ಬೆಂಗಳೂರು: ನಿನ್ನೆ ಸಿಎಂ ಮನೆಗೆ ನಾನು, ರಾಜುಗೌಡ ಮುನೇನಕೊಪ್ಪ, ಲಿಂಗಪ್ಪ ಕೆಲವು ಶಾಸಕರು ಹೋಗಿದ್ದೆವು. ಅಭಿವೃದ್ಧಿ ದೃಷ್ಟಿಯಿಂದ ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತನಾಡಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಕೆಲಸದ ಒತ್ತಡದ ನಡುವೆ ಸಿಎಂ ಭೇಟಿಯಾಗಿರಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನಿನ್ನೆ ಸಿಎಂ ಜೊತೆ ಮಾತನಾಡಿದ್ದೇವೆ ಎಂದು ತಿಳಿಸಿದರು. ನಿನ್ನೆ ಸುನೀಲ್ ಕುಮಾರ್ ಕಚೇರಿಯಲ್ಲಿ ಕೆಲ ಶಾಸಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುನೀಲ್ ಕುಮಾರ್ ಆಡಳಿತ ಪಕ್ಷದ ಸಚೇತಕ. ಅವರೆಲ್ಲ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಹಿರಿಯರಿದ್ದಾರೆ. ಅವರ ಜೊತೆ ಕೆಲ ಶಾಸಕರು ಮಾತಾಡಿದ್ರೆ ತಪ್ಪೇನಿದೆ?. ಹಾದಿ ಬೀದಿಯಲ್ಲಿ ಮಾತಾಡುವ ಬದಲು ಒಟ್ಟಿಗೆ ಕುಳಿತು ಮಾತಾಡಿದ್ದಾರೆ. ಸಿಎಂಗೆ ಮುಕ್ತ ಸಲಹೆ ನೀಡಲು ಎಲ್ಲರಿಗೂ ಅವಕಾಶ ಇದೆ ಎಂದು ಸುನೀಲ್ ಕುಮಾರ್, ತಿಪ್ಪಾರೆಡ್ಡಿ ಮತ್ತಿತರ ಶಾಸಕರ ಸಭೆಯನ್ನು ಸಮರ್ಥಿಸಿಕೊಂಡರು.
ಓದಿ:ಜಾರಕಿಹೊಳಿ ನಿವಾಸದಲ್ಲಿ ರೇಣುಕಾಚಾರ್ಯ & ಟೀಂ ಸಭೆ; ಭೋಜನ ಕೂಟದ ನೆಪದಲ್ಲಿ ಅತೃಪ್ತರ ಮೀಟಿಂಗ್?