ಕರ್ನಾಟಕ

karnataka

ETV Bharat / state

ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ : ಬೆಂಗಳೂರು ಸುಡಲಿದ್ದಾನೆ ಭಾಸ್ಕರ - ನಾಲೆ ಮಳೆ

ಬೆಂಗಳೂರು ನಗರದಲ್ಲಿ ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಮುಂದಿನ ವಾರದಲ್ಲಿ ದಾಖಲಾಗುವ ಸಾಧ್ಯತೆ ಇದೆ. ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಒಣ ಹವೆ ಮುಂದುವರೆಯಲಿದೆ..

weather-report-of-karnataka
ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ

By

Published : Mar 29, 2021, 9:12 PM IST

ಬೆಂಗಳೂರು :ರಾಜ್ಯದ ಹಲವೆಡೆ ನಾಳೆ ಮಳೆಯಾಗಲಿದೆ ಎಂದುರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಹೆಚ್ಚಿನ ಸಾಧ್ಯತೆ ಕಂಡು ಬರುತ್ತಿದೆ ಎಂದಿದ್ದಾರೆ.

ಬೆಂಗಳೂರು ನಗರದಲ್ಲಿ ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಮುಂದಿನ ವಾರದಲ್ಲಿ ದಾಖಲಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಅಲ್ಲದೆ ರಾಜ್ಯದ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಗರಿಷ್ಠ 4 ಸೆ.ಮೀ ಮಳೆಯಾಗಿದೆ. ಉಳಿದಂತೆ ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆಯಲ್ಲಿ 3 ಸೆ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ 2 ಸೆ.ಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕರಾದ ಸಿ ಎಸ್ ಪಾಟೀಲ್

ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 40.6 ಡಿಗ್ರಿ ದಾಖಲಾಗಿದೆ. ರಾಯಚೂರಿನಲ್ಲೂ 39 ಡಿಗ್ರಿ, ವಿಜಯಪುರದಲ್ಲಿ 38.5, ಬೀದರ್​ನಲ್ಲಿ 37.6, ಕೊಪ್ಪಳದಲ್ಲಿ 37.5, ಮಂಡ್ಯದಲ್ಲಿ 36.6, ದಾವಣಗೆರೆಯಲ್ಲಿ 36 ಮತ್ತು ಬೆಂಗಳೂರಿನಲ್ಲಿ 34 ಡಿಗ್ರಿ ಗರಿಷ್ಟ ಉಷ್ಣಾಂಶ ದಾಖಲಾಗಿದೆ. ಮಾರ್ಚ್ 31ರಿಂದ ಏಪ್ರಿಲ್ 2ರ ವರೆಗೆ ಒಣ ಹವೆ ಮುಂದುವರೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ:ಸಿಡಿ ಪ್ರಕರಣದ ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ.. 'ನೋ ಕಮೆಂಟ್ಸ್'ಎಂದ ಬೊಮ್ಮಾಯಿ

ABOUT THE AUTHOR

...view details