ಕರ್ನಾಟಕ

karnataka

ETV Bharat / state

ಮುಂದಿನ ಐದು ದಿನ ರಾಜ್ಯದಲ್ಲಿ ಒಣಹವೆ : ಹೆಚ್ ಎಸ್ ಪಾಟೀಲ್ - Department of Meteorology

ಮುಂಜಾನೆ ವೇಳೆ ಮಂಜು ಕವಿಯುವ ಸಾಧ್ಯತೆ ಇದೆ. ಹವಾಮಾನಕ್ಕೆ ಸಂಬಂಧಿಸಿದ ಮಳೆ, ಗುಡುಗು, ಮೋಡ, ಬಿರುಗಾಳಿ, ಆಲಿಕಲ್ಲು, ಮಿಂಚು ಮೊದಲಾದ ಘಟನೆಗಳನ್ನು ಫೋಟೋ ಸಹಿತ ಭಾರತೀಯ ಹವಾಮಾನ ಇಲಾಖೆಯ ವೆಬ್​ಸೈಟ್​ನಲ್ಲಿ ಹಂಚಿಕೊಳ್ಳಬಹುದು..

dsd
ಹವಾಮಾನ ವರದಿ

By

Published : Jan 20, 2021, 6:49 PM IST

ಬೆಂಗಳೂರು: ಇಂದು ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ಬೀದರ್​ನಲ್ಲಿ ಕನಿಷ್ಟ ಉಷ್ಣಾಂಶ 12.4 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಹೆಚ್ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಹವಾಮಾನ ಇಲಾಖೆ ವರದಿ

ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿಯಲ್ಲಿ 14 ಡಿಗ್ರಿ ಸೆಂಟಿಗ್ರೇಡ್, ಬೆಂಗಳೂರು 16 ಡಿಗ್ರಿ ಸೆಂಟಿಗ್ರೇಡ್ ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಮುಂದಿನ ಐದು ದಿನ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಕನಿಷ್ಠ-15, ಗರಿಷ್ಠ- 29 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ.

ಮುಂಜಾನೆ ವೇಳೆ ಮಂಜು ಕವಿಯುವ ಸಾಧ್ಯತೆ ಇದೆ. ಹವಾಮಾನಕ್ಕೆ ಸಂಬಂಧಿಸಿದ ಮಳೆ, ಗುಡುಗು, ಮೋಡ, ಬಿರುಗಾಳಿ, ಆಲಿಕಲ್ಲು, ಮಿಂಚು ಮೊದಲಾದ ಘಟನೆಗಳನ್ನು ಫೋಟೋ ಸಹಿತ ಭಾರತೀಯ ಹವಾಮಾನ ಇಲಾಖೆಯ ವೆಬ್​ಸೈಟ್​ನಲ್ಲಿ ಹಂಚಿಕೊಳ್ಳಬಹುದು ಎಂದರು.

ABOUT THE AUTHOR

...view details