ಕರ್ನಾಟಕ

karnataka

By

Published : Jan 21, 2021, 2:29 PM IST

ETV Bharat / state

ನಾವೇನು ತಪ್ಪು ಮಾಡಿದ್ದೇವೆ ಎಂದು ಸಿಎಂ ಪ್ರಶ್ನಿಸಿದ ಗೋಪಾಲಯ್ಯ

ಇಂದು ಸಿಎಂ ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತಿದ್ದಂತೆ ಅಸಮಾಧಾನ ಸ್ಫೋಟಗೊಂಡಿದ್ದು, ಗೋಪಾಲಯ್ಯ, ನಾರಾಯಣಗೌಡ, ಎಂಟಿಬಿ ನಾಗರಾಜ್ ಸಚಿವ ಸುಧಾಕರ್​ ಮನೆಯಲ್ಲಿ ಸಭೆ ನಡೆಸಿದ್ದಾರೆ. ಇದೀಗ ಸಂಜೆ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಏಕೆ ಹೇಗೆ ಮಾಡಿದ್ದಾರೆ ಎಂದು ಕೇಳುತ್ತೇವೆ ಎಂದು ಸಚಿವ ಗೋಪಾಲಯ್ಯ ಮಾಧ್ಯಮಗಳಿಗೆ ತಿಳಿಸಿದರು.

ಗೋಪಾಲಯ್ಯ
Minister Gopalayya

ಬೆಂಗಳೂರು:ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತನಾಡುತ್ತೇವೆ. ನಾವೇನು ತಪ್ಪು ಮಾಡಿದ್ದೇವೆ ಅಂತಾ ಕೇಳುತ್ತೇವೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

ಸಚಿವ ಗೋಪಾಲಯ್ಯ

ಸುಧಾಕರ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಪಕ್ಷ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡಿದ್ದೇವೆ. ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದ ಅಂಗಡಿಗಳ ಪರವಾನಗಿ ರದ್ದು ಮಾಡಿದ್ದೇನೆ. ಕಳೆದ 11 ತಿಂಗಳಲ್ಲಿ ಇಲಾಖೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಮುಂದಿನ ದಿನದಲ್ಲಿ ಅನೇಕ ಗುರಿ ಇರಿಸಿಕೊಂಡಿದ್ದೇನೆ. ಬಜೆಟ್​​ನಲ್ಲಿ ಸರ್ಕಾರ ಪಕ್ಷಕ್ಕೆ ಒಳ್ಳೆಯ ಹೆಸರು ತರುವ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಿದ್ದೆ, ಆದರೆ ಖಾತೆ ಬದಲಾವಣೆ ಆಗಿದೆ. ಈ ಕುರಿತು ಸಂಜೆ ನಾವೆಲ್ಲ ನಾಲ್ಕು ಜನ ಸಿಎಂ ಜೊತೆ ಚರ್ಚೆ ನಡೆಸುತ್ತೇವೆ ಎಂದರು.

ನಮಗೆ ಅಪಾಯಿಂಟ್​​ಮೆಂಟ್ ಬೇಕಿಲ್ಲ:

ನಾವು ಸರ್ಕಾರದ ಒಂದು ಭಾಗ, ಹಾಗಾಗಿ ನಮಗೆ ಸಿಎಂ ಭೇಟಿಗೆ ಅನುಮತಿ ಬೇಕಿಲ್ಲ. ಯಾವಾಗ ಬೇಕಾದರೂ ಸಿಎಂ ಭೇಟಿ ಮಾಡಬಹುದು. ಯಾವ ಸಂದರ್ಭದಲ್ಲಿ ಮಾತನಾಡಬೇಕೋ ಮಾಡುತ್ತೇವೆ. ಸಂಪುಟ ಸಭೆಗೆ ಮೊದಲು ಅಥವಾ ನಂತರ ಮಾತನಾಡುತ್ತೇವೆ. ನಾವೇನು ತಪ್ಪು ಮಾಡಿದ್ದೇವೆ ಅಂತಾ ಕೇಳುತ್ತೇವೆ ಎಂದರು.

ಸಚಿವ ರಮೇಶ್ ಜಾರಕಿಹೊಳಿ ಕೂಡ ನಮ್ಮ ಪರ ಇದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ನಾಲ್ಕೈದು ಜನಕ್ಕೆ ಖಾತೆಗಳ ಬದಲಾವಣೆ ಆಗಿದೆ. ಹಾಗಾಗಿ ನಾವು ಸುಧಾಕರ್ ನಿವಾಸದಲ್ಲಿ ಸಭೆ ನಡೆಸಿದ್ದೇವೆ ಎಂದರು.

ABOUT THE AUTHOR

...view details