ಕರ್ನಾಟಕ

karnataka

ETV Bharat / state

ಶ್ರೀಗಳ ಅಗಲಿಕೆ: ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನೀರವ ಮೌನ - ಶ್ರೀಗಳ ಶಿಷ್ಯರಾದ ನಾರಾಯಣಾಚಾರ್

ವಿಶ್ವೇಶ ತೀರ್ಥ ಪೇಜಾವರಶ್ರೀಗಳು ಇಂದು ಬೆಳಗ್ಗೆ ಬೃಂದಾವನಸ್ಥರಾಗಿದ್ದು, ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ. ಶ್ರೀಗಳ ನೆಚ್ಚಿನ ಮಠಗಳಲ್ಲಿ ಒಂದಾದ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಸಂಸ್ಕೃತ ಗುರುಕುಲದಲ್ಲಿ ನೀರವ ಮೌನ ಆವರಿಸಿದೆ.

We are feeling like orphans by loosing Vishweshara theertha swamiji
ಶ್ರೀಗಳನ್ನು ಕಳೆದುಕೊಂಡು ಅನಾಥಭಾವ ಕಾಡುತ್ತಿದೆ: ಶ್ರೀಗಳ ಶಿಷ್ಯ

By

Published : Dec 29, 2019, 11:43 AM IST

ಬೆಂಗಳೂರು:ವಿಶ್ವೇಶ ತೀರ್ಥ ಪೇಜಾವರ ಶ್ರೀಗಳು ಇಂದು ಬೆಳಗ್ಗೆ ಬೃಂದಾವನಸ್ಥರಾಗಿದ್ದು, ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ. ಶ್ರೀಗಳ ನೆಚ್ಚಿನ ಮಠಗಳಲ್ಲಿ ಒಂದಾಗಿರುವ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಸಂಸ್ಕೃತ ಗುರುಕುಲದಲ್ಲೀಗ ನೀರವ ಮೌನ ಆವರಿಸಿದೆ.

ಶ್ರೀಗಳನ್ನು ಕಳೆದುಕೊಂಡು ಅನಾಥಭಾವ ಕಾಡುತ್ತಿದೆ: ಶ್ರೀಗಳ ಶಿಷ್ಯ

ಪೂರ್ಣಪ್ರಜ್ಞ ವಿದ್ಯಾಪೀಠವನ್ನ ಶ್ರೀಗಳು ಜುಲೈ 27, 1956 ರಲ್ಲಿ ಸ್ಥಾಪಿಸಿದ್ದರು. ಆಗ ಶ್ರೀಗಳಿಗೆ ಕೇವಲ 25ವರ್ಷ ವಯಸ್ಸು. ಅವರು ಈ ಮಠದಲ್ಲಿ ಅವರ ಬದುಕಿನ ಹೆಚ್ಚು ಕಾಲ ಕಳೆದಿದ್ದರು. ಇಂದು ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ ಎಂದು ಶ್ರೀಗಳ ಶಿಷ್ಯರಾದ ನಾರಾಯಣಾಚಾರ್ ಕಂಬನಿ ಮಿಡಿದಿದ್ದಾರೆ.

ಅಷ್ಟೇಅಲ್ಲ, ಶ್ರೀಗಳು ಪೂರ್ಣಪ್ರಜ್ಞ ವಿದ್ಯಾಪೀಠವನ್ನ ತಮ್ಮ ಆತ್ಮ ಎಂದು ಹೇಳಿಕೊಳ್ಳುತ್ತಿದ್ದರು. ಅವರು ತಮ್ಮ ಗುರುಗಳಿಂದ ಪಡೆದುಕೊಂಡಿದ್ದ ಅಗಾದ ಜ್ಞಾನ ಪರಂಪರೆಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಮಠವನ್ನು ಸ್ಥಾಪಿಸಿದ್ದರು. ಅಲ್ಲದೇ, ಮಠದಲ್ಲಿರುವ ಮಕ್ಕಳ ಜೊತೆ ತಾಯಿ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಜೊತೆಗೆ ಪ್ರಾಧ್ಯಾಪಕರಿಗೆ ಮಾರ್ಗದರ್ಶಕರಾಗಿ ಮಕ್ಕಳ ಜೊತೆ ಯಾವ ರೀತಿ ಇರಬೇಕು ಎಂಬುದನ್ನು ಹೇಳಿಕೊಡುತ್ತಿದ್ದರು ಎಂದು ನಾರಾಯಣಾಚಾರ್​, ಶ್ರೀಗಳಿಗೆ ಹಾಗೂ ಮಠಕ್ಕಿರುವ ಅವಿನಾಭಾವ ಸಂಬಂಧವನ್ನು ಹಂಚಿಕೊಂಡರು.

ABOUT THE AUTHOR

...view details