ಕರ್ನಾಟಕ

karnataka

ETV Bharat / state

ದೇಶದ ಆರ್ಥಿಕ ಕುಸಿತದ ಬಗ್ಗೆ ಉದ್ಯಮಿಗಳೊಂದಿಗೆ ಚರ್ಚಿಸಿದ್ದೇವೆ: ಈಶ್ವರ ಖಂಡ್ರೆ

ಪೀಣ್ಯದ ಕೈಗಾರಿಕೆಗಳು ಸಾಕಷ್ಟು ಉದ್ಯೋಗ ನೀಡಿದ್ದವು. ಸಾಲದ ಮೇಲಿನ ಬಡ್ಡಿಯನ್ನು ಈಗ ಕಟ್ಟುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಕೈಗಾರಿಕೆಗಳು ಆರ್ಥಿಕ ಹೊಡೆತ ಅನುಭವಿಸಿವೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ದೇಶದ ಆರ್ಥಿಕ ಕುಸಿತದ ಬಗ್ಗೆ ಉದ್ಯಮಿಗಳೊಂದಿಗೆ ಚರ್ಚಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

By

Published : Sep 8, 2019, 2:21 AM IST

ಬೆಂಗಳೂರು:ದೇಶದಲ್ಲಿ ಆರ್ಥಿಕ ಕುಸಿತವಾಗಿದೆ. ಇದರ ಬಗ್ಗೆ ಉದ್ಯಮಿಗಳ ಜೊತೆ ಚರ್ಚೆ ನಡೆಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ದೇಶದ ಆರ್ಥಿಕ ಕುಸಿತದ ಬಗ್ಗೆ ಉದ್ಯಮಿಗಳೊಂದಿಗೆ ಚರ್ಚಿಸಿದ್ದೇವೆ

ಕೆಪಿಸಿಸಿ ಕಚೇರಿಯಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆರ್ಥಿಕ ಕುಸಿತ ತಡೆಗೆ ಪಕ್ಷ ಏನು ಮಾಡಬಹುದು. ಪೀಣ್ಯದ ಕೈಗಾರಿಕೆಗಳು ಸಾಕಷ್ಟು ಉದ್ಯೋಗ ನೀಡಿದ್ದವು. ಸಾಲದ ಮೇಲಿನ ಬಡ್ಡಿಯನ್ನು ಈಗ ಕಟ್ಟುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಕೈಗಾರಿಕೆಗಳು ಆರ್ಥಿಕ ಹೊಡೆತ ಅನುಭವಿಸಿವೆ. ಬ್ಲಾಕ್ ಲೀಸ್ಟ್​ಗೆ ಕಂಪನಿ ಸೇರಿಸುವ ಕೆಲಸ ನಡೆದಿದೆ. ಇದರ ಬಗ್ಗೆ ಹಲವು ಸಲಹೆ ಉದ್ಯಮಿಗಳು ನೀಡಿದ್ದಾರೆ ಎಂದರು.

ಇದೀಗ ಆರ್ಥಿಕ ಸವಾಲು ಎದುರಾಗಿದೆ. ನೋಟು ಸಾಕಷ್ಟು ಹೊಡೆತ ಬಿದ್ದಿದೆ. ಇದರಿಂದ ಕೈಗಾರಿಕೆ ಮೇಲಿನ ಒತ್ತಡ ಹೆಚ್ಚಾಗಿದೆ. ಜಿಎಸ್​ಟಿಯಿಂದಲೂ ಕೈಗಾರಿಕೆ ಮೇಲೆ ಹೊಡೆತ ಬಿದ್ದಿದೆ. ಇದರ ಬಗ್ಗೆ ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಉದ್ಯಮಿಗಳ ಜೊತೆ ನಾವು ನಿಲ್ಲೋಕೆ ತೀರ್ಮಾನಿಸಿದ್ದೇವೆ ಎಂದರು.

ABOUT THE AUTHOR

...view details