ಕರ್ನಾಟಕ

karnataka

ETV Bharat / state

ದುಬೈ ಕನ್ನಡಿಗರ ಕುಟುಂಬಗಳ ಜವಾಬ್ದಾರಿ ‌ನಮ್ಮದು: ಗೃಹ ಸಚಿವ ಬೊಮ್ಮಾಯಿ ಅಭಯ - ದುಬೈ ಕನ್ನಡಿಗರ ಜವಾಬ್ದಾರಿ ನಮ್ಮದು

ದುಬೈನಲ್ಲಿರುವ ಕನ್ನಡಿಗರಿಗೆ ಯಾವುದೇ ಆತಂಕ ಬೇಡ. ನಾವು ನಿಮ್ಮ ಕುಟುಂಬಗಳ ಜವಾಬ್ದಾರಿಯನ್ನು ನೋಡಿಕೊಳ್ಳುತ್ತೇವೆ ಎಂಬ ಭರವಸೆಯ ಸಂದೇಶವನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರವಾನಿಸಿದ್ದಾರೆ.

Basavaraj Bommai
ಬಸವರಾಜ್ ಬೊಮ್ಮಾಯಿ

By

Published : Apr 18, 2020, 12:38 PM IST

ಬೆಂಗಳೂರು:ದುಬೈ ಕನ್ನಡಿಗರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನಿಮ್ಮ ಕುಟುಂಬಗಳ ಜವಾಬ್ದಾರಿಯನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಯ ನೀಡಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಸರ್ಕಾರ ದುಬೈ ಕನ್ನಡಿಗರ ಜೊತೆ ಇದೆ. ಇಲ್ಲಿರುವ ನಿಮ್ಮ ಕುಟುಂಬಸ್ಥರಿಗೂ ಯಾವುದೇ ರೀತಿ ಸಮಸ್ಯೆ ಆಗಲು ನಾವು ಬಿಡುವುದಿಲ್ಲ. ನಿಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.

ದುಬೈನಲ್ಲಿರುವ ಕನ್ನಡಿಗ ಉದ್ಯಮಿಗಳು, ನೌಕರರು, ಕೊರೊನಾ ವಿರುದ್ಧ ಹೋರಾಡಲು ನೆರವಾಗಬೇಕು. ಸರ್ಕಾರಕ್ಕೆ ನಿಮ್ಮ ಸಹಕಾರ ಇರಲಿ. ಅಲ್ಲಿರುವ ಕನ್ನಡಿಗ ಕಾರ್ಮಿಕರು, ಕೆಲಸಗಾರರ ಬಗೆಗೂ ನೀವು ಕಾಳಜಿ ವಹಿಸಿ, ಅಸಹಾಯಕರಿಗೆ ಸಹಾಯ ಮಾಡಿ. ಸರ್ಕಾರ ಯಾವಾಗಲೂ ನಿಮ್ಮ ಜೊತೆ ಇದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

ABOUT THE AUTHOR

...view details