ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ನಡೆಸಿರುವ ಷಡ್ಯಂತ್ರದ ವಿರುದ್ಧ ಕಾನೂನು ಹೋರಾಟ ಖಚಿತವಾಗಿದ್ದು, ಪೂರಕ ಮಾಹಿತಿ ಕಲೆಹಾಕುತ್ತಿದ್ದೇವೆ. ನಮ್ಮ ದೂರು ಕೋರ್ಟ್ ನಲ್ಲಿ ನಿಲ್ಲಲಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ದೂರ ನೀಡಲಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಆರೋಪದ ಕುರಿತು ಸಹೋದರ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಟಿ ನಡೆಸಿದ ನಂತರ ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ, ಸಿಡಿ ಬಗ್ಗೆ ಖಾಸಗಿ ಏಜೆನ್ಸಿ ಮೂಲಕ ಮಾಹಿತಿ ಕೆಲೆಹಾಕುತ್ತಿದ್ದೇವೆ. ದೆಹಲಿಯ ನಮ್ಮ ಹಿರಿಯ ವಕೀಲರ ಜೊತೆ ಚರ್ಚೆ ನಡೆಸಿದ್ದೇವೆ. ಬೆಂಗಳೂರು,ಬೆಳಗಾವಿ, ಗೋಕಾಕ್ ಈ ಮೂರು ಸ್ಥಳಗಳಲ್ಲಿ ಎಲ್ಲಿ ದೂರು ಕೊಡಬೇಕು ಎಂದು ಚಿಂತಿಸುತ್ತಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮುಂದೆ ಇಂತಹ ತಪ್ಪು ಮಾಡುವವರಿಗೆ ಇದು ಪಾಠವಾಗಬೇಕು ಎಂದಿದ್ದಾರೆ.