ಕರ್ನಾಟಕ

karnataka

ETV Bharat / state

ರಾಮನಗರದ ಜೈಲಿನಲ್ಲಿದ್ದ ಐವರು ಕೈದಿಗಳಿಗೆ ಕೊರೊನಾ ಪಾಸಿಟಿವ್: ಸಚಿವ ಬೊಮ್ಮಾಯಿ

ರಾಮನಗರ ಜೈಲಿನಲ್ಲಿದ್ದ ಐವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ. ಉಳಿದವರನ್ನು ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

By

Published : Apr 24, 2020, 1:53 PM IST

Basavaraj Bommai
ಬಸವರಾಜ್ ಬೊಮ್ಮಾಯಿ

ಬೆಂಗಳೂರು: ರಾಮನಗರದ ಜೈಲಿನಲ್ಲಿದ್ದ ಐವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಉಳಿದ ಆರೋಪಿಗಳನ್ನು ಹಜ್ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಹಿರಿಯ ಪೊಲೀಸ್​ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ಪ್ರಕರಣದ 112 ಆರೋಪಿಗಳನ್ನು ಪರೀಕ್ಷೆ ಮಾಡಿಸಿದ್ದೇವೆ. ಮೊದಲು ಎರಡು, ಈಗ ಮೂರು ಜನರಿಗೆ ಪಾಸಿಟಿವ್​​ ಬಂದಿದೆ. ಈ ಐವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ. ಉಳಿದವರನ್ನು ಹಜ್ ಭವನಕ್ಕೆ ಕಳಿಸಲಾಗಿದೆ ಎಂದು ತಿಳಿಸಿದರು.

ಈ ಕುರಿತಂತೆ ಇಂದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಮನಗರ ಜೈಲಿನ ಸಿಬ್ಬಂದಿಗೂ ಕ್ವಾರಂಟೈನ್ ಮಾಡಲಾಗುವುದು. ಎಲ್ಲೆಲ್ಲಿ ಕಂಟೈನ್​ಮೆಂಟ್ ಝೋನ್ ಇತ್ತೋ ಅಲ್ಲೆಲ್ಲ ಹೆಚ್ಚಿನ ತಪಾಸಣೆಗೆ ನಿರ್ಧರಿಸಿದ್ದೇವೆ. ಇದಕ್ಕೆ ಗೃಹ ಇಲಾಖೆ ಮಾಡಿದ ಯಡವಟ್ಟು ಎನ್ನುವ ಆರೋಪವನ್ನು ನಾನು ಒಪ್ಪುವುದಿಲ್ಲ. ಸುಪ್ರೀಂಕೋರ್ಟ್ ಆದೇಶವಿದೆ. ಹೆಚ್ಚಿನ ಕೈದಿಗಳು ಇರುವ ಜಾಗದಲ್ಲಿ ಅವರನ್ನು ಇಡೋದು ಬೇಡವೆಂದು ನಿರ್ಧರಿಸಲಾಗಿತ್ತು. ನಾನು ಈ ಮೊದಲು ಕುಮಾರಸ್ವಾಮಿಯವರಿಗೂ ಹೇಳಿದ್ದೆ. ಪರೀಕ್ಷೆ ಮಾಡಿಸಿದ ಬಳಿಕ ಪಾಸಿಟಿವ್ ಬಂದಿದೆ. ಹೀಗಾಗಿ ಅಲ್ಲಿಂದ ಸ್ಥಳಾಂತರ ಮಾಡಿದ್ದೇವೆ ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ತಿಳಿಸಿದರು.

ABOUT THE AUTHOR

...view details