ಕರ್ನಾಟಕ

karnataka

ETV Bharat / state

‘ಅಡ್ಜಸ್ಟ್​​ಮೆಂಟ್ ಪಾಲಿಟಿಕ್ಸ್ ನಮಗೆ ಗೊತ್ತಿಲ್ಲ’: ಕುಮಾರಸ್ವಾಮಿಗೆ ಸಚಿವ ಸಿ.ಟಿ. ರವಿ ಪರೋಕ್ಷ ಟಾಂಗ್​​ - H. D Kumaraswamy

ನಮ್ಮದು ಪಾರ್ಟಿ ಹಿತ ಅಷ್ಟೇ. ನಾವು ಯಾರಿಗಾದ್ರೂ ಚೂರಿ ಹಾಕೋದಿದ್ದರೆ ನೇರವಾಗಿ ಹಾಕುತ್ತೇವೆ‌ ಬೆನ್ನಿಗೆ ಚೂರಿ ಹಾಕಲ್ಲ. ಕುಮಾರಸ್ವಾಮಿ ಅನಾನುಭವಿ ರಾಜಕಾರಣಿಯಲ್ಲ. ಅವರು ಹೇಳುವ ಮಾತಿಗೆ ನಾವು ತಕ್ಷಣ ಪ್ರತಿಕ್ರಿಯೆ ನೀಡೋದು ತಪ್ಪಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿದ್ದಾರೆ.

We don't know Adjustment Politics ct Ravi on CP Yogeshwar controversy
‘ಅಡ್ಜಸ್ಟ್​​ಮೆಂಟ್ ಪಾಲಿಟಿಕ್ಸ್ ನಮಗೆ ಗೊತ್ತಿಲ್ಲ’: ಕುಮಾರಸ್ವಾಮಿಗೆ ಸಚಿವ ಸಿ.ಟಿ.ರವಿ ಪರೋಕ್ಷ ಟಾಂಗ್​​

By

Published : Jul 30, 2020, 6:12 PM IST

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್​​.ಡಿ. ಕುಮಾರಸ್ವಾಮಿ ಆಡಳಿತ ಪಕ್ಷಕ್ಕೆ ಪರೋಕ್ಷವಾಗಿ ನೆರವು ನೀಡಿದ್ದಾರೆ ಎಂಬ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ನಮ್ಮ ಪಕ್ಷ ನಿಷ್ಠೆ ಪ್ರಶ್ನಿಸುವುದಕ್ಕೆ ನಾವು ಅವಕಾಶ ಕೊಟ್ಟಿಲ್ಲ. ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ನಮಗೆ ಗೊತ್ತಿಲ್ಲವೆಂದು ಸಿ.ಟಿ. ರವಿ ಅವರು ಪರೋಕ್ಷವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

‘ಅಡ್ಜಸ್ಟ್​​ಮೆಂಟ್ ಪಾಲಿಟಿಕ್ಸ್ ನಮಗೆ ಗೊತ್ತಿಲ್ಲ’: ಕುಮಾರಸ್ವಾಮಿಗೆ ಸಚಿವ ಸಿ.ಟಿ.ರವಿ ಪರೋಕ್ಷ ಟಾಂಗ್​​

ವಿಧಾನಸೌಧದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮದು ಪಾರ್ಟಿ ಹಿತ ಅಷ್ಟೇ. ನಾವು ಯಾರಿಗಾದ್ರೂ ಚೂರಿ ಹಾಕೋದಿದ್ದರೂ ನೇರವಾಗಿ ಹಾಕುತ್ತೇವೆ‌ ಹಿಂಭಾಗದಲ್ಲಿ ಬಂದು ಚೂರಿ ಹಾಕಲ್ಲ. ಕುಮಾರಸ್ವಾಮಿ ಅನಾನುಭವಿ ರಾಜಕಾರಣಿಯಲ್ಲ. ಅವರು ಹೇಳುವ ಮಾತಿಗೆ ನಾವು ತಕ್ಷಣ ಪ್ರತಿಕ್ರಿಯೆ ನೀಡೋದು ತಪ್ಪಾಗಲಿದೆ ಎಂದರು.

ರಾಜಕೀಯದಲ್ಲಿ ವ್ಯಂಗ್ಯ, ಆರೋಪ, ಟೀಕೆಯಂತಹ ಹೇಳಿಕೆಗಳು ಸಾಮಾನ್ಯ. ನಾವು ರಾಜಕೀಯ ವಿರೋಧಿಗಳು ನಿಜ. ಆದರೆ ವೈಯಕ್ತಿಕ ಶತ್ರುಗಳಲ್ಲ ಎಂದು ಸಿ ಟಿ ರವಿ ಸ್ಪಷ್ಟಪಡಿಸಿದರು.

ABOUT THE AUTHOR

...view details