ಕರ್ನಾಟಕ

karnataka

ETV Bharat / state

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ: ಸಿ.ಎಂ. ಇಬ್ರಾಹಿಂ - cm ibrahim reacted about hijab verdict in vidhana soudha at bengaluru

ಹಿಜಾಬ್ ವಿಚಾರವಾಗಿ ಇವತ್ತು ನ್ಯಾಯಲಯದ ತೀರ್ಪು ಬಂದಿದೆ. ಇದರಲ್ಲಿ ಮೂಲಭೂತವಾಗಿ ಧರ್ಮಕ್ಕೆ ಅಡಚಣೆ ಇಲ್ಲ ಎಂದಿದ್ದಾರೆ. ಇದರ ಮೇಲೆ ಸುಪ್ರೀಂಗೆ ಹೋಗಲು ಇವತ್ತು ಸಮಾಜದ ಮುಖಂಡರ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಧರ್ಮದ ದೃಷ್ಟಿಯ ಬದಲು ಸಂವಿಧಾನದ ದೃಷ್ಟಿಯಿಂದ ನೋಡಬೇಕು. ಯಾರು ಕೂಡ ಬೀದಿಗೆ ಇಳಿಯುವ ಅವಶ್ಯಕತೆ ಇಲ್ಲ ಎಂದು ಎಂಎಲ್​ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

cm ibrahim
ಹಿಜಾಬ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ

By

Published : Mar 15, 2022, 6:40 PM IST

ಬೆಂಗಳೂರು:ಹೈಕೋರ್ಟ್ ತೀರ್ಪನ್ನು ನಾವು ಒಪ್ಪೋದಿಲ್ಲ. ಇದ್ರ ವಿರುದ್ಧ ನಾವು ಸುಪ್ರೀಂಕೋರ್ಟ್​ಗೆ ಹೋಗ್ತೀವಿ ಎಂದು ಎಂಎಲ್​ಸಿ ಸಿ.ಎಂ. ಇಬ್ರಾಹಿಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಸುಪ್ರೀಂಕೋರ್ಟ್ ಗೆ ಹೋಗಲು ಸಮಾಜದ ಮುಖಂಡರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ‌‌. ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಶಕ್ತವಾಗಿದ್ದೇವೆ. ಭಾರತದ ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂಕೋರ್ಟ್​ಗೆ ಒಬ್ಬೊಬ್ಬರೇ ಲಾಯರ್ ಹೋಗಬೇಡಿ. ಎಲ್ಲಾ ಒಟ್ಟಿಗೆ ಹೋಗಿ ಎಂದು ಸಲಹೆ ನೀಡಿದರು.

ಹಿಜಾಬ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ

ಇದನ್ನ ಧರ್ಮದ ದೃಷ್ಟಿಯಿಂದ ನೋಡುವ ಬದಲು ಸಂವಿಧಾನದ ದೃಷ್ಟಿಯಿಂದ ನೋಡಬೇಕು. ಇಂದು ತಿಲಕ, ವಿಭೂತಿ, ಬಿಂದಿ ಇಟ್ಕೊಳೋದು ಚಾಯಿಸ್. ಅದೇ ರೀತಿ ಹಿಜಾಬ್ ಕೂಡ. ನಮ್ಮ ತಾಯಂದಿರು ಸೆರಗು ಹಾಕ್ತಾರೆ, ನಾಳೆ ಕೋರ್ಟ್ ಸೆರಗು ಹಾಕಿಕೊಳ್ಳೋದು ಬೇಡ ಎಂದು ನ್ಯಾಯಾಲಯ ಹೇಳಿದರೆ, ಅದನ್ನು ಸುಪ್ರಿಂಕೋರ್ಟ್​ನಲ್ಲಿ‌ ನಿರ್ಧರಿಸಬೇಕಾಗುತ್ತದೆ. ಅದೇ ರೀತಿ ಈ ಹಿಜಾಬ್ ವಿಚಾರ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮಕ್ಕಳ ಭವಿಷ್ಯದ ವಿಚಾರದಲ್ಲಿ ರಾಜಕೀಯ ಬೆರೆಸಿದ ಕಾಂಗ್ರೆಸ್ ಧೋರಣೆಗೆ ಉತ್ತರ ಸಿಕ್ಕಿದೆ: ಬಿಜೆಪಿ ಟ್ವೀಟ್

ಯಾರೂ ಕೂಡ ಬೀದಿಗೆ ಇಳಿಯುವ ಅವಶ್ಯಕತೆ ಇಲ್ಲ. ಮುಂಬೈನ ಖ್ಯಾತ ವಕೀಲರ ಜೊತೆ ಕೂಡ ನಾನು ಮಾತನಾಡಿದ್ದೇನೆ. ಇದು ಇಲ್ಲಿಗೆ ನಿಲ್ಲೋದಿಲ್ಲ. ನಾಳೆ ಜೀನ್ಸ್ ಪ್ಯಾಂಟ್ ಹಾಕಬಾರದು ಅಂತಾರೆ. ಕೂಡಲೇ ಈ ವಿಚಾರದ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಇಬ್ರಾಹಿಂ ಒತ್ತಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details