ಕರ್ನಾಟಕ

karnataka

By

Published : May 12, 2021, 5:41 PM IST

ETV Bharat / state

ಶವಸಂಸ್ಕಾರದ 'ಟೈಮ್'​ ನಾವೇ ಫಿಕ್ಸ್​ ಮಾಡುತ್ತೇವೆ : ಸಚಿವ ಆರ್ ಅಶೋಕ್​

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ಬಳಿ ಯಾವುದೇ ಸುಲಿಗೆ ಮಾಡಬಾರದು. ಅವರಿಗೆ ಎಲ್ಲವೂ ಉಚಿತ. ಯಾವುದಕ್ಕೂ ಹಣ ಕೊಡುವ ಹಾಗಿಲ್ಲ. ಕೊನೆಗೆ ಬೂದಿ ತೆಗೆದುಕೊಳ್ಳುವ ಮಡಿಕೆ ಕೂಡ ಫ್ರೀ ಇರುತ್ತೆ ಎಂದು ಸ್ಪಷ್ಟಪಡಿಸಿದರು. ಕೋವಿಡ್ ಟೆಸ್ಟ್, ಆರ್​ಟಿಪಿಸಿಆರ್​, ರ್ಯಾಪಿಡ್​ ಟೆಸ್ಟ್‌ಗಳನ್ನು ನಿಲ್ಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಹಾಗೂ ವಿರೋಧ ಪಕ್ಷದವರು ಆರೋಪಿಸಿದ್ದಾರೆ..

r-ashok
ಆರ್ ಅಶೋಕ್​

ಬೆಂಗಳೂರು : ಕೋವಿಡ್​ನಿಂದ ಮೃತಪಟ್ಟವರಿಗೆ ಗೌರವಯುತವಾಗಿ ಶವಸಂಸ್ಕಾರ ಆಗಬೇಕು ಎಂದು ಕಂಟ್ರೋಲ್ ರೂಮ್​ ಓಪನ್ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್​ ತಿಳಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದರಲ್ಲಿ 19 ಜನ ಮೂರು ಶಿಫ್ಟ್​ನಲ್ಲಿ ಕೆಲಸ ಮಾಡುತ್ತಾರೆ. 8495998495 ಇದು ಕಾಲ್ ಸೆಂಟರ್ ನಂಬರ್. ಇದು ಬೆಂಗಳೂರಿಗೆ ಮಾತ್ರ ಸಂಬಂಧಿಸಿದ್ದು, ನಾವೇ ಟೈಮ್ ಫಿಕ್ಸ್ ಮಾಡುತ್ತೇವೆ. ಅವರು ಎಷ್ಟು ಗಂಟೆಗೆ ಹೋಗಬೇಕು ಎಂದು ನಾವೇ ಹೇಳುತ್ತೇವೆ ಎಂದು ಅಂತ್ಯ ಸಂಸ್ಕಾರ ನಿರ್ವಹಣೆ ಬಗ್ಗೆ ವಿವರಿಸಿದರು.

ಅಂತ್ಯ ಸಂಸ್ಕಾರದ ನಿರ್ವಹಣೆ ಕುರಿತು ಕಂದಾಯ ಸಚಿವ ಆರ್. ಅಶೋಕ್ ಮಾತು..

18 ಕಡೆಗೆ ಶವಸಂಸ್ಕಾರ ನಡೆಸಲು ಹೊಸದಾಗಿ ಕಾರ್ಯನಿರ್ವಹಣೆ ಮಾಡಲಾಗಿದೆ. ಆ್ಯಂಬುಲೆನ್ಸ್​ ಇಲ್ಲದೇ ಇದ್ರೂ, ಬೇರೆ ವಾಹನದಲ್ಲಿ ತೆಗೆದುಕೊಂಡು ಹೋಗಬಹುದು. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ಬಳಿ ಯಾವುದೇ ಸುಲಿಗೆ ಮಾಡಬಾರದು.

ಅವರಿಗೆ ಎಲ್ಲವೂ ಉಚಿತ. ಯಾವುದಕ್ಕೂ ಹಣ ಕೊಡುವ ಹಾಗಿಲ್ಲ. ಕೊನೆಗೆ ಬೂದಿ ತೆಗೆದುಕೊಳ್ಳುವ ಮಡಿಕೆ ಕೂಡ ಫ್ರೀ ಇರುತ್ತೆ ಎಂದು ಸ್ಪಷ್ಟಪಡಿಸಿದರು. ಕೋವಿಡ್ ಟೆಸ್ಟ್, ಆರ್​ಟಿಪಿಸಿಆರ್​, ರ್ಯಾಪಿಡ್​ ಟೆಸ್ಟ್‌ಗಳನ್ನು ನಿಲ್ಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಹಾಗೂ ವಿರೋಧ ಪಕ್ಷದವರು ಆರೋಪಿಸಿದ್ದಾರೆ.

ಆದರೆ, ನಾವು ನಿಲ್ಲಿಸಿಲ್ಲ. ಐಎಲ್​ಐ, ಸಾರಿ ಕೇಸ್ ಕಡ್ಡಾಯ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿತ ಲಕ್ಷಣಗಳಿರುವವರ ಸಂಪರ್ಕದಲ್ಲಿ ಇರುವವರನ್ನು ಪರೀಕ್ಷೆಗೆ ಒಳಪಡಿಸಬೇಕು. ನಾವು ಯಾವುದನ್ನೂ ನಿಲ್ಲಿಸಿಲ್ಲ. ನಾವು ರಾಜ್ಯ ಸರ್ಕಾರದಿಂದ ಆದೇಶ ಮಾಡಿದ್ದೇವೆ. ಯಾವ ಟೆಸ್ಟ್​ನೂ ನಿಲ್ಲಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯಿಂದ ಸಿಪ್ಲಾ ಕಂಪನಿಗೆ ನೋಟಿಸ್ ನೀಡಿದ್ವಿ. ಅವರು ರೆಮಿಡಿಸಿವಿರ್​​ ಕೊಡಬೇಕಿತ್ತು. ಅವರು ಆಟ ಆಡಿಸುತ್ತಿದ್ರು. ಇವಾಗ ಅವರು ರೆಮಿಡಿಸಿವಿರ್​​ ಎಷ್ಟು ಕೊಡಬೇಕಿತ್ತು ಅದನ್ನು ಕೊಟ್ಟಿದ್ದಾರೆ. ಎಷ್ಟು ಬೇಡಿಕೆ ಇದೆ ಅಷ್ಟು ನೀಗಿಸುತ್ತದೆ. ಕಂದಾಯ ಇಲಾಖೆಯ ನೋಟಿಸ್​ಗೆ ಎಲ್ಲಾ ಸಪ್ಲೆ ಮಾಡಿದ್ದಾರೆ ಎಂದರು.

ಓದಿ:ಬೆಡ್ ಲಭ್ಯತೆಯ ರಿಯಾಲಿಟಿ ಚೆಕಿಂಗ್​​ಗೆ ಅಧಿಕಾರಿಗಳ ನೇಮಕ

ABOUT THE AUTHOR

...view details