ಬೆಂಗಳೂರು:ಹೈಕಮಾಂಡ್ ಏನು ನಿರ್ದೇಶನ ಕೊಡುತ್ತೋ ಅದನ್ನು ಪಾಲನೆ ಮಾಡ್ತೀವಿ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ವಿಧಾನಸೌಧದಲ್ಲಿ ಇಂದು ನಡೆದ ವಲಸಿಗರ ಹಾಗೂ ಸಿಎಂ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಸಭೆ ಬಳಿಕ ಸಿಎಂ ಕಚೇರಿಗೆ ಹೋಗಿ ಬಂದಿದ್ದೇವೆ. ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಅಷ್ಟೇ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂದರು.
ಈ ನಡುವೆ ಸುದ್ದಿಗಾರರು ವಲಸಿಗರ ರಾಜೀನಾಮೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವ ಭೈರತಿ ಬಸವರಾಜ್, ರಾಜೀನಾಮೆಯನ್ನು ಏಕೆ ಕೊಡಬೇಕೆಂದು ಕೆಂಡಕಾರಿದರು.
ಅದನ್ನು ಅಲ್ಲಗಳೆದ ಸುಧಾಕರ್, ಸಿಎಂ ಕಚೇರಿಗೆ ತೆರಳಿ ಅವರ ಮುಂದೆ ನಡೆಸಲಾದ ಮಾತುಕತೆ ಬಗ್ಗೆ ಪ್ರಸ್ತಾಪ ಮಾಡಿದರು. ಯಡಿಯೂರಪ್ಪನವರು ಮುಂದೆ ಪಕ್ಷ ಸಂಘಟನೆ ಮಾಡುವುದಾಗಿ ನಮ್ಮ ಮುಂದೆ ಹೇಳಿದ್ದಾರೆ. ನಾವು ಅವರ ಜೊತೆ ಇರುವುದು ನಮ್ಮ ಧರ್ಮ. ಎಲ್ಲಿಯವರೆಗೂ ಅವರು ಇರ್ತಾರೋ ನಾವು ಅಲ್ಲಿಯವರೆಗೂ ಇರ್ತೀವಿ. ನಮಗೆ ಯಾವ ಆತಂಕವೂ ಇಲ್ಲ. ಅಗತ್ಯಬಿದ್ದರೆ ದೆಹಲಿಗೂ ಹೋಗಿ ಬರ್ತೀವಿ ಎಂದರು.