ಬೆಂಗಳೂರು:ಯಲಹಂಕ ಜಂಟಿ ಆಯುಕ್ತ ಅಶೋಕ್ ವಿರುದ್ಧ ವೈದ್ಯರು ಗಂಭೀರ ಆರೋಪ ಮಾಡಿದ್ದಾರೆ. ಅಶೋಕ್ ಅವರುತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವೈದ್ಯರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ನಮಗೆ ಮಾನಸಿಕ ಹಿಂಸೆ, ಕಿರುಕುಳ ನೀಡಲಾಗುತ್ತಿದೆ: ಬಿಬಿಎಂಪಿ ಆಯುಕ್ತರಿಗೆ ವೈದ್ಯರ ಪತ್ರ - Yalahanka Joint Commissioner Ashok
ತಮಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಯಲಹಂಕ ಜಂಟಿ ಆಯುಕ್ತ ಅಶೋಕ್ ವಿರುದ್ಧ ವೈದ್ಯರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ನ ಈ ಸಂದರ್ಭದಲ್ಲಿ ವೈದ್ಯರ ಸೇವೆ ಜೊತೆಗೆ ಸಮಸ್ಯೆಗಳು ಒಂದೊಂದಾಗಿ ಹೊರ ಬರುತ್ತಿವೆ. ನಂಜನಗೂಡು ಟಿಹೆಚ್ಒ ಡಾ. ನಾಗೇಂದ್ರ ಆತ್ಮಹತ್ಯೆ ನಂತರ ಇದೀಗ ವೈದ್ಯರು ತಮಗಾಗುತ್ತಿರುವ ಮಾನಸಿಕ ಹಿಂಸೆ, ವೃತ್ತಿಯಲ್ಲಿ ಕಿರುಕುಳದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.
ಸದ್ಯ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿರುವ ಪಾಲಿಕೆ ವೈದ್ಯರು ತಮ್ಮನ್ನು ಸಭೆಯ ವೇಳೆ ಬಾಯಿಗೆ ಬಂದಂತೆ ನಿಂದಿಸಲಾಗುತ್ತಿದೆ. ಇದರಿಂದ ನಾವು ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ಹೀಗಾಗಿ, ಕೂಡಲೇ ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಹಾಯಕರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.