ಬೆಂಗಳೂರು :ನಮ್ಮೆಲ್ಲಾ ಶಾಸಕರು ಒಟ್ಟಿಗೇ ಇದ್ದು, ಸೋಮವಾರ ಸದನಕ್ಕೆ ಬರಬೇಕು ಎನ್ನುವ ಕಾರಣಕ್ಕೆ ನಮ್ಮ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಸದನಕ್ಕೆ ಒಟ್ಟಿಗೆ ಹೋಗಬೇಕೆಂಬ ಉದ್ದೇಶಕ್ಕೆ ಶಾಸಕರು ರೆಸಾರ್ಟ್‌ಗೆ: ಬಿಎಸ್‌ವೈ
ಮುಂಬೈನಲ್ಲಿರೋ ಶಾಸಕರನ್ನು ನಮ್ಮ ಸ್ನೇಹಿತರು ಸಂಪರ್ಕ ಮಾಡಿದ್ದರು. ಸುಪ್ರೀಂಕೋರ್ಟ್ ಆದೇಶದಿಂದ ಸಮಾಧಾನ ಆಗಿದೆ ಅಂತ ಸ್ಪೀಕರ್ ಹೇಳಿದ್ದಾರೆ. 10 ಮಂದಿ ಅನರ್ಹಗೊಳಿಸುವ ಕೆಲಸ ಆಗಿಲ್ಲ, ಆ ವಿಚಾರ ಚರ್ಚೆ ಮಾಡುವಂತಿಲ್ಲ. ವಿಪ್ ಕೊಟ್ಟರೆ ಅನ್ವಯ ಆಗಲ್ಲ ರಾಜೀನಾಮೆ ವಿಚಾರಣೆ ಕೂಡಾ ಸ್ಪೀಕರ್ ನಡೆಸುವಂತಿಲ್ಲ ಎಂದು ಯಡಿಯೂರಪ್ಪ ಹೇಳಿದ್ರು.
ವಿಧಾನಸೌಧದಲ್ಲಿ ಮಾತನಾಡಿದ ಬಿಎಸ್‌ವೈ ಅವರು, ಸರ್ವೋಚ್ಚ ನ್ಯಾಯಾಲಯವು ಸಮಂಜಸವಾದ ತೀರ್ಪು ನೀಡಿದೆ. ನಿನ್ನೆ ಬಂದು ಹೋದ ಶಾಸಕರಿಗೆ ನೈತಿಕ ಶಕ್ತಿ ಬಂದಂತಾಗಿದೆ. ಮುಂಬೈನಲ್ಲಿರೋ ಶಾಸಕರನ್ನ ನಮ್ಮ ಸ್ನೇಹಿತರು ಸಂಪರ್ಕ ಮಾಡಿದ್ದರು. ಸುಪ್ರೀಂಕೋರ್ಟ್ ಆದೇಶದಿಂದ ಸಮಾಧಾನ ಆಗಿದೆ ಅಂತ ಸ್ಪೀಕರ್ ಹೇಳಿದ್ದಾರೆ. 10 ಮಂದಿ ಅನರ್ಹಗೊಳಿಸುವ ಕೆಲಸ ಆಗಿಲ್ಲ, ಪ್ರಕರಣ ನ್ಯಾಯಾಂಗ ವ್ಯಾಪ್ತಿಯಲ್ಲಿದ್ದು ಆ ವಿಚಾರವನ್ನು ಚರ್ಚೆ ಮಾಡುವಂತಿಲ್ಲ. ವಿಪ್ ಕೊಟ್ಟರೆ ಅನ್ವಯ ಆಗಲ್ಲ ರಾಜೀನಾಮೆ ವಿಚಾರಣೆ ಕೂಡಾ ಸ್ಪೀಕರ್ ನಡೆಸುವಂತಿಲ್ಲ, ನಾವು ಮಂಗಳವಾರದ ಆದೇಶ ಕಾದು ನೋಡುತ್ತೇವೆ ಎಂದು ತಿಳಿಸಿದರು.
ಸಿಎಂ ವಿಶ್ವಾಸಮತಯಾಚನೆ ಆಧಾರದಲ್ಲಿ ಮುಂದೇನು ಮಾಡಬೇಕು ಅಂತ ನಿರ್ಧರಿಸುತ್ತೇವೆ. ವಿಶ್ವಾಸಮತ ನಾವು ಎದುರಿಸುವ ಪ್ರಶ್ನೆಯೇ ಇಲ್ಲ. ಶಾಸಕರೆಲ್ಲಾ ಒಟ್ಟಿಗೆ ಇರುತ್ತೇವೆ, ಆದರೂ ಒಟ್ಟಿಗೆ ಇರಿ ಎಂದಿದ್ದೇನೆ. ಹಾಗಾಗಿ ಅವರೆಲ್ಲ ರೆಸಾರ್ಟ್ ಗೆ ಹೋಗುತ್ತಿದ್ದಾರೆ. ಇವತ್ತು ತುಂಬಾ ಕೆಲಸದಲ್ಲಿ ತೊಡಗಿದ್ದ ಕಾರಣ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಲು ಆಗಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟನೆ ನೀಡಿದರು.