ಬೆಂಗಳೂರು :ಹೀರೋಯಿನ್ ಮಾಡ್ತೀನಿ ಒಪ್ಪಿಕೋ ಎಂದು ಯುವತಿಗೆ ಟಾರ್ಚರ್ ನೀಡಿದ್ದ ಆರೋಪದಡಿ ವೆಬ್ ಸೀರಿಸ್ ಡೈರೆಕ್ಟರ್ನೋರ್ವನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಕೂಡ್ಲು ಗೇಟ್ ನಿವಾಸಿ ಮನೀಶ್ ರೆಡ್ದಿ ಬಂಧಿತ ಆರೋಪಿ. ಹೊಸದಾಗಿ ವೆಬ್ ಸೀರಿಸ್ ಚಿತ್ರೀಕರಿಸಲು ಮುಂದಾಗಿದ್ದ ಮನೀಶ್ ರೆಡ್ಡಿ, ತನ್ನ ವೆಬ್ ಸೀರಿಸ್ಗೆ ನಾಯಕಿಯ ಹುಡುಕಾಟದಲ್ಲಿದ್ದ. ತನ್ನ ಏರಿಯಾದ 18 ವರ್ಷದ ಯುವತಿಗೆ ಹೀರೋಯಿನ್ ಆಗುವಂತೆ ಆಫರ್ ಮಾಡಿದ್ದ. ಈ ಆಫರ್ ಅನ್ನು ಯುವತಿ ನಿರಾಕರಿಸಿದ್ದಳು.