ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮೈತ್ರಿಗೆ 20 ಸ್ಥಾನ ಲಭಿಸಲಿವೆ : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ - ದಿನೇಶ್ ಗುಂಡೂರಾವ್

ಮಾಧ್ಯಮಗಳಲ್ಲಿ ಮೋದಿ ಅಲೆ ಇದೆ. ಆದರೆ, ಅಂಡರ್ ಕರೆಂಟ್ ಒಂದು ಅಲೆ ಇದೆ. ಆ ಅಂಡರ್ ಕರೆಂಟ್ ಅಲೆ ಕಾಂಗ್ರೆಸ್ ಪರವಾಗಿದೆ. ಚುನಾವಣಾ ಫಲಿತಾಂಶ ನೋಡಿ ನಿಮಗೆ ಅಂಡರ್ ಕರೆಂಟ್ ಅಲೆ ಏನಿತ್ತು ಅನ್ನೋದು ಗೊತ್ತಾಗಲಿದೆ ಅಂತಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್.

ದಿನೇಶ್ ಗುಂಡೂರಾವ್

By

Published : Apr 28, 2019, 7:22 PM IST

ಬೆಂಗಳೂರು:ರಾಜ್ಯದಲ್ಲಿ ಮೈತ್ರಿ ಪಕ್ಷಗಳು 20 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿ ಬಳಿಕ ನಗರದಲ್ಲಿ ಮಾತನಾಡಿದ ಅವರು, ಈ ಬಗ್ಗೆ ವೇಣುಗೋಪಾಲ್ ಸೇರಿದಂತೆ ನಾಯಕರೆಲ್ಲ ಚರ್ಚಿಸಿದ್ದೇವೆ. ಮಾಧ್ಯಮಗಳಲ್ಲಿ ಮೋದಿ ಅಲೆ ಇದೆ. ಆದರೆ, ಅಂಡರ್ ಕರೆಂಟ್ ಒಂದು ಅಲೆ ಇದೆ. ಆ ಅಂಡರ್ ಕರೆಂಟ್ ಅಲೆ ಕಾಂಗ್ರೆಸ್ ಪರವಾಗಿದೆ. ಚುನಾವಣಾ ಫಲಿತಾಂಶ ನೋಡಿ ನಿಮಗೆ ಅಂಡರ್ ಕರೆಂಟ್ ಅಲೆ ಏನಿತ್ತು ಅನ್ನೋದು ಗೊತ್ತಾಗಲಿದೆ ಎಂದರು.

ಲೋಕಸಭಾ ಚುನಾವಣೆ ಮುಗಿದ ಬಳಿಕ ಸಭೆ ಸೇರಿದ್ದು, ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಅನ್ನೋ ಚರ್ಚೆ ಮಾಡಿದ್ದೇವೆ. ಉತ್ತಮ ಫಲಿತಾಂಶದ ನಿರೀಕ್ಷೆ ಇದೆ ಎಂದು ವಿವರಿಸಿದರು.

ಎಸ್.ಟಿ ಸೋಮಶೇಖರ್ ಸಭೆ ಕರೆದ ವಿಚಾರದ ಬಗ್ಗೆ ಮಾತನಾಡಿ, ಸೋಮಶೇಖರ್ ಒಳ್ಳೇ ವಿಚಾರಕ್ಕೆ ಸಭೆ ಕರೆದಿರಬಹುದು. ನಮ್ದೇನೂ ಹಿಟ್ಲರ್ ಆಡಳಿತ ಅಲ್ವಲ್ಲ. ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ತೇನೆ ಎಂದರು.

ABOUT THE AUTHOR

...view details