ಬೆಂಗಳೂರು:ನಿಮಗೆ ನೀಡಿದ ಭರವಸೆ ಹುಸಿಗೊಳಿಸಿಸಲ್ಲ, ವಿಶ್ವಾಸ ದ್ರೋಹ ಮಾಡಲ್ಲ ಎಂದು ಬಿಜೆಪಿ ಸೇರಿದ ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಸಿಎಂ, ದೇಶದಲ್ಲಿ ಎಲ್ಲೂ 17 ಶಾಸಕರು ರಾಜೀನಾಮೆ ಕೊಟ್ಟ ಇತಿಹಾಸ ಇಲ್ಲ. ಈ ಅಭ್ಯರ್ಥಿಗಳ ಗೆಲುವಿನ ಹೊಣೆ ನಮ್ಮ ಮೇಲಿದೆ. ತನು, ಮನ, ಧನದಿಂದ ಅವರ ಗೆಲುವಿಗೆ ಕಾರಣಕರ್ತರಾಗಬೇಕು. ಡಿ. 5ರಂದು ಫಲಿತಾಂಶ ಬರಲಿದೆ. ನಂತರ ಈ ಎಲ್ಲಾ ಶಾಸಕರಿಗೆ ದೊಡ್ಡ ಕ್ಷೇತ್ರದಲ್ಲಿ ಸನ್ಮಾನ ಮಾಡುತ್ತೇವೆ ಎಂದಿದ್ದಾರೆ.