ಕರ್ನಾಟಕ

karnataka

ETV Bharat / state

ಸತತ 3 ಗಂಟೆ ದಿಗಂತ್-ಐಂದ್ರಿತಾ ವಿಚಾರಣೆ... ಅಗತ್ಯ ಇದ್ದಲ್ಲಿ ಮತ್ತೆ ನೋಟಿಸ್ ಕೊಡ್ತೇವೆ: ಸಂದೀಪ್ ಪಾಟೀಲ್​ - CCB head Sandeep Patil

ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಇಂದು ಸಿಸಿಬಿ ಪೊಲೀಸರ ಎದುರು ಹಾಜರಾಗಿದ್ದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ಸತತ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.

We will give notice to Diganth and Aindrita Ray to inquire again : Sandeep Patil
ತಾರಾ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ

By

Published : Sep 16, 2020, 4:39 PM IST

ಬೆಂಗಳೂರು :ಡ್ರಗ್ಸ್​ ಪ್ರಕರಣ ಕುರಿತು ಸತತ ಮೂರು ಗಂಟೆಗಳ ಕಾಲ ಸ್ಯಾಂಡಲ್​ವುಡ್​ ತಾರಾ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಅವರ ವಿಚಾರಣೆಯನ್ನು ನಡೆಸಲಾಗಿದೆ. ಅವಶ್ಯಕತೆ ಇದ್ದಲ್ಲಿ ವಿಚಾರಣೆಗಾಗಿ ಮತ್ತೆ ನೋಟಿಸ್ ಕೊಡಲಾಗುತ್ತದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್​ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ನೋಟಿಸ್​ ನೀಡಿ ಕರೆಯಿಸಿಕೊಂಡು ಸತತ ಮೂರು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲಾಗಿದೆ‌. ಮತ್ತೊಮ್ಮೆ ವಿಚಾರಣೆಗೆ ಕರೆಯುವುದಾಗಿ ಅವರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಐಂದ್ರಿತಾ ರೇ, ವಿಚಾರಣೆಗೆ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದೇವೆ. ತನಿಖೆ ನಡೆಯುತ್ತಿದೆ. ಪೊಲೀಸರು ಮತ್ತೆ ಕರೆದರೆ ಬರುತ್ತೇವೆ ಎಂದು ತಿಳಿಸಿದ್ದಾರೆ.

ಸಿಸಿಬಿ ಪೊಲೀಸರ ಎದುರು ಹಾಜರಾಗಿದ್ದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ

ವಿಚಾರಣೆ ವೇಳೆ ದಂಪತಿ ಬಳಸುತ್ತಿದ್ದ ಎರಡು ಹೈ-ಫೋನ್​ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮೊಬೈಲ್ ರಿಟ್ರೈವ್​ ಮಾಡಲು ಎಫ್​ಎಸ್​ಎಲ್​ಗೆ ಸಹ ಕಳುಹಿಸಲು ತಯಾರಿ ನಡೆಸಿದ್ದಾರಂತೆ.

ಇನ್ನು ಡ್ರಗ್ಸ್ ಕೇಸ್​ನಲ್ಲಿ ನೈಜೀರಿಯಾ ಮೂಲದ ಡೊನಾಲ್ಡ್ ಉಡೇನಾ ಎಂಬ ಮತ್ತೋರ್ವ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮೂವರು ಹೆಸರಿನಲ್ಲಿ ಮೂರು ಮೊಬೈಲ್​ಗಳನ್ನು ಬಳಸಿಕೊಂಡು ನಿರಂತರವಾಗಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ಯಲಹಂಕದಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 12 ಗ್ರಾಂ ಕೊಕೈನ್​ ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details