ಬೆಂಗಳೂರು:ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಕಾವೇರಿ 1 ಹಾಗೂ 2ನೇ ಹಂತದ ನೀರು ಪೂರೈಕೆಯಾಗುವ ಪ್ರದೇಶಗಳಲ್ಲಿ ನಾಳೆ ಜುಲೈ 13 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾವೇರಿ 4ನೇ ಹಂತದ ಒಂದನೇ ಘಟ್ಟದ ಎರಡು ಪಂಪ್ಗಳನ್ನು ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗುತ್ತಿದೆ.
ಈ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ:ಈಜೀಪುರ, ಅಶೋಕನಗರ, ದೊಮ್ಮಲೂರು 2ನೇ ಹಂತ, ಎಂ. ಜಿ. ರಸ್ತೆ ಹಲಸೂರು, ಆಡುಗೋಡಿ, ಕೋರಮಂಗಲ ವಿಲೇಜ್, ಎಸ್. ಜಿ. ಪಾಳ್ಯ ಜೋಗಿ ಕಾಲೋನಿ, ವಿ.ವಿ. ಪುರ, ಟೆಲಿಕಾಂ ಲೇಔಟ್, ಪಾದರಾಯನಪುರ, ಬಸವನ ಗುಡಿ, ಗೌಡನ ಪಾಳ್ಯ, ಆರ್‌ಬಿಐ ಕಾಲೋನಿ, ಜೀವನ್ ಭೀಮಾ ನಗರ, ಹೊಸೂರು ರಸ್ತೆ, ರಾಜೇಶ್ವರಿ ನಗರ, ಕೆಂಗೇರಿ, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಬಸವೇಶ್ವರ ನಗರದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆ.ಪಿ. ಅಗ್ರಹಾರ, ರಾಘವೇಂದ್ರ ಕಾಲೋನಿ, ಟಿಪ್ಪು ನಗರ, ಚಾಮರಾಜಪೇಟೆ, ಬ್ಯಾಂಕ್ ಕಾಲೋನಿ, ಗುರುರಾಜ್ ಲೇಔಟ್, ವಿವೇಕಾನಂದ ನಗರ, ಎನ್.ಆರ್. ಕಾಲೋನಿ, ಬನಶಂಕರಿ 1ನೇ ಹಂತ, ಶಾಂತಲಾ ನಗರ, ಶಾಂತಿ ನಗರದ ಸುತ್ತಮುತ್ತ ಸರಬರಾಜು ಸ್ಥಗಿತವಾಗಲಿದೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ 1ನೇ ಹಂತ ಮತ್ತು 2 ನೇ ಹಂತ, ಇಸ್ರೋ ಲೇಔಟ್, ಲಿಯಾಸ್ ನಗರ, ರಾಜ್ಯೋತ್ಸವ ನಗರ, ವಿಠಲ್ ನಗರ, ಶಾಂತಲಾ ನಗರ, ಶಾಂತಿ ನಗರ, ವಿನಾಯಕ ನಗರ, ಆನೆಪಾಳ್ಯ, ಎಲ್.ಆರ್. ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್ ಟೌನ್, ಈಜೀಪುರ, ರಿಚ್‌ಮಂಡ್ ಟೌನ್, ಎಂ.ಜಿ. ರೋಡ್, ಬ್ರಿಗೇಡ್ ರಸ್ತೆ, ಜೆ.ಕೆ ಪುರಂ, ಎಂ.ಎ ಗಾರ್ಡನ್, ವಿಕ್ಟೋರಿಯಾ ಲೇಔಟ್, ಮಾಯಾ ಬಜಾರ್, ದೊಮ್ಮಲೂರು, ದೊಮ್ಮಲೂರು ಲೇಔಟ್, ಕಮಾಂಡ್ ಆಸ್ಪತ್ರೆ, ದೊಮ್ಮಲೂರು 2ನೇ ಹಂತ, ಎಚ್‌ಎಎಲ್, ಅಮರಜ್ಯೋತಿ ಲೇಔಟ್, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಕೇಂಬ್ರಿಡ್ಜ್ ಲೇಔಟ್, ಗೌತಮಪುರ, ಧೀನಬಂಧು ನಗರ, ರಾಜೇಂದ್ರ ನಗರ, ವೆಂಕಟಸ್ವಾಮಿ ಲೇಔಟ್, ಮಲ್ಕಪ್ಪ ಲೇಔಟ್, ನಂಜಪ್ಪ ಲೇಔಟ್, ಕೆ.ಆರ್ ನಂಜಪ್ಪ ಲೇಔಟ್, ಎನ್.ಆರ್.ಡಿ.ಐ ಕ್ಯಾಂಪಸ್, ಆಡುಗೋಡಿ, ಕಾವೇರಿ ಸಂಕಿರ್ಣ, ಪೋಲಿಸ್ ಕ್ವಾಟರ್ಸ್ ನೇತ್ರಾವತಿ 1 ರಿಂದ 10 ಬ್ಲಾಕ್‌ಗಳು, ನಂದಿ ಸಂಕೀರ್ಣದ 12 ಬ್ಲಾಕ್‌ಗಳು, ಕೋರಮಂಗಲ 6ನೇ 7ನೇ ಬಾಕ್, ಕೆ.ಆರ್.ಗಾರ್ಡನ್, ಕೆ.ಹೆಚ್. ಬಿ ಕಾಲೋನಿ, ಜಾನ್ ನಗರ, ಕೋರಮಂಗಲ ವಿಲೇಜ್, ಕೋರಮಂಗಲ 8ನೇ ಬ್ಲಾಕ್, ಎನ್.ಜಿ.ವಿ. ಜಯನಗರ 3ನೇ ಬ್ಲಾಕ್, 4ನೇ ಬ್ಲಾಕ್ ಮತ್ತು 4ನೇ ಟಿ ಬ್ಲಾಕ್, ತಿಲಕ್ ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್ , ವೆಂಕಟೇಶ್ವರ ಲೇಔಟ್, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೋನಿ, ಬೃಂದಾವನ ನಗರದಲ್ಲಿ ಕಾವೇರಿ ನೀರು ಗುರುವಾರ ಸ್ಥಗಿತವಾಗಲಿದೆ.
ಸೆಂಟ್ ಜಾನ್ಸ್ ಕ್ವಾಟರ್ಸ್, ಮಾರುತಿ ನಗರ, ಭೋವಿ ಕಾಲೋನಿ, ಟೆಲಿಕಾಮ್ ಲೇಔಟ್, ಬ್ಯಾಟರಾಯನಪುರ, ಕಸ್ತೂರ ಬಾ ನಗರ, ಗುಡ್ಡದಹಳ್ಳಿ, ಮಾರುತಿನಗರ, ಬಾಪೂಜಿ ನಗರ, ವಿ.ವಿ.ಪುರಂ, ಪಾರ್ವತಿಪುರ, ಕಲಾಸಿಪಾಳ್ಯ, ಸುಧಾಮನಗರ, ದೊಡ್ಡ ಮಾವಳ್ಳಿ, ಕೆ.ಜಿ.ನಗರ, ಶಂಕರಾಪುರಂ, ರುದ್ರಪ್ಪ ಗಾರ್ಡನ್, ವಾಲ್ಮೀಕಿನಗರ, ಅನಂತರಾಮಯ್ಯ ಕಾಂಪೌಂಡ್, ವಿಠಲ್ ನಗರ, ಆಜಾದ್ ನಗರ, ಆದರ್ಶನಗರ, ರಾಮಚಂದ್ರ ಅಗ್ರಹಾರ, ಟಿಪ್ಪುನಗರ, ಸೀತಾಪತಿ ಅಗ್ರಹಾರ, ಎನ್.ಟಿ.ಪೇಟ್, ಚಿಕ್ಕಣ ಗಾರ್ಡನ್, ವಿನಾಯಕ ಲೇಔಟ್, ಎನ್.ಜಿ. ಲೇಔಟ್, ಸಮೀರ್‌ಪುರ, ರಂಗರಾವ್ ರೋಡ್, ಡಿಸ್‌ಪೆನ್‌ಸರಿ ರೋಡ್, ಜೆ.ಜೆ.ಆರ್.ನಗರ, ರಂಗನಾಥ್ ಕಾಲೋನಿ, ಓಬಲೇಶ್ ಕಾಲೋನಿ, ರಾಯಪುರಂ, ಓಲ್ಡ್ ಗುಡ್ಡದಹಳ್ಳಿ, ವಿನಾಯಕ ನಗರ, ಮಂಜುನಾಥ್ ನಗರ, ಜನತ ಕಾಲೋನಿ, ದೇವರಾಜ್ ಅರಸ್ ನಗರ, ಸಿದ್ಧಾರ್ಥ ನಗರ, ಜಯನಗರ ಟಿ ಬ್ಲಾಕ್, 9ನೇ ಬ್ಲಾಕ್ , ಜಯನಗರ, ಜಯನಗರ 1, 2, 5, 7 ಮತ್ತು 8ನೇ ಬ್ಲಾಕ್, ಜಯನಗರ ಪೂರ್ವ, ಯಡಿಯೂರು, ಕರಿಸಂದ್ರ, ಬಿ.ಎಸ್.ಕೆ. 2ನೇ ಹಂತ, ಯರಬ್‌ನಗರ, ವೀರ ಕಾಲೋನಿ, ಬನಗಿರಿ ನಗರ, ಸಿಟೆಡ್, ಕಾವೇರಿ ನಗರ, ಭವಾನಿ ನಗರ, ಕಾಮಾಖ್ಯ ಲೇಔಟ್, ಭುವನಶ್ವರಿ ನಗರ, ಕೃಷ್ಣಪ್ಪ ಲೇಔಟ್, ಇಟ್ಟಮಡು, ಹೊಸಕೆರೆಹಳ್ಳಿ, ಮುಕಾಂಬಿಕ ನಗರ, ದತ್ತಾತ್ರಯ ನಗರ, ಪುಷ್ಪಗಿರಿ ನಗರ, ಡಿಸೋಜಾ ನಗರ, ದ್ವಾರಕ ನಗರ ಸೇರಿದಂತೆ ವಿವಿಧೆಡೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ.
ಇದನ್ನೂ ಓದಿ:ಕಾಮಗಾರಿಗಳಿಗೆ ನೀಡಿರುವ ತಡೆಯಾಜ್ಞೆ ತೆರವು ಮಾಡಿ: ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹ