೆಗಳು 40 ಜನರ ಸಮ್ಮುಖದಲ್ಲಿ ಮನೆಗಳಲ್ಲಿ ನಡೆಯಲು ಯಾವುದೇ ನಿಬಂಧನೆ ಇಲ್ಲ
  • ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಐದು ಜನಕ್ಕೆ ಅವಕಾಶ
  • ಈ ಕಾರಣಗಳನ್ನು ಹೊರತುಪಡಿಸಿ‌ ಅನಗತ್ಯ ಓಡಾಟ ನಡೆಸಿದರೆ ಶಿಸ್ತುಕ್ರಮ

ABOUT THE AUTHOR

...view details