ಬೆಂಗಳೂರು:ಶನಿವಾರದಿಂದ(ಆ.7) ಮಹಾರಾಷ್ಟ್ರ ಹಾಗೂ ಕೇರಳ ಗಡಿ ಜಿಲ್ಲೆಗಳು ಮತ್ತು ರಾಜ್ಯಾದ್ಯಂತ ನೈಟ್ ಕರ್ಫ್ಯೂವನ್ನು ಒಂದು ತಾಸು ವಿಸ್ತರಿಸಿ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಕೋವಿಡ್ ಮೂರನೇ ಅಲೆ ಭೀತಿ ಹಾಗೂ ಗಡಿ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಪ್ರಮುಖವಾಗಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಮಹಾರಾಷ್ಟ್ರ ಹಾಗೂ ಕೇರಳ ಗಡಿಯಲ್ಲಿನ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹಾಕಿ ಆದೇಶ ಹೊರಡಿಸಲಾಗಿದೆ. ಇದರ ಜೊತೆಗೆ ನೈಟ್ ಕರ್ಫ್ಯೂ ಅವಧಿಯನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ವಿಸ್ತರಿಸಲಾಗಿದೆ. ಈ ಪರಿಷ್ಕೃತ ಮಾರ್ಗಸೂಚಿ ಆಗಸ್ಟ್ 16ರವರೆಗೆ ಜಾರಿಯಲ್ಲಿರಲಿದೆ.
ಮಾರ್ಗಸೂಚಿಯಲ್ಲಿ ಏನಿದೆ?:
- ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೀದರ್, ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಕೇರಳದ ಗಡಿ ಜಿಲ್ಲೆಗಳಾದ ದ.ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ
- ಎಲ್ಲ ಸಾಮಾಜಿಕ, ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ, ರಾಜಕೀಯ ಸಭೆ ಸಮಾರಂಭಕ್ಕೆ ನಿಷೇಧ
- ಗರಿಷ್ಠ 100 ಜನರೊಂದಿಗೆ ಮದುವೆ ಸಮಾರಂಭಕ್ಕೆ ಅನುಮತಿ
- ಗರಿಷ್ಠ 20 ಮಂದಿಯೊಂದಿಗೆ ಶವಸಂಸ್ಕಾರಕ್ಕೆ ಅನುಮತಿ
- ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಅನುಮತಿ, ಜಾತ್ರೆ, ಮೆರವಣಿಗೆ, ದೇವಸ್ಥಾನ, ಹಬ್ಬಗಳಿಗೆ ನಿಷೇಧ
ವೀಕೆಂಡ್ ಕರ್ಫ್ಯೂ ನಿರ್ಬಂಧ ಹೇಗಿರಲಿದೆ?:
- ಅಗತ್ಯ ಸೇವೆ ಒದಗಿಸುವ ಎಲ್ಲ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳು, ನಿಗಮ, ಮಂಡಳಿಗಳಿಗೆ ಅನುಮತಿ
- ತುರ್ತು ಹಾಗೂ ಅಗತ್ಯ ಸೇವೆ ಒದಗಿಸುವ ಎಲ್ಲಾ ಕೈಗಾರಿಕೆಗಳು, ಸಂಸ್ಥೆಗಳಿಗೆ ಅನುಮತಿ
- ದಿನಸಿ ಅಂಗಡಿ, ಹಾಲು, ಮಾಂಸ, ಹಣ್ಣು ತರಕಾರಿ ಅಂಗಡಿ, ಬೀದಿ ವ್ಯಾಪಾರಿಗಳು, ಪಡಿತರ ಅಂಗಡಿ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅನುಮತಿ
- ಬಾರ್ ಮತ್ತು ರೆಸ್ಟೋರೆಂಟ್ಗೆ ಪಾರ್ಸೆಲ್ಗೆ 5 ಬೆಳಗ್ಗೆ 2 ಗಂಟೆವರೆಗೆ ಅನುಮತಿ
- ಎಲ್ಲ ಹೋಟೆಲ್ಗಳಿಗೆ ಪಾರ್ಸೆಲ್ಗೆ ಅನುಮತಿ
- ರೈಲು, ವಿಮಾನ ಸಂಚಾರಕ್ಕೆ ಅನುಮತಿ
- ಖಾಸಗಿ, ಕೆಎಸ್ಆರ್ಟಿಸಿ, ಬಿಎಂಟಿಸಿ, ಟ್ಯಾಕ್ಸಿ, ಕ್ಯಾಬ್, ಆಟೋಗಳಿಗೆ ನಿರ್ಬಂಧಿತ ಅನುಮತಿ
ಇದನ್ನೂ ಓದಿ:ಪ್ರಮುಖ ಐಸಿಸ್ ಕಾರ್ಯಕರ್ತನ ಬಂಧನ : ಭಟ್ಕಳದಲ್ಲಿ NIA 'ಉಗ್ರ' ಬೇಟೆಯ ಕಥೆ