ಬೆಂಗಳೂರು:ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ನಮ್ಮದು. ದೇಶಕ್ಕಾಗಿ ನಮ್ಮ ಪಕ್ಷದವರು ತ್ಯಾಗ ಬಲಿದಾನ ಮಾಡಿದ್ದಾರೆ ಹಾಗೂ ಬ್ರಿಟಿಷರ ಗುಂಡೇಟಿಗೆ ಎದೆಯೊಡ್ಡಿ ನಿಂತಿದ್ದು ನಮ್ಮವರು ಎಂದು ಹೇಳಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ಕುರಿತು ಕಿಡಿಕಾರಿದರು.
ಬ್ರಿಟಿಷರ ಗುಂಡೇಟಿಗೇ ಎದೆಯೊಡ್ಡಿದವರು ನಾವು, ಐಟಿ ದಾಳಿಯಿಂದ ನಮ್ಮನ್ನ ಕುಗ್ಗಿಸಲು ಆಗುತ್ತಾ: ಎಸ್.ಆರ್.ಪಾಟೀಲ್ - IT attack on G.Parameshwar latest news
ಐಟಿ ದಾಳಿಯಿಂದ ನಮ್ಮವರನ್ನು ಕುಗ್ಗಿಸಲು ಸಾಧ್ಯವಿಲ್ಲ. ಕಾನೂನಾತ್ಮಕವಾಗಿ ಬೇಕಾದರೆ ಐಟಿ ಇಲಾಖೆ ಪರಿಶೀಲನೆ ನಡೆಸಲಿ. ಆದರೆ ದುರುದ್ದೇಶ ಬೇಡ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಕಿಡಿಕಾರಿದ್ದಾರೆ.

ಐಟಿ ದಾಳಿ ಬಗ್ಗೆ ಪ್ರತಿಕ್ರಯಿಸಿದ ಎಸ್ ಆರ್ ಪಾಟೀಲ್
ಐಟಿ ದಾಳಿ ಬಗ್ಗೆ ಪ್ರತಿಕ್ರಯಿಸಿದ ಎಸ್.ಆರ್.ಪಾಟೀಲ್
ರಾಜ್ಯದಲ್ಲಿ ಮಹತ್ವದ ಅಧಿವೇಶನ ನಡೆಯುತ್ತಿದೆ. ಐಟಿ ಇಲಾಖೆ ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಲಿ. ಆದರೆ ಉದ್ದೇಶಪೂರ್ವಕವಾಗಿ ನಮ್ಮ ನೈತಿಕ ಸ್ಥೈರ್ಯ ಕುಗ್ಗಿಸಲು ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ ಎಂದು ಕಿಡಿಕಾರಿದರು.
ಅಧಿವೇಶನಕ್ಕೆ ಮಾಧ್ಯಮಗಳ ಕ್ಯಾಮರಾ ನಿರ್ಬಂಧ ವಿಚಾರ:ದೋಸ್ತಿ ಸರ್ಕಾರ ಇದ್ದಾಗ ಇದೇ ನಾಯಕರು ಪ್ರತಿಪಕ್ಷದಲ್ಲಿದ್ದು ಟೀಕಿಸಿದ್ದರು. ರಾಜ್ಯ ಸರ್ಕಾರದ ಈ ನಡೆ ಪ್ರಜಾಪ್ರಭುತ್ವಕ್ಕೆ ಭೂಷಣವಲ್ಲ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಸರ್ಕಾರ ಈ ರೀತಿ ಮಾಡಿರುವುದು ಅಘೋಷಿತ ತುರ್ತು ಪರಿಸ್ಥಿತಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.