ಬೆಂಗಳೂರು: ನಾನು ಮುಸ್ಲಿಂ ಆಗಿರಬಹುದು. ಆದರೆ ಅದಕ್ಕೂ ಮುಂಚೆ ನಾನು ಭಾರತೀಯ, ಹಿಂದೂಸ್ತಾನಿ, ಕನ್ನಡಿಗ. ನಮಗೆ ಜಾತಿ ಬೇಡ, ನೆಮ್ಮದಿ ಬೇಕು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಂವಿಧಾನದಿಂದ ನಾವು ನೆಮ್ಮದಿ ಕಾಣುತ್ತಿದ್ದೇವೆ. ನಾನು ಜಾತಿ ಮಾಡಿದ್ದರೆ ನನ್ನ ವಂಶ ನಿರ್ನಾಮವಾಗಲಿ. ರಾಜಕೀಯಕ್ಕೆ ಬಂದ ಮೇಲೆಯೇ ನನಗೆ ಜಾತಿ ಗೊತ್ತಾಗಿರೋದು. ಅದಕ್ಕಿಂತ ಮುಂಚೆ ನನಗೆ ಅದು ಗೊತ್ತಿರಲಿಲ್ಲ ಎಂದು ಹೇಳಿದರು.