ಕರ್ನಾಟಕ

karnataka

ETV Bharat / state

ನಾವಿನ್ನೂ ಕಾಂಗ್ರೆಸಿಗರು, ನಮ್ಮನ್ನಾರು ಉಚ್ಛಾಟನೆ‌ ಮಾಡುತ್ತಾರೆ?: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ತಿರುಗೇಟು - ಗ್ಯಾಂಗ್ರೀನ್ ಎಂಬ ಜೆಡಿಎಸ್ ಟ್ವೀಟ್ ವಿಚಾರಕ್ಕೆ ಸಿಟ್ಟು

ರಾಜೀನಾಮೆ ನೀಡಿದ್ದರೂ ಸಹ ನಾವು ಕಾಂಗ್ರೆಸ್​ನವರೇ, ನಮ್ಮನ್ನು ಕೇಳುವ ಹಾಗೂ ಉಚ್ಚಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಅನರ್ಹ ಶಾಸಕ ಟಿ.ಸೋಮಶೇಖರ್ ಜೆಡಿಎಸ್​ ವಿರುದ್ಧ ಕೆಂಡಕಾರಿದ್ದಾರೆ.

ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್

By

Published : Sep 27, 2019, 6:48 PM IST

Updated : Sep 27, 2019, 7:34 PM IST

ಬೆಂಗಳೂರು:ನಾವಿ‌ನ್ನೂ ಕಾಂಗ್ರೆಸ್ ನಲ್ಲಿ ಇದ್ದೇವೆ, ಕಾಂಗ್ರೆಸ್ ನಿಂದ ನಮ್ಮನ್ನು ಯಾರೂ ಉಚ್ಚಾಟನೆ ಮಾಡುತ್ತಾರೆ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಗ್ಯಾಂಗ್ರೀನ್ ಎಂಬ ಜೆಡಿಎಸ್ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜೆಡಿಎಸ್ ನವರು ಅವರ ಪಕ್ಷದ ಅನರ್ಹ ಶಾಸಕರನ್ನು ಕೇಳಿಕೊಳ್ಳಲಿ, ನಮ್ಮ ತಂಟೆಗೆ ಏಕೆ ಬರುತ್ತಾರೆ. ನಮ್ಮ ಪ್ರಶ್ನೆ ಮಾಡುವ ಹಕ್ಕು ಜೆಡಿಎಸ್ ಗಿಲ್ಲ ಎಂದು ಕಿಡಿ ಕಾರಿದರು.

ಜೆಡಿಎಸ್ ನವರಿಗೆ ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ಉತ್ತರ ಕೊಡ್ತಾರೆ. ನಾವು ಕಾಂಗ್ರೆಸ್ ನವರು. ಕಾಂಗ್ರೆಸ್ ನಲ್ಲಿ ಇದ್ದೇವೆ. ನಾವು ಏನೋ ಕಿತ್ತಾಡುತ್ತೇವೆ‌. ಅದನ್ನು ಪ್ರಶ್ನೆ ಮಾಡುವವರು ಯಾರು?. ಈಗಲೂ ಕಾಂಗ್ರೆಸ್​​ ನಲ್ಲೇ ಇದ್ದೇವೆ. ಮುಂದೆನೂ ಇರುತ್ತೇವೆ. ಕಾಂಗ್ರೆಸ್ ನಮ್ಮದು. ನಮ್ಮನ್ನು ಉಚ್ಛಾಟನೆ‌ ಮಾಡುವ ಅಧಿಕಾರ ಯಾರಿಗಿದೆ ಎಂದು ತಿರುಗೇಟು ನೀಡಿದರು.

ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್
Last Updated : Sep 27, 2019, 7:34 PM IST

ABOUT THE AUTHOR

...view details