ಕರ್ನಾಟಕ

karnataka

ETV Bharat / state

ಜನಾಶೀರ್ವಾದ ಇರುವಾಗ ನಮಗೆ ಅಧಿಕಾರ ಸಿಗೊಲ್ಲ ಅನ್ನೋಕೆ ನಿವ್ಯಾರು: ಸಿದ್ದರಾಮಯ್ಯಗೆ ಸದಾನಂದ ಗೌಡ ಟಾಂಗ್​ - ಸಿದ್ದರಾಮಯ್ಯಗೆ ಸದಾನಂದ ಗೌಡ ಟಾಂಗ್​

ಸಿದ್ದರಾಮಯ್ಯರಿಗೆ ಎಲ್ಲೂ ವೇದಿಕೆ ಇಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಕೌಂಟರ್ ಮಾಡಿದ್ರೆ ಏನಾದರೂ ಸಿಗುತ್ತೆ ಅನ್ಕೊಂಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ

By

Published : Oct 16, 2022, 3:02 PM IST

ಬೆಂಗಳೂರು: ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್​ನಲ್ಲಿ ಅರ್ಧರ್ಧ ವೇದಿಕೆ ಅಷ್ಟೇ ಇದೆ. ಇಬ್ಬರಿಗೂ ಪೂರ್ತಿ ವೇದಿಕೆ ಸಿಕ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರು ಟೀಕಿಸಿದ್ದಾರೆ.

ರಾಜಾಜಿನಗರದಲ್ಲಿ ಬಿಜೆಪಿಯ ಪ್ರಕೋಷ್ಠಗಳ ರಾಜ್ಯ ಸಂಚಾಲಕರು ಮತ್ತು ಸಹ-ಸಂಚಾಲಕರ ಸಭೆಯ ಬಳಿಕ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರಲು ಬಿಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಅವರ್ಯಾರು ನಮಗೆ ಅಧಿಕಾರಕ್ಕೆ ಬರಬೇಡಿ ಅನ್ನೋದಿಕ್ಕೆ. ನಮಗೆ ಜನಾಶೀರ್ವಾದ ಇದೆ. ಜನಾಶೀರ್ವಾದ ನಮ್ಮ‌ ಪರ ಇರುವಾಗ ಸಿದ್ದರಾಮಯ್ಯರನ್ನು ಗಣನೆಗೆ ತಗೊಳ್ಳಲ್ಲ. ಸಿದ್ದರಾಮಯ್ಯರಿಗೆ ಎಲ್ಲೂ ವೇದಿಕೆ ಇಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಕೌಂಟರ್ ಮಾಡಿದ್ರೆ ಏನಾದರೂ ಸಿಗುತ್ತೆ ಅನ್ಕೊಂಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮೋದಿ ಪುಕ್ಕಲು ವಿಶ್ವಗುರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಣ್ಣತನದ ಮಾತುಗಳು ಯಾವುದೇ ವ್ಯಕ್ತಿಯ ಗೌರವ ಕಮ್ಮಿ ಮಾಡಲ್ಲ. ಯಾರು ಸಣ್ಣತನದಲ್ಲಿ ಮಾತಾಡ್ತಾರೋ ಮಾತಾಡಿದವರನ್ನೇ ಇನ್ನಷ್ಟು ಕೆಳಗೆ ಕುಗ್ಗಿಸುತ್ತದೆ. ಮೋದಿಯವರು ಜಗತ್ತಿನ ಅದ್ಭುತ ನಾಯಕ. ಮಾಜಿ ಸಿಎಂ ಆದವರು ಪ್ರಧಾನಿ ಬಗ್ಗೆ ಹೀಗೆ ಮಾತಾಡೋದು ಅವರ ಸ್ಥಾನಕ್ಕೆ ಶೋಭೆ ತರಲ್ಲ. ವಿಪಕ್ಷ ನಾಯಕ ಸುಮ್ನೆ ಏನೋ ಮಾತಾಡಿದ್ರೆ ಹೈಲೈಟ್ ಆಗುತ್ತೆ ಅನ್ಕೊಂಡಿದಾರೆ. ಅದರಿಂದ ಅವರ ಘನತೆ, ಗೌರವಗಳೇ ಹಾಳಾಗೋದು ಎಂದು ಕಿಡಿಕಾರಿದರು.

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯ ವಿಚಾರವಾಗಿ ಮಾತನಾಡಿ, ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಬೇಕು ಅಂತ ನಮ್ಮ‌ ಸಂವಿಧಾನದಲ್ಲೇ ಇದೆ. ಹಾಗಾಗಿ ಅದಕ್ಕೆ ಸರಿಯಾದ ರೀತಿಯಲ್ಲಿ ಮೀಸಲಾತಿ ಹೆಚ್ಚಿಸಬೇಕು. ತಮಿಳುನಾಡಿನಲ್ಲಿ 69% ಮೀಸಲಾತಿ ಇದೆ. ನಮ್ಮ ರಾಜ್ಯದಲ್ಲಿ ಕುರುಬರು, ಪಂಚಮಸಾಲಿಗಳು, ಒಕ್ಕಲಿಗರು, ಇತರೆ ಸಮುದಾಯಗಳೂ ಮೀಸಲಾತಿ ಕೇಳ್ತಿದ್ದಾರೆ. ಈ ಸಮುದಾಯಗಳ ಜನಸಂಖ್ಯೆಗೆ ಅನುಸಾರ ಮೀಸಲಾತಿ ಹೆಚ್ಚಿಸಲಿ ಅಂತ ಒತ್ತಾಯ ಮಾಡ್ತೇನೆ ಎಂದರು.

ಓದಿ:ಹಾಸನ‌ದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ABOUT THE AUTHOR

...view details