ಕರ್ನಾಟಕ

karnataka

ETV Bharat / state

ಮಂಗಳವಾರ ದೆಹಲಿಗೆ ಹೋಗ್ತೀನಿ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ: ಡಿ ಕೆ ಶಿವಕುಮಾರ್ - Karnataka assembly election

ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ದೆಹಲಿಗೆ ತೆರಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

By

Published : May 15, 2023, 11:06 PM IST

Updated : May 16, 2023, 7:57 AM IST

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರು: ನಾನು ಮಂಗಳವಾರ ದೆಹಲಿಗೆ ಹೋಗಲು ಪ್ರಯತ್ನಿಸುತ್ತೇನೆ. ಪಕ್ಷದ ಹೈಕಮಾಂಡ್ ಸಿಎಂ ಆಯ್ಕೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ನಾವೆಲ್ಲರೂ ಒಂದಾಗಿದ್ದೇವೆ ಮತ್ತು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಕರೆಯ ಮೇರೆಗೆ ಸೋಮವಾರ ಸಂಜೆಯೇ ದೆಹಲಿಗೆ ತೆರಳಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆ ಮಂಗಳವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ನನ್ನ ಆರೋಗ್ಯ ಈಗಲೂ ಸುಧಾರಿಸಿಲ್ಲ, ಆದರೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವುದೇ ನನ್ನ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆ ಮಂಗಳವಾರ ಬೆಳಗ್ಗೆಯೇ ದೆಹಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸಿಎಂ ಆಯ್ಕೆ ವಿಚಾರದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಬಯಸುವುದಿಲ್ಲ. ಸಿಎಂ ಆಯ್ಕೆಯನ್ನು ನಾನು ಪಕ್ಷದ ಹೈಕಮಾಂಡ್​ಗೆ ಬಿಟ್ಟಿದ್ದೇನೆ. ನನಗೆ ಮುಖ್ಯವಾಗಿರುವುದು ಕಾಂಗ್ರೆಸ್​ ಪಕ್ಷ ಮಾತ್ರ. 135 ಎಂಬುದು ಸಂಖ್ಯೆ ಮಾತ್ರ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಒಂದಾಗಿದ್ದೇವೆ ಮತ್ತು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ದೇವರ ದಯೆಯಿಂದ ನಮಗೆ ಉತ್ತಮ ಸಂಖ್ಯೆ ಬಂದಿದೆ: ರಾಜಕೀಯದಲ್ಲಿ ನಾವು ಗೆದ್ದಿದ್ದೇವಾ ಅಥವಾ ಸೋತಿದ್ದೇವಾ ಎಂಬುದು ಮುಖ್ಯ. ಹೇಗೆ ಗೆದ್ದಿದ್ದೇವೆ ಎಂಬುದು ಮುಖ್ಯವಲ್ಲ. ಇವತ್ತು ದೇವರ ದಯೆಯಿಂದ ನಮಗೆ ಉತ್ತಮ ಸಂಖ್ಯೆ ಬಂದಿದೆ. ಜನ ನಮ್ಮನ್ನು ನಂಬಿದ್ದಾರೆ. ಜನರ ನಂಬಿಕೆಯಿಂದ ನಾವು ಒಂದಾಗಿದ್ದೇವೆ. ಅಲ್ಲದೇ ಇವತ್ತು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರು ಹೇಳಿಕೆಯನ್ನು ನೀಡಿರುವುದು ನನಗೆ ತುಂಬಾ ಖುಷಿಯಾಗಿದೆ. ನಾನು ಕೆಲವೊಂದು ಕ್ಲಿಪ್ಪಿಂಗ್ಸ್​ ನೋಡಿದೆ. ಈ ರೀತಿಯ ಬೆಂಬಲ ಒಳ್ಳೆಯದು ಎಂದು ಹೇಳಿದರು.

ಈಗಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿತ ಶಾಸಕರು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರ ಪರವಾಗಿ ಅವರ ಸೋದರ ಹಾಗೂ ಸಂಸದ ಡಿಕೆ ಸುರೇಶ್ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮತ್ತು ನಾಯಕರು ಸಹ ತೆರಳಿದ್ದಾರೆ.

18ರಂದು ನೂತನ ಮುಖ್ಯಮಂತ್ರಿ ಪದಗ್ರಹಣ:ಮಂಗಳವಾರದಂದು ರಾಜ್ಯ ನಾಯಕರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಲಿದ್ದು, ಇದಾದ ಬಳಿಕ ಸೋನಿಯಾ ಗಾಂಧಿ ಜೊತೆ ಕೊನೆಯ ಹಂತದ ಸಭೆ ನಡೆಯಲಿದೆ. ಅಲ್ಲಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಅಂತಿಮವಾಗಲಿದೆ. ಮೇ 17 ಇಲ್ಲವೇ 18ರಂದು ನೂತನ ಮುಖ್ಯಮಂತ್ರಿ ಪದಗ್ರಹಣ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ:ಅನಾರೋಗ್ಯದ ಕಾರಣ ದೆಹಲಿ ಪ್ರವಾಸದಿಂದ ಹಿಂದೆ ಸರಿದ ಡಿ ಕೆ ಶಿವಕುಮಾರ್

Last Updated : May 16, 2023, 7:57 AM IST

ABOUT THE AUTHOR

...view details