ಕರ್ನಾಟಕ

karnataka

ETV Bharat / state

ಸಾರಿಗೆ ಸಚಿವರನ್ನ‌ ಭೇಟಿ ಮಾಡಲು ನಮಗೇನೂ ಮುಜುಗರವಿಲ್ಲ : ಕೋಡಿಹಳ್ಳಿ ಚಂದ್ರಶೇಖರ್ - transport employees strike

ನಾಳೆ 11ನೇ ದಿನದ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ. ಆತ್ಮಹತ್ಯೆ ಮಾಡಿಕೊಳ್ಳುವ ನೌಕರರ ಸಂಖ್ಯೆ ಹೆಚ್ಚಾಗುತ್ತಿದೆ. ಹಸಿದವರ ಹೊಟ್ಟೆ ಮೇಲೆ ಸರ್ಕಾರ ಪ್ರಭಾವ ಬೀರಬಾರದು. ವಜಾ, ಅಮಾನತು, ಎಫ್ಐಆರ್ ಸಮಸ್ಯೆಗೆ ಪರಿಹಾರ ಅಲ್ಲ..

Kodihalli Chandrasekhar
ಕೋಡಿಹಳ್ಳಿ ಚಂದ್ರಶೇಖರ್

By

Published : Apr 16, 2021, 10:12 PM IST

ಬೆಂಗಳೂರು: ಸಾರಿಗೆ ಸಚಿವರನ್ನು ಭೇಟಿ ಮಾಡಲು ನಮಗೇನೂ ಮುಜುಗರ ಇಲ್ಲ. ಅವರು ಸಭೆ ಕರೆಯಲಿ ನಾವು ಭೇಟಿ ಮಾಡುತ್ತೇವೆ ಎಂದು ಸಾರಿಗೆ ನೌಕರರ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಾರ್ಚ್ ತಿಂಗಳ‌ ಸಂಬಳ ನೀಡದ ಹಿನ್ನಲೆ ಸಂಬಳ ಕೊಡಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡಬೇಕು. ನಾಳೆ ಕಾರ್ಮಿಕ ಇಲಾಖೆ ಆಯುಕ್ತರ ಕಚೇರಿಗೆ ಹೋಗುತ್ತೇವೆ. ಯಾಕೆ ಕರ್ತವ್ಯ ಲೋಪ ಮಾಡಿದ್ದೀರಾ, ಈ ಕೂಡಲೇ ಸಂಬಳದ ಆದೇಶ ಮಾಡಿ ಎಂದು ಕೇಳುತ್ತೇವೆ.

ಸಚಿವರ ಜತೆಗೆ ಮಾತುಕತೆ ನಡೆಸಲು ಮುಕ್ತ ಅಂತಾರೆ ಕೋಡಿಹಳ್ಳಿ ಚಂದ್ರಶೇಖರ್..

ನಾಳೆ 11ನೇ ದಿನದ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ. ಆತ್ಮಹತ್ಯೆ ಮಾಡಿಕೊಳ್ಳುವ ನೌಕರರ ಸಂಖ್ಯೆ ಹೆಚ್ಚಾಗುತ್ತಿದೆ. ಹಸಿದವರ ಹೊಟ್ಟೆ ಮೇಲೆ ಸರ್ಕಾರ ಪ್ರಭಾವ ಬೀರಬಾರದು. ವಜಾ, ಅಮಾನತು, ಎಫ್ಐಆರ್ ಸಮಸ್ಯೆಗೆ ಪರಿಹಾರ ಅಲ್ಲ ಎಂದಿದ್ದಾರೆ.

ಇದೇ ವೇಳೆ ರಸ್ತೆ ಸಾರಿಗೆ ನೌಕರರ ಕೂಟದ ಚಂದ್ರಶೇಖರ್ ಮಾತನಾಡಿ, ಇಂದು ಆಯಾ ಜಿಲ್ಲೆಗಳಲ್ಲಿ ಶಾಸಕರ ಮನೆಗಳಿಗೆ ತೆರಳಿ ಮನವಿ ಪತ್ರ ಕೊಟ್ಟಿದ್ದೇವೆ. ನಾಳೆಯು ನಮ್ಮ ಮುಷ್ಕರ ಮುಂದುವರೆಯಲಿದೆ.

6ನೇ ವೇತನ ಆಯೋಗಕ್ಕೆ ಒತ್ತಾಯಿಸಲಿದ್ದೇವೆ. ಸರ್ಕಾರ ನಮ್ಮ ಹೋರಾಟ ಹತ್ತಿಕ್ಕಲು ಪ್ರಯತ್ನಸುತ್ತಿದೆ. ಮಲತಾಯಿ ಧೋರಣೆ ಮಾರ್ಗ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಹತ್ತು ದಿನದ ಮುಷ್ಕರ ಹಿನ್ನೆಲೆ ಕೋಟಿ ಕೋಟಿ ಆದಾಯ ನಷ್ಟವಾಗಿದೆ.

ಕಳೆದ ಎಂಟು ದಿನಕ್ಕೆ ಸಾರಿಗೆ ಇಲಾಖೆ 152 ಕೋಟಿಯಷ್ಟು ನಷ್ಟ ಅನುಭವಿಸಿದೆ. ಇಂದು 10ನೇ ದಿನದ ಮುಷ್ಕರ ಹಿನ್ನೆಲೆ ಅಂದಾಜು 190 ಕೋಟಿ ನಷ್ಟವಾಗಿದೆ.

1) ಕೆಎಸ್​ಆರ್​ಟಿಸಿ -70 ಕೋಟಿ ರೂ.

2) ಬಿಎಂಟಿಸಿ - 20 ಕೋಟಿ ರೂ.

3) ಎನ್​ಡಬ್ಲ್ಯೂಕೆಎಸ್ಆರ್​ಟಿಸಿ- 30.5 ಕೋಟಿ ರೂ.

4) ಎನ್ಇಕೆಎಸ್ಆರ್​ಟಿಸಿ- 31.5 ಕೋಟಿ‌ ರೂ. ನಷ್ಟವಾಗಿದೆ.

ABOUT THE AUTHOR

...view details