ಕರ್ನಾಟಕ

karnataka

ETV Bharat / state

ಚಿಂಚೋಳಿ-ಕುಂದಗೋಳ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೇ ಜಯ- ಈಶ್ವರ್ ಖಂಡ್ರೆ ಅಚಲ ವಿಶ್ವಾಸ - chincholli, Banglore, Kalburgi, by elections, Ishwar khandre, ಚಿಂಚೊಳ‍್ಳಿ, ಉಪಚುನಾವಣೆ, ಈಶ್ವರ್‍ ಖಂಡ್ರೆ,

ಲೋಕಸಭಾ ಚುನಾವಣೆ ಮತದಾನ ರಾಜ್ಯದಲ್ಲಿ ಮುಗಿದಿದೆ. ಮಹಾಘಟಬಂದನ್ ಪಕ್ಷಗಳು ಅಧಿಕಾರ ಹಿಡಿಯುವುದು ಖಚಿತ. ಹೈದರಾಬಾದ್ ಕರ್ನಾಟಕದಲ್ಲಿ ಐದಕ್ಕೆ ಐದು ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ. ರಾಹುಲ್‍ ಗಾಂಧಿ ಪ್ರಧಾನಿ ಆಗುತ್ತಾರೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭವಿಷ್ಯ ನುಡಿದಿದ್ದಾರೆ.

ಈಶ್ವರ್ ಖಂಡ್ರೆ

By

Published : May 6, 2019, 9:50 AM IST

Updated : May 6, 2019, 10:38 AM IST

ಬೆಂಗಳೂರು:ಚಿಂಚೋಳಿ ವಿಧಾನಸಭೆಯ ಉಪ ಚುನಾವಣೆಗೆ ಅಧಿಕೃತ ಪ್ರಚಾರ ಇಂದು ಆರಂಭಿಸಲಿದ್ದು, ಗೆಲುವು ನಮ್ಮದೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮುಗಿದಿದೆ. ಎರಡು ಕ್ಷೇತ್ರಗಳ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಚಿಂಚೋಳಿ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಬರುತ್ತೆ. ಕುಟುಂಬ ರಾಜಕಾರಣ ಅಂತಾ ಪಕ್ಷ ಬಿಟ್ಟು ಹೋಗಿದ್ದ ಜಾಧವ್ ಇಂದು ತಮ್ಮ ಪುತ್ರನನ್ನ ಕಣಕ್ಕೆ ಇಳಿಸಿ ಕುಟುಂಬ ರಾಜಕಾರಣ ಅವರೇ ಮಾಡುತ್ತಿರುವುದನ್ನ ಸಾಬೀತು ಮಾಡಿದ್ದಾರೆ. ಚಿಂಚೋಳಿಯಲ್ಲಿ ಕಾಂಗ್ರೆಸ್ ಅಲೆ ಇದೆ. 2018ರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ರು. ಈಗ ಉಪ ಚುನಾವಣೆಯಲ್ಲೂ ನಾವೇ ಗೆಲ್ತೀವಿ. ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‍ ಗೆಲ್ಲಲಿದೆ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಈಶ್ವರ್ ಖಂಡ್ರೆ

ಗ್ರಾಮ ಪಂಚಾಯತ್‌ವಾರು ಜವಾಬ್ದಾರಿ ಕೊಡಲಾಗಿದೆ. ಪರಮೇಶ್ವರ್, ಪ್ರಿಯಾಂಕ್​ ಖರ್ಗೆ, ಎಂ.ಬಿ ಪಾಟೀಲ್, ತುಕಾರಾಂ, ರಾಜಶೇಖರ್ ಪಾಟೀಲ್ ಸೇರಿದಂತೆ ಹಲವರಿಗೆ ಜವಾಬ್ದಾರಿ ಹಂಚಲಾಗಿದೆ. ಡಿಸಿಎಂ ಡಾ. ಜಿ. ಪರಮೇಶ್ವರ್, ಗೃಹ ಸಚಿವ ಎಂ.ಬಿ. ಪಾಟೀಲ್ ಹಾಗೂ ತಾವು ಸೇರಿದಂತೆ ಎಲ್ಲಾ ನಾಯಕರು ಸೇರಿ ಸೋಮವಾರ ಚಿಂಚೋಳಿಯಲ್ಲಿ ಪ್ರಚಾರಕ್ಕೆ ಚಾಲನೆ ಕೊಡುತ್ತೇವೆ. ಕ್ಷೇತ್ರದೆಲ್ಲೆಡೆ ಸಂಚರಿಸಿ ಪಕ್ಷದ ಪರ ಕಾರ್ಯನಿರ್ವಹಿಸಲಿದ್ದೇವೆ. ಡಿಕೆಶಿಗೆ ಜವಾಬ್ದಾರಿ ಕೊಟ್ಟಿರುವುದಕ್ಕೆ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ನಾಯಕ. ಡಿಕೆಶಿ ಅನುಭವಸ್ಥರಿದ್ದಾರೆ ಅವರ ಆಯ್ಕೆಗೆ ಅಸಮಾಧಾನ ಇಲ್ಲ ಎಂದರು.

ಲೋಕಸಭಾ ಚುನಾವಣೆ ಮತದಾನ ರಾಜ್ಯದಲ್ಲಿ ಮುಗಿದಿದೆ. ಮಹಾಘಟಬಂಧನ್ ಪಕ್ಷಗಳು ಅಧಿಕಾರ ಹಿಡಿಯುವುದು ಖಚಿತ. ಹೈದರಾಬಾದ್ ಕರ್ನಾಟಕದಲ್ಲಿ ಐದಕ್ಕೆ ಐದು ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ. ರಾಹುಲ್‍ ಗಾಂಧಿ ಪ್ರಧಾನಿ ಆಗುತ್ತಾರೆ ಅಂತಾ ಈಶ್ವರ್ ಖಂಡ್ರೆ ಭವಿಷ್ಯ ನುಡಿದರು. ಆದರೆ, ನೀವು ಸಚಿವರಾಗುತ್ತೀರಾ ಎಂಬ ಪ್ರಶ್ನೆ ಎದುರಾದಾಗ, ನಾನು ಗೆಲ್ಲುವುದು ಖಚಿತ. ಅದರ ಬಗ್ಗೆ ಈಗಲೇ ಏನೂ ಹೇಳಲ್ಲ ಅಂದರು.

ಮೋದಿ, ರಾಜೀವ್ ಗಾಂಧಿ ಬಗ್ಗೆ ಹೇಳಿಕೆ ವಿಚಾರ ಮಾತನಾಡಿ, ಇದನ್ನ ಕಾಂಗ್ರೆಸ್ ಖಂಡಿಸುತ್ತದೆ. ನಮ್ಮ ಜತೆ ಇಲ್ಲದವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವುದು ಅವರ ಸಂಸ್ಕೃತಿಯನ್ನ ತೋರಿಸುತ್ತದೆ. ಮೇ. 23ರ ಬಳಿಕ ರಮೇಶ್ ಜಾರಕಿಹೊಳಿ ಸಮಸ್ಯೆ ಬಗೆಹರಿಯುತ್ತೆ. ಅವರು ಸಹ ನಮ್ಮ ದಾರಿಗೆ ಬರ್ತಾರೆ. ಕೇಂದ್ರದಲ್ಲಿ ಎನ್‍ಡಿಎ ಅಧಿಕಾರಕ್ಕೆ ಬರಲ್ಲ ಅನ್ನುವುದು ಅವರಿಗೆ ಮನವರಿಕೆ ಆಗಲಿದೆ. ಅವರು ಪಕ್ಷ ಬಿಟ್ಟು ಹೋಗಲ್ಲ. ಇವಾಗ ಅವರು ಹೋಗುವುದಕ್ಕೆ ಅವರ ಜೊತೆಗೆ ಯಾರ್ ಇದ್ದಾರೆ? ಅವರು 23 ಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಆದರೆ, ಅದೂ ಕೂಡ ಆಗುವುದಿಲ್ಲ. ಅವರೂ ಸಹ ನಮ್ಮ ದಾರಿಗೆ ಬರ್ತಾರೆ ಎಂದರು.

ಈಶ್ವರಪ್ಪ ವಾಗ್ದಾಳಿ ವಿಚಾರ ಮಾತನಾಡಿ, ಮೊದಲು ಅವರ ಪಕ್ಷದವರನ್ನು ಸರಿ ಪಡಿಸಿಕೊಳ್ಳಲಿ. ಅವರಿಗೆ ಅವರ ಪಕ್ಷದಲ್ಲಿ ಅವರ ಸಮುದಾಯಕ್ಕೆ ಒಂದು ಟಿಕೆಟ್ ಕೊಡಿಸಲು ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ಗೃಹ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವ ವಿಚಾರ ಮಾತನಾಡಿ, ಅವರು ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡಿ ಅರೆಸ್ಟ್ ಮಾಡುತ್ತಾರೆ ಎಂದು ಬಿಜೆಪಿ ಆಪಾದನೆ ಮಾಡುತ್ತಿದೆ. ಯಾರು ಅಪರಾಧಿಯಾಗಿರ್ತಾರೋ ಅವರಿಗೆ ಶಿಕ್ಷೆ ಆಗುತ್ತೆ. ಯಾರು ತಪ್ಪು ಮಾಡಿದ್ರೂ ಕಾನೂನಿನ ಪ್ರಕಾರ ಶಿಕ್ಷೆ ಆಗುತ್ತೆ ಎಂದರು.

Last Updated : May 6, 2019, 10:38 AM IST

For All Latest Updates

ABOUT THE AUTHOR

...view details