ಕರ್ನಾಟಕ

karnataka

ETV Bharat / state

ನೇಕಾರಿಕೆ ಮೇಲೆ ಕೊರೊನಾ ಕರಿಛಾಯೆ... ಬೀದಿಗೆ ಬಿದ್ದ ಕಾರ್ಮಿಕರು - ದೊಡ್ಡಬಳ್ಳಾಪುರ ಲೇಟೆಸ್ಟ್​​ ನ್ಯೂಸ್​

ಕೊರೊನಾದಿಂದ ಎಲ್ಲ ವಲಯಗಳು ಸಂಕಷ್ಟಕ್ಕೀಡಾಗಿದ್ದು, ಇದಕ್ಕೆ ನೇಕಾರಿಕೆ ಉದ್ಯಮ ಹೊರತಾಗಿಲ್ಲ. ಲಾಕ್​ಡೌನ್​ನಿಂದ ನೇಯ್ದ ಬಟ್ಟೆಗನ್ನು ಮಾರಾಟ ಮಾಡಲು ಮಾರುಕಟ್ಟೆಯಿಲ್ಲದೇ ಕಾರ್ಮಿಕರು ಜೀವನ ನಡೆಸಲು ಪರದಾಡುತ್ತಿದ್ಧಾರೆ.

Weaving industry losses by corona
ನೇಕಾರಿಕೆ ಮೇಲೆ ಕೊರೊನಾ ಕರಿಛಾಯೆ

By

Published : Apr 24, 2020, 5:47 PM IST

Updated : Apr 24, 2020, 9:27 PM IST

ದೊಡ್ಡಬಳ್ಳಾಪುರ:ಕೊರೊನಾ ನೇಕಾರಿಕೆ ಮೇಲೆ ಪ್ರಭಾವ ಬೀರಿದ್ದು, ಲಾಕ್​ಡೌನ್​ನಿಂದ ಈ ವೃತ್ತಿಯನ್ನು ಅವಲಂಬಿಸಿರುವವರ ಬದುಕು ಬೀದಿಗೆ ಬಿದ್ದಿದೆ.

ನೇಕಾರಿಕೆ ಮೇಲೆ ಕೊರೊನಾ ಕರಿಛಾಯೆ

ನಗರದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಕುಟುಂಬಗಳು ನೇಕಾರಿಕೆಯನ್ನು ಅವಲಂಬಿಸಿದ್ದು, ಇದರಿಂದ ಬರುವ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ಪ್ರಪಂಚದಾದ್ಯಂತ ಆವರಿಸಿರುವ ಕೊರೊನಾ ಮಹಾಮಾರಿ ನೇಕಾರರ ಬದುಕನ್ನು ಕಿತ್ತುಕೊಂಡಿದ್ದು, ಒಂದೊತ್ತಿನ ಆಹಾರಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಳೆದೊಂದು ತಿಂಗಳಿಂದ ನೇಕಾರಿಕೆ ಉದ್ಯಮದ ಮಾರುಕಟ್ಟೆ ನಿಂತು ಹೋಗಿದ್ದು, ತಯಾರಿಸಿದ ಸೀರೆಗಳು ಮಾರಾಟವಾಗದೇ ಮೂಲೆಗೆ ಸೇರಿವೆ. ಹಾಕಿದ ಬಂಡವಾಳ ಹಿಂತಿರುವ ಭರವಸೆ ಕೂಡ ಇಲ್ಲದಂತಾಗಿದೆ. ನೇಕಾರರ ಕಷ್ಟಕ್ಕೆ ಧಾವಿಸಿರುವ ನೇಕಾರರ ಹಿತರಕ್ಷಣಾ ಸಮಿತಿ ಶಾಸಕರು, ಜವಳಿ ಸಚಿವರು ಮತ್ತು ಅಧಿಕಾರಿಗಳಿಗೆ ಕೇರಳ ಮಾದರಿಯಂತೆ ನೇಕಾರರಿಗೆ ಜೀವನಾನಶ್ಯಕ 16 ವಸ್ತುಗಳನ್ನ ಉಚಿತವಾಗಿ ಕೊಡುವಂತೆ ಮನವಿ ಮಾಡಿದ್ದಾರೆ.

ನೇಕಾರಿಕೆ ಉದ್ಯಮದಿಂದ ಮಾಲೀಕರು ನಷ್ಟಕ್ಕೆ ತುತ್ತಾದರೆ, ಬೇರೆ ಕಡೆಯಿಂದ ಇಲ್ಲಿಗೆ ದುಡಿಯಲು ಬಂದ ಕಾರ್ಮಿಕರು ಆಹಾರಕ್ಕಾಗಿ ಅಲೆಯುತ್ತಿದ್ದಾರೆ. ಒಂದು ತಿಂಗಳಿಂದ ಕೆಲಸವಿಲ್ಲದೆ,ಕೈಗೆ ಸಂಬಳ ಸಿಗದೇ ಸಂಸಾರ ಹೇಗೆ ನಡೆಸಬೇಕೆನ್ನುವ ಯೋಚನೆಯಲ್ಲಿದ್ದಾರೆ.

Last Updated : Apr 24, 2020, 9:27 PM IST

ABOUT THE AUTHOR

...view details