ಕರ್ನಾಟಕ

karnataka

ETV Bharat / state

ಸಭಾಪತಿಗಳ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆ ಸಭೆ ನಡೆಸಿದ್ದೇವೆ: ಮಧು ಬಂಗಾರಪ್ಪ - ವರ್ಗಾವಣೆ ದಂಧೆ ಆರೋಪ

ಮುಂದೆ ಇಲಾಖೆಯಲ್ಲಿ ಉತ್ತಮ ವ್ಯವಸ್ಥೆ ಮಾಡುತ್ತೇವೆ. ಗಮನಾರ್ಹ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ಈ ಬಾರಿ ಕೆಲ ನಿರ್ಧಾರಗಳನ್ನು ಬಜೆಟ್​ನಲ್ಲಿ ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Madhu Bangarappa
ಮಧು ಬಂಗಾರಪ್ಪ

By

Published : Jul 5, 2023, 5:19 PM IST

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಬೆಂಗಳೂರು:''ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆ ಸಭೆ ಮಾಡಿದ್ದೇವೆ'' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ನಡೆಸಿ ಮಾತನಾಡಿದ ಅವರು, ''ಸಭಾಪತಿ ಬಸವರಾಜ ಹೊರಟ್ಟಿ ಅವರ ಜೊತೆ ಮೇಲ್ಮನೆ ಸದಸ್ಯರನ್ನ ಕೂಡ ಕರೆದಿದ್ವಿ. ಬಹಳ ದೊಡ್ಡ ಖಾತೆ ನಮ್ಮದು. ನಮ್ಮ ಇಲಾಖೆಯ ವ್ಯವಸ್ಥೆ ಹಳ್ಳಿ ಮಟ್ಟದಿಂದಲೂ ಇದೆ. ನಮ್ಮ ಸರ್ಕಾರ ಹೇಗೆ ಮುಂದುವರೆಯಬೇಕು. ಇಲಾಖೆಯಲ್ಲಿ ಯಾವ ರೀತಿ ಮುಂದುವರಿಯಬೇಕು ಎಂಬ ವಿಚಾರವಾಗಿ ಚರ್ಚಿಸುತ್ತೇವೆ. ಮಾಜಿ ಶಿಕ್ಷಣ ಸಚಿವರ ಜೊತೆಗೂ ಸಭೆ ಮಾಡುತ್ತೇವೆ. ಮಾಧ್ಯಮದವರ ಜೊತೆಗೂ ಸಭೆ ನಡೆಸಿ ಸಲಹೆಗಳನ್ನು ಪಡೆಯುತ್ತೇವೆ'' ಎಂದರು.

''ಮುಂದೆ ಇಲಾಖೆಯಲ್ಲಿ ಉತ್ತಮ ವ್ಯವಸ್ಥೆ ಮಾಡುತ್ತೇವೆ. ಗಮನಾರ್ಹ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ಈ ಬಾರಿ ಕೆಲ ನಿರ್ಧಾರಗಳನ್ನು ಬಜೆಟ್​ನಲ್ಲಿ ಮುಖ್ಯಮಂತ್ರಿಗಳು ಮಾಡುತ್ತಾರೆ. ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲಾಗ್ತಿದೆ. ಅದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡ್ತಿದ್ದೇವೆ. ಅಧಿಕಾರಿ ವರ್ಗ ಉತ್ತಮ ಸಹಕಾರ ನೀಡ್ತಿದೆ. ಶಿಕ್ಷಕರ ನೇಮಕಾತಿಯನ್ನು ಕೂಡ‌ ಆದಷ್ಟು ಬೇಗ ಮಾಡುತ್ತೇವೆ ಎಂದು ಭರವಸೆ ನೀಡಿದರು.

ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯೆ:ವರ್ಗಾವಣೆ ದಂಧೆ ಆರೋಪ ವಿಚಾರ ಮಾತನಾಡಿ, ''ಅಂಥ ಹೊಲಸು ಕೆಲಸ ನಾನಂತೂ ಮಾಡಿಲ್ಲ. ಜೆಡಿಎಸ್​ನವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಅಂಥ ಅಭ್ಯಾಸ ನನಗಂತೂ ಇಲ್ಲ ಎಂದು ಅವರು, ವರ್ಗಾವಣೆಯನ್ನು ಒಂದೊಂದು ಬಾರಿ ಸಿಎಂ ಅವರು ಮಾಡಿರುತ್ತಾರೆ. ನಾನು ಮಾಡಿರುತ್ತೇನೆ. ಕೇಳೋಕೆ ಹೋಗಿರಲ್ಲ. ಅದು ಕ್ಲಬ್ ಆಗಿರುತ್ತದೆ. ಮಿಸ್ ಆಗಿ ಆಗಿರುತ್ತದೆ'' ಎಂದು ಸಮಜಾಯಿಷಿ ನೀಡಿದರು.

ಪೆನ್ ಡ್ರೈವ್, ಸಿಡಿ ಆದ್ರೂ ಇರಲಿ: ''ಮಾಜಿ ಸಿಎಂ ಹೆಚ್.ಡಿ.ಕೆ ಅಭಿಪ್ರಾಯ ಹೇಳುವುದಕ್ಕೆ ಸ್ವತಂತ್ರರು. ಕಾನೂನು ಇದ್ದೇ ಇದೆ. ಅದಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ನಿರ್ಧಾರ ಕೈಗೊಳ್ಳುತ್ತದೆ. ಪೆನ್ ಡ್ರೈವ್ ಆದ್ರೂ ಇರಲಿ, ಸಿಡಿ ಆದ್ರೂ ಇರಲಿ, ನಿಮ್ಮ ಟಿವಿಯಲ್ಲಾದ್ರೂ ಇರಲಿ. ಏನೇ ಇದ್ರೂ ಕಾನೂನು ಅಡಿಯಲ್ಲಿ ಎಲ್ಲವೂ ಆಗಬೇಕು'' ಎಂದರು.

''ಮುಂದೆ ನಮ್ಮ ಇಲಾಖೆಯಲ್ಲಿ ಉತ್ತಮ ವ್ಯವಸ್ಥೆ ಮಾಡುತ್ತೇವೆ. ಗಮನಾರ್ಹ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ಈ ಬಾರಿ ಕೆಲ ನಿರ್ಧಾರಗಳನ್ನು ಬಜೆಟ್​ನಲ್ಲಿ ಮುಖ್ಯಮಂತ್ರಿಗಳು ಮಾಡುತ್ತಾರೆ‌. ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲಾಗ್ತಿದೆ. ಅದನ್ನ ಸರಿಪಡಿಸುವ ಕೆಲಸವನ್ನ ನಾವು ಮಾಡ್ತಿದ್ದೇವೆ. ಅಧಿಕಾರ ವರ್ಗ ಉತ್ತಮ ಸಹಕಾರ ನೀಡ್ತಿದೆ'' ಎಂದು ಸಚಿವರು ತಿಳಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ:ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಮಾತನಾಡಿ, ''ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಸಾಮರಸ್ಯ ಮೆರೆಯುವ ಕಾರ್ಯ ಮಾಡಬೇಕು. ಆ ಕಾರ್ಯ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ. ಹಿಂದೂಪರ ಸಂಘಟನೆ ಆಗಲಿ ಪಿಎಫ್​ಐ ಆಗಲಿ ಶಾಂತಿ ಕದಡುವ ಕೆಲಸ ಮಾಡಬಾರದು. ಶಿಕ್ಷಕರ ನೇಮಕಾತಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್ ಕೇಳಿದ ಮಾಹಿತಿಯನ್ನು ಅಧಿಕಾರಿಗಳು ನಿಯಮಿತವಾಗಿ ಕೊಡುತ್ತಿದ್ದಾರೆ. ನಿರ್ಲಕ್ಷ್ಯ ಮಾಡ್ತಿಲ್ಲ, ನಾನು ಬಂಗಾರಪ್ಪ ಮಗನಾಗಿ ಶಿಕ್ಷಕರ ನೇಮಕಾತಿ ಆದೇಶ ಕೊಡಲು ತುಂಬ ಉತ್ಸುಕನಾಗಿದ್ದೇನೆ. ಕೋರ್ಟ್ ವಿಚಾರ ಇರುವುದರಿಂದ ಪ್ರತಿಭಟನೆ ಮಾಡಬಾರದು. ಎಲ್ಲರಿಗೂ ಹೋರಾಟ ಮಾಡದೇ ಕಾಯಬೇಕೆಂದು ಮನವಿ ಮಾಡಿಕೊಳ್ತೇನೆ'' ಎಂದು ಹೇಲಿದರು.

ಇದನ್ನೂ ಓದಿ:ವಿಧಾನ ಪರಿಷತ್ ಕಲಾಪ:ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರ, ಗ್ಯಾರಂಟಿ ಚರ್ಚೆಗೆ ಆಗ್ರಹಿಸಿ ಬಿಜೆಪಿ ಧರಣಿ

ABOUT THE AUTHOR

...view details