ಕರ್ನಾಟಕ

karnataka

ETV Bharat / state

ರಾಜಕೀಯ ನಾಯಕರ ರೀತಿ ಟೋಲ್ ಫ್ರೀ ಕೇಳ್ತಿಲ್ಲ.. ಕನಿಷ್ಠ ಸುರಕ್ಷತೆಯ ಕಾನೂನು ತನ್ನಿ ಅಂತಾರೆ ವೈದ್ಯರು

ರಾಜಕೀಯ ನಾಯಕರ ತರ ಟೋಲ್ ಫ್ರೀ ಅಥವಾ ಬೇರೆ ವ್ಯವಸ್ಥೆ ಕೇಳುತ್ತಿಲ್ಲ. ಕನಿಷ್ಠ ಸುರಕ್ಷತೆಯ ಕಾನೂನು ತನ್ನಿ ಅಂತಾ ಕೇಳುತ್ತಿದ್ದೀವಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಸರ್ಕಾರಿ ವೈದ್ಯರು.

ಸರ್ಕಾರಿ ವೈದ್ಯರ ಪ್ರತಿಭಟನೆ

By

Published : Jun 17, 2019, 5:36 PM IST

ಬೆಂಗಳೂರು : ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಖಾಸಗಿ ವೈದ್ಯರಲ್ಲದೆ ಸರ್ಕಾರಿ ವೈದ್ಯರೂ ಕೂಡಾ ಸರ್ಕಾರದ ಸುತ್ತೋಲೆ ಧಿಕ್ಕರಿಸಿ ಪ್ರತಿಭಟನೆಗಿಳಿದಿದ್ದಾರೆ.

ದೇಶವ್ಯಾಪಿ ವೈದ್ಯರ ಪ್ರತಿಭಟನೆ ಹಿನ್ನೆಲೆ ಖಾಸಗಿ ವೈದ್ಯರು ಮಾತ್ರವಲ್ಲದೇ ಸರ್ಕಾರಿ ವೈದ್ಯರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ವೇಳೆ ಮಾತನಾಡಿದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಡಾ. ನಿತಿನ್ ಸರ್ಕಾರ ಪ್ರತಿಭಟನೆ ಮಾಡದಂತೆ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ವೈದ್ಯರಿಂದಲೂ ಪ್ರತಿಭಟನೆ

ಆದರೆ, ಇದು ನಮಗೆ ಅನಿವಾರ್ಯ. ನಾವು ಪ್ರತಿಭಟನೆ ಮಾಡುತ್ತಿಲ್ಲ, ನಮ್ಮ ಬೇಡಿಕೆಯನ್ನು ಇಡುತ್ತಿದ್ದೇವೆ. ರಾಜಕೀಯ ನಾಯಕರ ತರ ಟೋಲ್ ಫ್ರೀ ಅಥವಾ ಬೇರೆ ವ್ಯವಸ್ಥೆ ಕೇಳುತ್ತಿಲ್ಲ. ಕನಿಷ್ಠ ಸುರಕ್ಷತೆಯ ಕಾನೂನು ತನ್ನಿ ಅಂತಾ ಕೇಳುತ್ತಿದ್ದೀವಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ನಿರತ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ರೋಗಿಗಳು, ಒಪಿಡಿ ಒಪನ್ ಇದೆ ಅಂತೀರಾ. ಆದರೆ, ಅಲ್ಲೂ ಡಾಕ್ಟರ್ ಇಲ್ಲ ಅಂತಾ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರತಿಭಟನೆಯ ಉದ್ದೇಶವನ್ನು ವೈದ್ಯರು ರೋಗಿಗಳಿಗೆ ಮನವರಿಕೆಮಾಡಿ‌ ಒಪಿಡಿಯಲ್ಲಿ ಚಿಕಿತ್ಸೆಯ ವ್ಯವಸ್ಥೆಯ ಬಗ್ಗೆ ಭರವಸೆ ನೀಡಿದರು.

ABOUT THE AUTHOR

...view details